
ದೊಡ್ಡಬಳ್ಳಾಪುರ ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದಲ್ಲಿ ನಕಾಶೆ ರಸ್ತೆ ಬಿಡಲು ಒಪ್ಪದ ರೈತರಿಗೆ ಮನವೊಲಿಸಿ, ಪಥ ಬದಲಾವಣೆ ರಸ್ತೆಯನ್ನು ಕಂದಾಯ ಇಲಾಖೆ ವತಿಯಿಂದ ಮಾಡಲಾಯಿತು
ಕೆಲಕಾಲ ರೈತರ ನಡುವೆ ಮಾತಿನ ಚಕಮಕಿ ನಡೆಯಿತು . ರೈತರ ಜಟಾಪಟಿಯಿಂದ ಬೇಸತ್ತ ಕಂದಾಯ ಇಲಾಖೆ ಅಧಿಕಾರಿಗಳು ಪಥ ಬದಲಾವಣೆ ರಸ್ತೆ ಕುರಿತು ಮಾಹಿತಿ ನೀಡಿ ರೈತರ ಮನವೋಲಿಸಿದ್ದಾರೆ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಹರಸಾಹಸ ಮಾಡುವ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು ಪ್ರಾಥಮಿಕ ಹಂತ ಮುಗಿಸಿದ್ದಾರೆ.
ಸ್ಥಳೀಯ ರೈತರಾದ ನಾಗರಾಜ್ ಮಾತನಾಡಿ ನಮ್ಮದು ಪಿತ್ರಾರ್ಜಿತ ಆಸ್ತಿ ನಮ್ಮ ಆಸ್ತಿಯ ಪಕ್ಕದಲ್ಲಿ ಸುಮಾರು 200 ವರ್ಷಗಳಿಂದ ಓಣಿಗೆ ಬರುತ್ತಿದೆ . ನಕಾಶೆಯಲ್ಲಿ ತೋರುತ್ತಿರುವ ಓಣಿಯನ್ನು ನೀಲಗಿರಿ ಬೆಳೆಸಿ ಒತ್ತುವರಿ ಮಾಡಿದ್ದರು ಆ ಒತ್ತುವರಿ ಓಣಿಯನ್ನು ಬಿಡಿಸಲು 2020 ರಿಂದ ಸತತ ಪ್ರಯತ್ನ ಮಾಡುತ್ತಿದ್ದೇವೆ ತಹಶೀಲ್ದಾರ್ ಹಾಗೂ ನ್ಯಾಯಾಲಯವು ಆದೇಶ ನೀಡಿದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ರಸ್ತೆ ಬಿಡಲು ಓಪ್ಪದ ರೈತರು ತಹಶೀಲ್ದಾರ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಸರ್ವೇ ನಂಬರ್ 70 ಸರ್ಕಾರಿ ಹಳ್ಳವಾಗಿದ್ದು ಸರ್ಕಾರಿ ಜಾಗವನ್ನು ಅತಿಕ್ರಮ ಪ್ರವೇಶ ಮಾಡಲಾಗಿದೆ .ಸ್ಥಳೀಯ ಮುಖಂಡರ ಹಾಗೂ ಮಾಜಿ ಶಾಸಕರ ಬೆಂಬಲ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು ಹಾಗೂ ಇಂದು ಮಾಡುತ್ತಿರುವ ರಸ್ತೆ ನಕಾಶೆ ರಸ್ತೆ ಅಲ್ಲ ಪಥ ಬದಲಾವಣೆ ಎಂದು ರಸ್ತೆ ಮಾಡುತ್ತಿದ್ದಾರೆ ಎಂದು ತಿಳಿಸಿದರು
ಹತ್ತರಿಂದ ಹದಿನೈದು ರೈತರಿಗೆ ಸಹಾಯವಾಗುವ ರಸ್ತೆ ನಿರ್ಮಿಸಲು ಅರಸಹಾಸ ಪಡಬೇಕಾಗಿದೆ ಸರ್ಕಾರ ತನ್ನ ರಸ್ತೆ ಪಡೆಯಲು ಅತಿಕ್ರಮ ಪ್ರವೇಶಮಾಡಿರುವ ರೈತರ ಮನವೊಲಿಸಬೇಕಾಗಿದೆ ಸ್ಥಳೀಯ ಮುಖಂಡರ ಬೆಂಬಲ ಇದಕ್ಕೆ ಕಾರಣ ಇನ್ನಾದರೂ ರಸ್ತೆ ನಿರ್ಮಾಣವಾಗುವ ಮೂಲಕ ರೈತರಿಗೆ ಅನುಕೂಲವಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳೀಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.