
ದೊಡ್ಡಬಳ್ಳಾಪುರ: 9ನೇ ತರಗತಿ ವಿದ್ಯಾರ್ಥಿಗೆ ಕಳ್ಳಿ ಹಾಲು ಕುಡಿಸಿ ಕೊಲೆ ಯತ್ನ ಮಾಡಲಾಗಿದ್ದು, ವಸತಿ ಶಾಲಾ ಸಿಬ್ಬಂದಿಯ ವೈಫಲ್ಯವೇ ಈ ಘಟನೆಗೆ ಕಾರಣವಾಗಿದೆ ಎಂದು ಸಾಮಾಜಿಕ ಹೋರಾಟಗಾರರಾದ ಭಾಸ್ಕರ್ ಪ್ರಸಾದ್ ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು, 9ನೇ ತರಗತಿ ವಿದ್ಯಾರ್ಥಿ ನಾಗಾರ್ಜುನ ಕಳ್ಳಿ ಹಾಲು ಸೇವನೆಯಿಂದ ತೀರ್ವ ಅಸ್ವಸ್ಥಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಸದ್ಯ ಬಾಲಕನನ್ನು 48 ಗಂಟೆಗಳ ಅಬ್ಸರ್ವೇಷನ್ನಲ್ಲಿ ಇಡಲಾಗಿದ್ದು, ಗಂಟಲು, ರಕ್ತ, ಶ್ವಾಸಕೋಶ ಹಾಗೂ ಸಣ್ಣ ಕರುಳಿನಲ್ಲಿ ನಂಜು ಹರಡಿದ್ದು ಬಾಲಕನ ಸ್ಥಿತಿ ಗಂಭೀರವಾಗಿದೆ.
ಈ ಕುರಿತು ಸುದ್ಧಿಗಾರರೊಂದಿಗೆ ಭಾಸ್ಕರ್ ಪ್ರಸಾದ್ ಮಾತನಾಡಿ ಶಾಲಾ ಸಿಬ್ಬಂದಿ ಘಟನೆಯನ್ನು ಮುಚ್ಟಿಟ್ಟು ವಿದ್ಯಾರ್ಥಿಯ ಜೀವಕ್ಕೆ ಕುತ್ತು ತಂದಿದ್ದಾರೆ,ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್ ಮತ್ತು ಆರೋಗ್ಯ ಸಹಾಯಕಿಯ ವಿರುದ್ಧ ಕೊಲೆ ಯತ್ನ ಆರೋಪದ ಮೇಲೆ ದೂರು ನೀಡಲಾಗಿದೆ.ಅಸ್ವಸ್ಥಗೊಂಡಿರುವ ಬಾಲಕ ನಾಗಾರ್ಜುನ ನನ್ನ ತಂಗಿಯ ಮಗ, ನಾಲ್ಕು ದಿನಗಳ ಹಿಂದೆ ವಸತಿ ಶಾಲೆಯವರು ನನಗೆ ಫೋನ್ ಕರೆ ಮಾಡಿ, ನಾಗಾರ್ಜುನನಿಗೆ ಜ್ವರ ಮತ್ತು ಗಂಟಲು ನೋವಿ ನರಳುತ್ತಿದ್ದಾನೆ, ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು, ಮನೆಗೆ ಕಳೆದುಕೊಂಡ ಬಂದ ನಂತರ ಬಾಲಕನ ಸ್ಥಿತಿ ತೀರ್ವ ಗಂಭೀರವಾಗಿದ್ದು ತಕ್ಷಣವೇ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಅಸ್ವಸ್ಥಗೊಂಡ ನಾಗಾರ್ಜುನನ್ನು ಕೇಳಿದ್ದಾಗ ಸ್ನೇಹಿತರು ಕಳ್ಳಿ ಹಾಲನ್ನು ಬಲವಂತ ಮಾಡಿ ಕುಡಿಸಿದ್ದಾರೆಂದು ಹೇಳಿದ್ದಾನೆ, ಹಾಸ್ಟೇಲ್ ನ ಪುಂಡ ಹುಡುಗರು ನಾಗಾರಾಜುನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು, ಇಷ್ಟೇ ಅಲ್ಲದೆ ಖಾಸಗಿ ಭಾಗವನ್ನು ಆತನ ಬಾಯಿಗೆ ಇಟ್ಟು ಕಿರುಕುಳ ನೀಡುತ್ತಿದ್ದರಂದು ತಿಳಿಸಿದ್ದಾನೆ. ಈ ಹಿನ್ನಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.