
ಯಶವಂತಪುರ ವಿಧಾನಸಭಾ ಕ್ಷೇತ್ರದ ಗೊಲ್ಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ರವರಿಂದ “ಗ್ರಾಮ ಚಲೋ ಅಭಿಯಾನಕ್ಕೆ”ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಿ ಶ್ರೀ ನರೇಂದ್ರಮೋದಿ ಜೀ ಅವರ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡ ಜೀ ಅವರುಗಳ ಅಪೇಕ್ಷೆಯಂತೆ ಫೆಬ್ರವರಿ 9 ರಿಂದ 11 ರವರೆಗೆ 3 ದಿನಗಳ ಕಾಲ ನಡೆಯಲಿರುವ “ಗ್ರಾಮ ಚಲೋ ಅಭಿಯಾನಕ್ಕೆ” ಯಶವಂತಪುರ ವಿಧಾನಸಭಾ ಕ್ಷೇತ್ರದ ಗೊಲ್ಲಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ರಾಜ್ಯದ 28 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ, 19 ಸಾವಿರ ನಗರ ಮಟ್ಟದ ಬೂತ್ ಗಳಲ್ಲಿ 42 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಿ ‘ಮೋದಿ ಮತ್ತೊಮ್ಮೆ’ ಗೋಡೆ ಬರಹ ದೊಂದಿಗೆ,
ಪ್ರಧಾನಿ ಮೋದಿಜೀ ಅವರ ಕನಸು 2047 ರ ಹೊತ್ತಿಗೆ ಭಾರತ ವಿಕಸಿತ ಭಾರತವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು, ಸಾಧನೆಗಳು ಹಾಗೂ ಜನಕಲ್ಯಾಣ ಕಾರ್ಯಕ್ರಮಗಳನ್ನು ಮನೆ ಮನೆಗಳಿಗೆ ತಲುಪಿಸಿ ಮಗದೊಮ್ಮೆ ಮೋದಿಜೀ ಅವರನ್ನು ಪ್ರಧಾನಿ ಪಟ್ಟಕ್ಕೇರಿಸುವ ಸಂಕಲ್ಪವಾಗಿದೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಏನ್. ಎಸ್. ನಂದೀಶ , ಶಾಸಕರು ಹಾಗೂ ರಾಜ್ಯ ಕಾರ್ಯದರ್ಶಿ ಶ್ರೀ ಶೈಲೇಂದ್ರ ಬೆಲ್ದಾಳೆ, ಶ್ರೀ ವಿನಯ್ ಬಿದ್ರೆ , ಶ್ರೀ ಶರಣು ತಳ್ಳೀಕೆರೆ, ಜಿಲ್ಲಾಧ್ಯಕ್ಷರಾದ ಶ್ರೀ ಎಸ್.ಹರೀಶ್, ಮುಖಂಡರಾದ ಶ್ರೀ ಅನಿಲ್ ಚಳಗೇರಿ, ಶ್ರೀ ಎಂ.ರುದ್ರೇಶ್, ಶ್ರೀ ಎಂ.ರಂಗರಾಜು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.