
ದೊಡ್ಡಬಳ್ಳಾಪುರ.ವಿಜಯಮಿತ್ರ :ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯಿಂದ ಕೊಡಮಾಡುವ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಅಂದರೆ ನ್ಯಾಷನಲ್ ಕ್ವಾಲಿಟಿ ಅಶುರೆನ್ಸ್ ಸ್ಟಾಂಡರ್ಸ್ ( NQAS) ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ದೊಡ್ಡಬಳ್ಳಾಪುರದ ತಾಯಿ-ಮಗು ಆಸ್ಪತ್ರೆ( ಸಾರ್ವಜನಿಕ ಆಸ್ಪತ್ರೆ) ಸಿಬ್ಬಂದಿ ಪಡೆಯುವ ಮೂಲಕ ತಾಲ್ಲೂಕಿನ ಹೆಮ್ಮೆ ಹೆಚ್ಚಿಸಿದ್ದಾರೆ.
ರೋಗಿಗಳಿಗೆ ಚಿಕಿತ್ಸೆ ನೀಡುವಾಗ ನಿಗದಿತ ಮಾರ್ಗಸೂಚಿಗಳನ್ನು ಅನುಪಾಲನೆ ಮಾಡುವುದು, ದಾಖಲೆಗಳನ್ನು ನಿರ್ವಹಿಸುವುದು, ವರದಿ ಸಲ್ಲಿಸುವುದು, ಸೂಕ್ತ ಸಮಯದಲ್ಲಿ ರೆಫರ್ ಮಾಡುವುದು ಮುಂತಾದ ಅಂಶಗಳನ್ನು ಆಧರಿಸಿ ರಾಜ್ಯ ಮಟ್ಟದ ತಂಡವು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಂತರಿಕ ಮೌಲ್ಯ ಮಾಪನ ಮಾಡುವ ಮೂಲಕ ಈ ಪ್ರಶಸ್ತಿ ನೀಡಲಾಗುವುದು..
ಇಂದು (ಜೂನ್. 28) ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ರಾಜ್ಯ ಸಚಿವ ಪ್ರತಾಪ್ ರಾವ್ ಗಣಪತ್ ರಾವ್ ಜಾದವ್ ಹಾಗೂ ಅನುಪ್ರಿಯ ಪಾಟೀಲ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಮೇಶ್, ಡಾ.ಮಂಜುನಾಥ್ ಸಿಸ್ಟರ್ ಭವ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು.
ರಾಜ್ಯದಿಂದ ಪ್ರಶಸ್ತಿಗೆ ಆಯ್ಕೆಯಾದ ಉಳಿದ ಆಸ್ಪತ್ರೆಗಳು:
ಶಿವಮೊಗ್ಗದ ಜಿಲ್ಲಾಸ್ಪತ್ರೆ ಮೆಗ್ಗಾನ್.ಯುಸಿಎಚ್.ಸಿ ಶ್ರೀರಾಮಪುರಂ ಎಎಎಂ ತೋರದೇವನದಹಳ್ಳಿ.