
ದೊಡ್ಡಬಳ್ಳಾಪುರ : ಕಳೆದ 25 ದಿನಗಳಿಂದ ರೈತರು ಬಿಸಿಲಿನಲ್ಲಿ ದೂಳಿನ ವಾತಾವರಣದಲ್ಲಿ ಧರಣಿ ನಡೆಸುತ್ತಿದ್ದೇವೆ . ರೈತರ ಕುರಿತು ಕಿಂಚಿತ್ತೂ ಕರುಣೆ ಇಲ್ಲದ ಕೆಐಎಡಿಬಿ ಕನಿಷ್ಠ ಸೌಜನ್ಯಕ್ಕಾದರೂ ಸ್ಪಂದಿಸಿಲ್ಲ.ರೈತರ ಫಲವತ್ತಾದ ಭೂಮಿಯೊಂದಿಗೆ ದಂಧೆಗೆ ಇಳಿದಿರುವ ಅಧಿಕಾರಿಗಳಿಗೆ ರೈತರ ನೋವು ಅರ್ಥವಾಗುತ್ತಿಲ್ಲ ಎಂದು ರೈತ ಮುಖಂಡ ಆನಂದ್ ತಮ್ಮ ನೋವನ್ನು ವ್ಯಕ್ತಪಡಿಸಿದರು .
ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಗ್ರಾಮದ ಕಾಮನ ಬಂಡೆ ( ಕಡ್ಡಿಪುಡಿ ಕಾರ್ಖಾನೆ ಸಮೀಪ) ಕೆಐಎಡಿಬಿ ವಿರುದ್ಧ ಭೂ ಸ್ವಾಧೀನ ಕುರಿತಂತೆ ಕೋನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಅದಿನಾರಾಯಣ ಹೊಸಹಳ್ಳಿ ರೈತರಿಂದ ಅನಿರ್ದಿಷ್ಟವದಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು. ಇಂದಿಗೆ 25 ದಿನಕ್ಕೆ ಕಾಲಿಟ್ಟಿದೆ
ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೇ ವೈಜ್ಞಾನಿಕ ಬೆಲೆ ನಿಗದಿಪಡಿಸದೆ ಏಕಾಏಕಿ ಭೂ ಸ್ವಾಧೀನಕ್ಕೆ ಮುಂದಾಗಿರುವುದು ಖಂಡನೀಯ .ಇದು ಬಲವಂತದ ಭೂ ಸ್ವಾಧೀನ ಪ್ರಕ್ರಿಯೆಯಾಗಿದ್ದು ಕೊನಘಟ್ಟ ಗ್ರಾಮದಲ್ಲಿ ಒಟ್ಟು 1500 ಎಕ್ಕರೆ ಜಮೀನಿದ್ದು ಲಿಂಗನ ಹಳ್ಳಿ,ಚಪ್ಪರದ ಹಳ್ಳಿ , ಕೋನಾಘಟ್ಟ ಗ್ರಾಮಗಳ ಪೈಕಿ ಸುಮಾರು 1400 ಎಕ್ಕರೆ ಜಾಗವನ್ನು ಕೆಐಎಡಿಬಿ ಪಡೆಯಲು ಮುಂದಾಗಿದ್ದಾರೆ. ನಮ್ಮ ಗ್ರಾಮದಲ್ಲಿರುವ ರೈತರು ವ್ಯವಸಾಯ ಮತ್ತು ಹೈನುಗಾರಿಕೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದು . ಈ ಭೂ ಸ್ವಾಧೀನ ಪ್ರಕ್ರಿಯೆಯಿಂದಾಗಿ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗೂ ಹೈನುಗಾರಿಕೆ ಮೇಲೆ ಅವಲಂಬಿತವಾಗಿರುವ ರೈತರು ಸಂಕಷ್ಟಕ್ಕೆ ಈಡಾಗುತ್ತಿದ್ದು . ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಎಲ್ಲೋ ಒಂದು ಕಡೆ ಕೆಐಎಡಿಬಿ ಅಧಿಕಾರಿಗಳು ಸರ್ಕಾರದ ಒತ್ತಾಯ ಮಾಡಿದ್ದು ಅವರ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಸಂಶಯ ಕಾಡುತ್ತಿದೆ ಅಧಿಕಾರಿಗಳು ರೈತರ ಪರ ಕಾರ್ಯನಿರ್ವಹಿಸಬೇಕಿದೆ. ಇದೇ ತಿಂಗಳು 12ರಂದು ಪ್ರಾರಂಭವಾಗುವ ಸದನ ಕಲಪದಲ್ಲಿ ನಮ್ಮ ರೈತರ ಸಮಸ್ಯೆಯನ್ನು ಮಂಡಿಸುವಂತೆ ತಾಲೂಕಿನ ಶಾಸಕರಾದ ಧೀರಜ್ ಮುನಿರಾಜು ರವರಿಗೆ ಮನವಿ ಸಲ್ಲಿಸಲಾಗಿದೆ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ತಿಳಿಸಲಾಗಿದ್ದು ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ . ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದ ಪಕ್ಷದಲ್ಲಿ ಮುಂದೆ ಕೆಐಎಡಿಬಿ ವಿರುದ್ದ ಕಾನೂನು ರೀತಿಯ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದರು
ರೈತರಾದ ಮೂರ್ತಿ ಮಾತನಾಡಿ ರೈತರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಸೂಕ್ತ ಬೆಲೆ ನಿಗದಿಪಡಿಸದ ಕೆಐಎಡಿಬಿ ಅಧಿಕಾರಿಗಳು ಸೂಕ್ತ ದರ ನಿಗದಿ ಮಾಡುವಲ್ಲಿ ವಿಫಲರಾಗಿದ್ದಾರೆ . ಸರಿಯಾದ ಪರಿಹಾರ ಧನವನ್ನು ನೀಡಿದ ಕೆ ಐ ಎ ಡಿ ಬಿ ಅಧಿಕಾರಿಗಳ ವಿರುದ್ಧ ಕಳೆದ 25 ದಿನಗಳಿಂದ ರೈತರು ಧರಣಿ ಆರಂಭಿಸಿದ್ದು ಇದುವರೆಗೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಿಲ್ಲ . ಸೂಕ್ತ ಪರಿಹಾರ ನೀಡದೆ ಭೂಮಿ ಕೊಡುವ ಮಾತೇ ಇಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರಾದ ನಾಗರಾಜು ಮಾತನಾಡಿ ಪಾರಂಪರಿಕವಾಗಿ ಬಂದ ಭೂಮಿಯನ್ನು ಭೂಸ್ವಾದಿನದ ಅಡಿಯಲ್ಲಿ ಸರ್ಕಾರ ಕಸಿದುಕೊಳ್ಳುತ್ತದೆ . ವ್ಯವಸಾಯ ಮಾಡುವ ಮೂಲಕ ನೂರಾರು ಜನರಿಗೆ ಕೆಲಸ ಕೊಡುತ್ತಿದ್ದೆ ಈಗ ಆ ಭೂಮಿಯೇ ಇಲ್ಲದಂತಾಗಿದೆ. ನೀಡುವುದಾದರೆ ಸೂಕ್ತ ಪರಿಹಾರ ನೀಡಿ ಇಲ್ಲವಾದರೆ ಭೂಮಿಯನ್ನು ಕೈಬಿಡಿ ಹೈನುಗಾರಿಕೆನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದೇನೆ ಹಸುಗಳಿಗೆ ಮೇವು ಬೆಳೆಯಲು ಕೂಡ ಜಾಗ ಇಲ್ಲದಂತಾಗಿದೆ. ನಮ್ಮ ಭೂಮಿಯು ಇಲ್ಲದೆ ಅತ್ತ ಸೂಕ್ತ ಪರಿಹಾರವೂ ಇಲ್ಲದಂತಾಗಿದೆ ನಮ್ಮ ಗೋಳು ಯಾರಬಳಿ ಹೇಳಬೇಕೆಂಬುದೇ ಅರ್ಥವಾಗುತ್ತಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು
ನಾಗರಾಜ್ ಆದಿನಾರಾಯಣ ಹೊಸಹಳ್ಳಿ,ಯಶವಂತ್ ಕೊನಘಟ್ಟ ,ಮಂಜುನಾಥ ಕೂನಘಟ್ಟ,ರಮೇಶ ಕೋಡಿಹಳ್ಳಿ,ರಾಮಣ್ಣ ಕೊನಘಟ್ಟ ,ಆನಂದ್ ಕೊನಘಟ್ಟ ,ಚಿಕ್ಕಮುನಿಯಪ್ಪ ಕೊನಘಟ್ಟ, ಪಿಳ್ಳಣ್ಣ ಕೋಡಿಹಳ್ಳಿ , ಮತ್ತಿತರು ಉಪಸ್ಥಿತರಿದ್ದರು