
ಒಂದು ಇಂಜೆಕ್ಷನ್ ನೀಡಿ ರೂ.50 ಪಡೆದು ಸರಿಹೋಗುತ್ತೆ ಮನೆಗೆ ಹೋಗಿ ಎಂದು ಆರೋಗ್ಯ ಸಿಬ್ಬಂದಿ ಹೇಳಿದರು ಆದರೆ ಮನೆಗೆ ಹೋದ ನಂತರ ಸಮಸ್ಯೆ ಉಲ್ಬಣವಾಗಿದೆ ಮತ್ತೆ ಆಸ್ಪತ್ರೆಗೆ ಬಂದಿದ್ದೇವೆ ಆದರೆ ನಮ್ಮನ್ನು ಸ್ಪಂದಿಸುವವರು ಯಾರು ಇಲ್ಲ ಆರೋಗ್ಯ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಊದ್ನಳ್ಳಿ ಗ್ರಾಮದ ಗ್ರಾಮಸ್ಥ ಶಿವಕುಮಾರ್ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ
ಸಂಜೆಯಿಂದ ತಡರಾತ್ರಿಯಾದರೂ ಆಸ್ಪತ್ರೆಯ ಸಿಬ್ಬಂದಿ ಸ್ಪಂದಿಸಿಲ್ಲ 15 ಕಿ.ಮೀ ಗಳ ದೂರದಿಂದ ಆಸ್ಪತ್ರೆಗೆ ಬಂದಿದ್ದು ರೋಗಿಗಳನ್ನು ತಿರಸ್ಕೃತ ಭಾವದಿಂದ ಸಿಬ್ಬಂದಿ ನಡೆಸಿಕೊಳ್ಳುತ್ತಿದ್ದಾರೆ ಎಂದು ವೃದ್ಧ ಶಿವಕುಮಾರ್ ಕಣ್ಣೀರಿಡುತ್ತಾ ಹೇಳಿದರು .
ಜನವರಿ 23ರಂದು ರಾತ್ರಿ 9:00 ಸುಮಾರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಇಲ್ಲ ಎಂದು ಸಾರ್ವಜನಿಕರು ಗಲಾಟೆ ಮಾಡಲು ಮುಂದಾದರು ಕೆಲಕಾಲ ವೈದ್ಯರು ಇಲ್ಲದ ಕಾರಣ ತುರ್ತು ಪರಿಸ್ಥಿತಿಯ ರೋಗಿಗಳ ಪರದಾಟವನ್ನು ನೋಡಿದ ಸಾರ್ವಜನಿಕರು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡು ಪ್ರತಿಭಟನೆಗೆ ಮುಂದಾದರು. ಪರಿಸ್ಥಿತಿಯು ತಿಳಿಗೊಳಿಸಲು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಮನವೊಲಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ತಿಳಿಸಿದರು
ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು ಮಾತನಾಡಿ ಆಸ್ಪತ್ರೆಯಲ್ಲಿ ಸರಿಯಾದ ಸಿಬ್ಬಂದಿ ವ್ಯವಸ್ಥೆ ಇಲ್ಲ. ರಾತ್ರಿ ಪಾಳಯದ ಡಾಕ್ಟರ್ ಊಟಕ್ಕೆ ಹೋಗಿ ಒಂದು ಗಂಟೆಯಾದರೂ ಪತ್ತೆ ಇಲ್ಲ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತೆ ಆಗಿದೆ. ಆಸ್ಪತ್ರೆಯಲ್ಲಿ ನೀಡುವ ಮಾತ್ರೆಗಳು ಹಾಗೂ ಇಂಜೆಕ್ಷನ್ ಗಳನ್ನು ಹೊರಗಡೆ ತರುವಂತೆ ಹೇಳಲಾಗುತ್ತದೆ ಸರಿಯಾದ ನಿಯಮಪಾಲನೆ ಇಲ್ಲ. ರಾತ್ರಿ ಪಾಳಯದಲ್ಲಿ ಇರುವ ವೈದ್ಯರು ಹಾಗೂ ಸಿಬ್ಬಂದಿಗಳ ಮಾಹಿತಿ ನೀಡದ ಆಸ್ಪತ್ರೆ . ಈ ಕುರಿತು ಮುಖ್ಯ ವೈದ್ಯಾಧಿಕಾರಿಗಳು ಈ ಕೂಡಲೇ ಗಮನಹರಿಸಬೇಕು ಇಲ್ಲವಾದಲ್ಲಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ ನಾರಾಯಣಸ್ವಾಮಿ ಮಾತನಾಡಿ ಔಷಧಿಯನ್ನು ಹೊರಗೆ ಬರೆದುಕೊಡುತ್ತಾರೆ ಖಾಸಗಿ ಮೆಡಿಕಲ್ಸ್ ನಲ್ಲಿ ತಂದು ಕೊಡಬೇಕಾಗಿದೆ ಇಲ್ಲದೆ ಇದ್ದಲ್ಲಿ ಮೆಡಿಸನ್ ಹಾಕುವುದಿಲ್ಲ ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಆಸ್ಪತ್ರೆಗೆ ದಾಖಲಾಗಿ 15 ದಿನ ಕಳೆದಿದ್ದರೂ ಆರೋಗ್ಯದಲ್ಲಿ ಯಾವುದೇ ರೀತಿಯ ಚೇದರಿಕೆ ಇಲ್ಲದಂತಾಗಿದೆ ವೈದ್ಯರ ನಿರ್ಲಕ್ಷತೆ ಇದಕ್ಕೆ ಕಾರಣ ಎಂದು ಆರೋಪಿಸಿದರು