
ದೊಡ್ಡಬಳ್ಳಾಪುರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ದಿನಾಂಕ 26-01.2024 ರಂದು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನಗರ ಭಾಗದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಆಯ್ಕೆ ಸಮಿತಿ ವತಿಯಿಂದ ಹಲವು ಸಾಧಕರಿಗೆ ಗೌರವ ಸಲ್ಲಿಸಲಾಯಿತು.
ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ರಮೇಶ್ ಸೇರಿದಂತೆ ಹಲವು ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು
ಸಾಧಕರ ಪಟ್ಟಿ ಇಂತಿದೆ:
ನಾಗರಾಜು ಸಿ ಗೌರವ ಶಿಕ್ಷಕರು, ಕ್ಷೇತ್ರ ಕಲಾ, ಡಾ. ರಮೇಶ್ ವೈದ್ಯಕೀಯ ಕ್ಷೇತ್ರ, ಅಶ್ವಥ್ ನಾರಾಯಣ್ ಶಿಕ್ಷಣ ಕ್ಷೇತ್ರ, ಕೃಷ್ಣಪ್ಪ ಸಬ್ ಇನ್ಸ್ಪೆಕ್ಟರ್ ಪೊಲೀಸ್ ಇಲಾಖೆ, ಮುನಿರಾಜು ಕನ್ನಡ ಪರ ಹೋರಾಟಗಾರರು, ಶ್ರೀಮತಿ ರೇಣುಕಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀ ಮನು. ಎಸ್ ಕ್ರೀಡಾಕ್ಷೇತ್ರ, ಶ್ರೀ ಸಿ. ಎಂ. ಸುಬ್ಬಯ್ಯ ಪೌರಾಕಾರ್ಮಿಕರು, ನಗರಸಭೆ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಡಾ. ರಮೇಶ್ ಮಾತನಾಡಿ ಸನ್ಮಾನಿಸಿ ಗೌರವಿಸಿದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಗೆ ಹಾಗೂ ತಾಲೂಕಿನ ಗಣ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ರೀತಿ ಕಾರ್ಯಕ್ರಮಗಳು ನಮ್ಮ ಜವಾಬ್ಧಾರಿ ಹಾಗೂ ಕರ್ತವ್ಯಗಳನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.