
ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಶ್ರೀ ರಾಮ ದೇವರಿಗೆ ದೀಪ ಬೆಳಗುವ ಮೂಲಕ ಈ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ . ಅಯೋಧ್ಯೆ ಆಚರಣೆಯನ್ನು ಗ್ರಾಮಗಳಲ್ಲಿ ಗ್ರಾಮಸ್ಥರು ಸೃಷ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಟಿ ಹೊಸಹಳ್ಳಿ ಹಾಗೂ ಸುನಘಟ್ಟಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ್ ತಿಳಿಸಿದರು
ಗ್ರಾಮಗಳಲ್ಲಿ ಟ್ರ್ಯಾಕ್ಟರ್ ನಲ್ಲಿ ಶ್ರೀರಾಮರ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ರಾಮೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು ಗ್ರಾಮದಲ್ಲಿ ಪ್ರತಿ ಮಹಿಳೆಯರು ದೀಪ ಬೆಳಗಿಸಿ ರಾಮದೇವರಿಗೆ ಆರತಿ ಮಾಡುವ ಮೂಲಕ ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮವನ್ನು ಸ್ಥಳೀಯ ಮುಖಂಡ ಗಂಗಾಧರ್ ಅವರ ನೇತೃತ್ವದಲ್ಲಿ ಆಚರಿಸಿದರು
ಈ ಸಂದರ್ಭದಲ್ಲಿ ಗಂಗಾಧರ್ ಮಾತನಾಡಿ ಈ ಹಿಂದೆ ರಾಮದೇವರ ಮಂತ್ರಾಕ್ಷತೆಯನ್ನು ಗ್ರಾಮಗಳ ಹೆಣ್ಣುಮಕ್ಕಳು ಕಳಸ ಹೊತ್ತು ಅದ್ದೂರಿಯಾಗಿ ಸ್ವಾಗತ ಮಾಡಿದ್ದರು. ಹಾಗೂ ಗ್ರಾಮಗಳ ಮುಖಂಡರಿಂದ ಮಂತ್ರಾಕ್ಷತೆಯನ್ನು ಮನೆಮನೆಗೂ ತಲುಪಿಸುತ್ತಿರುವ ಕಾರ್ಯ ನಡೆದಿತ್ತು ಇಂದು ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ಬಾಲರಾಮರ ಪ್ರಾಣ ಪ್ರತಿಷ್ಠಾಪನ ಕಾರ್ಯದ ಅಂಗವಾಗಿ ನಮ್ಮ ಟಿ ಹೊಸಹಳ್ಳಿ ಹಾಗೂ ಸುನಘಟ್ಟಹಳ್ಳಿ ಗ್ರಾಮಗಳಲ್ಲಿ ದೀಪ ಬೆಳಗಿಸಿ ಗ್ರಾಮ ದೇವರಿಗೆ ಆರತಿ ಮಾಡುವ ಮೂಲಕ ವಿಶೇಷವಾಗಿ ರಾಮೋತ್ಸವ ಆಚರಣೆ ಮಾಡಲಾಗಿದೆ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು .
ಸ್ಥಳೀಯ ಮುಖಂಡರಾದ ಮುನೇಗೌಡ ಮಾತನಾಡಿ ಇಂದಿನ ಕಾರ್ಯಕ್ರಮ ಹಿಂದು ಧರ್ಮದ ಪ್ರತಿಯೊಬ್ಬರಿಗೂ ಹೆಮ್ಮೆಯ ಹಬ್ಬವಾಗಿದೆ ರಾಮನಿಗಾಗಿ ಬೆಳಗಿರುವ ಜ್ಯೋತಿಗಳ ಬೆಳಕು ಪ್ರಕಾಶಮಾನವಾಗಿ ಜಗತ್ತಿನ ತುಂಬೆಲ್ಲಹಬ್ಬಲಿದೆ ನಮ್ಮ ಗ್ರಾಮಗಳಲ್ಲಿ ರಾಮರ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ಪ್ರತಿ ಮನೆಮನೆಗೂ ರಾಮ ಭಕ್ತಿಯ ಭಾವ ತುಂಬುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು
ಸ್ಥಳೀಯ ಗ್ರಾಮಸ್ಥರಾದ ಚಂದು ಮಾತನಾಡಿ ಪ್ರತಿ ವರ್ಷವೂ ದೀಪಾವಳಿ ಆಚರಿಸುತ್ತಿದ್ದವು ಆದರೆ ಇಂದು ವಿಶೇಷವಾಗಿ ಮನೆಯ ಮುಂದೆ ದೀಪಗಳನ್ನು ಬೆಳಗುವ ಮೂಲಕ ರಾಮೋತ್ಸವದ ಆಚರಣೆ ಮಾಡಿದ್ದೇವೆ ತುಂಬ ಸಂತೋಷ ಅನಿಸುತ್ತಿದೆ ಪ್ರತಿ ವರ್ಷವೂ ಹೀಗೆ ರಾಮೋತ್ಸವದ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು
ಸ್ಥಳೀಯ ಗ್ರಾಮಸ್ಥರಾದ ಅರುಣ ಮಾತನಾಡಿ ಸ್ಥಳೀಯ ಮುಖಂಡರ ಸಹಾಯದಿಂದ ಸಂಪೂರ್ಣ ಗ್ರಾಮಸ್ಥರು ರಾಮೋತ್ಸವದಲ್ಲಿ ಭಾಗಿಯಾಗಿದ್ದು ಸಂತಸ ಮೂಡಿದೆ ಗ್ರಾಮದಲ್ಲಿ ಎಲ್ಲರ ಒಗ್ಗಟ್ಟು ಹಬ್ಬಕ್ಕೆ ವಿಶೇಷ ಕಳೆ ತಂದಿದೆ . ಮನೆ ಮನೆಯಲ್ಲಿ ರಾಮಜಪದ ವಿಶೇಷತೆ ಮತ್ತಷ್ಟು ಸಂತಸ ತಂದಿದೆ ಎಂದರು.
ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ವಕೀಲರು ಆದ ಪ್ರತಾಪ್ ಮಾತನಾಡಿ ದೇಶದಾದ್ಯಂತ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯವನ್ನು ಹಬ್ಬದಂತೆ ಆಚರಿಸುತ್ತಿದ್ದು ಕಳೆದ ಬಾರಿ ಅಯೋಧ್ಯೆ ಶ್ರೀರಾಮ ದೇವಾಲಯದ ಮಂತ್ರಾಕ್ಷತೆಯನ್ನು ಅದ್ದೂರಿಯಾಗಿ ಸ್ವಾಗತಿಸಿ, ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಸ್ಥಳೀಯ ಗಂಗಾಧರ್, ಶಿವಕುಮಾರ್, ಮುನೇಗೌಡ ಸೇರಿದಂತೆ ಹಲವು ಮುಖಂಡರು ನೆರವೇರಿಸಿದ್ದಾರೆ. ಈ ಬಾರಿ ರಾಮರ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ದಾರೆ ಎಲ್ಲಾ ಗ್ರಾಮಸ್ಥರಿಗೂ ಶುಭವಾಗಲಿ ಎಂದು ಹಾರೈಸಿದರು
ಸುನಘಟ್ಟಹಳ್ಳಿಯ ಮುಖಂಡರಾದ ಶಿವಕುಮಾರ್ ಮಾತನಾಡಿ ಗ್ರಾಮಸ್ಥರು ಕೈಜೋಡಿಸಿರುವುದರಿಂದ ಉತ್ತಮ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾಗಿದ್ದೇವೆ . ಗ್ರಾಮದಲ್ಲಿ ಒಗ್ಗಟ್ಟು ಮೂಡಿದೆ ಗ್ರಾಮದ ಮಹಿಳೆಯರು ಶ್ರೀ ರಾಮನಿಗೆ ಭಕ್ತಿ ಭಾವಗಳಿಂದ ಸೇವೆ ಸಲ್ಲಿಸುತ್ತಿದ್ದು ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಿದ್ದೇವೆ ಮುಂದೆಯೂ ಈ ಒಗ್ಗಟ್ಟು ಹೀಗೆ ಇರಲಿ ಎಂದು ಶ್ರೀರಾಮ ದೇವರಲ್ಲಿ ಬೇಡುತ್ತೇನೆ ಎಂದರು.
ಸುನಘಟ್ಟ ಹಳ್ಳಿ ಗ್ರಾಮದ ಮಹಿಳೆಯರು ಮಾತನಾಡಿ ಗ್ರಾಮದಲ್ಲಿ ಮಂತ್ರಾಕ್ಷತೆಯನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದೆವು ಈಗ ರಾಮೋತ್ಸವವನ್ನು ದುಪ್ಪಟ್ಟು ಅದ್ದೂರಿಯಾಗಿ ಮಾಡಿದ್ದೇವೆ ಎಲ್ಲರಲ್ಲೂ ಭಕ್ತಿ ಭಾವ ತುಂಬಿದ್ದು ಶ್ರೀ ರಾಮರ ಆಶೀರ್ವಾದ ಪ್ರತಿ ಒಬ್ಬರಿಗೂ ಸಿಗಲಿ ಎಂದು ಹಾರೈಸಿದರು
ಈ ಸಂದರ್ಭದಲ್ಲಿ ಟಿ ಹೊಸಹಳ್ಳಿ ಹಾಗೂ ಸುಣ್ಣಘಟ್ಟ ಹಳ್ಳಿ ಗ್ರಾಮದ ಎಲ್ಲಾ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು