
ದೊಡ್ಡಬಳ್ಳಾಪುರ : ನಗರದಲ್ಲಿ ಮೂರು ದಿನಗಳ “ಬೃಹತ್ ಕೇಸರಿ ಹಬ್ಬ “ವನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡದ ವತಿಯಿಂದ ಆಯೋಜನೆ ಮಾಡಲಾಗಿದೆ.
ಜೂನ್ 29 ರಂದು ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಮಹಾ ಸುದರ್ಶನ ಹೋಮ. ಶ್ರೀರಾಮ ತಾರಕ ಹೋಮ, ಶ್ರೀ ಮಹಾಗಣಪತಿ ಹೋಮ, ಶ್ರೀ ನವಗ್ರಹಶಾಂತಿ ಹೋಮ, ಶ್ರೀ ಮೃತ್ಯುಂಜಯ ಶಾಂತಿ ಹೋಮ, ಶ್ರೀ ಮಹಾಗ್ರಾಮದೇವತೆ ಶಾಂತಿ ಹೋಮ ಶ್ರೀ ಮಹಾಪೂರ್ಣಾಹುತಿ ಹೋಮ ನೆಡೆಯಿತು ಹಾಗೂ ಮತ್ತು ಮಧ್ಯಾಹ್ನ ಮಧ್ಯಾಹ್ನ ನೂರಾರು ಮಹಿಳೆಯರಿಂದ ‘ಲಲಿತ ಸಹಸ್ರನಾಮ ಮತ್ತು ಹನುಮಾನ್ ಚಾಲೀಸ್’ ಸಾಮೂಹಿಕ ಪಠಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.ಸಂಜೆ “ಕಲ್ಯಾಣೋತ್ಸವ” ಹಾಗೂ ರಾತ್ರಿ ಮಹಾಮಂಗಳಾರತಿ ಸೇರಿದಂತೆ ಮಾತೆಯರಿಂದ ಗೋ ಆರತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಇಂದು (ಜೂನ್ 30)ಬೃಹತ್ ಶ್ರೀರಾಮ ಶೋಭಾಯಾತ್ರೆ ನಡೆಯಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳ ಮೂಲ ಶೋಭಾಯಾತ್ರೆ ಮೆರವಣಿಗೆ ಸಾಗಲಿದ್ದು, ಮೆರವಣಿಗೆಯಲ್ಲಿ ಡಿಜೆ ಸಂಗೀತ ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ, ಮಧ್ಯಾಹ್ನ 1 ಗಂಟೆ ಸುಮಾರಿಗೆ ನಗರದ ಭಗತ್ ಸಿಂಗ್ ಕ್ರೀಡಾಂಗಣದಿಂದ ಹೊರಡುವ ಶೋಭಾಯಾತ್ರೆ ತಾಲೂಕು ಕಚೇರಿ ಮೂಲಕ ಹೊರಟು ಬಸ್ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಲಕ್ಷ್ಮೀ ಟಾಕಿಸ್ ಮಾರ್ಗವಾಗಿ ತೇರಿನಬೀದಿ ಸರ್ಕಲ್, ಹಳೇ ಮಾರ್ಕೆಟ್ ಶಾಲೆ,ಕಾಳಮ್ಮ ದೇವಸ್ಥಾನ, ಅಂಜಿನಪ್ಪ ಸಿಲ್ಕ್ ಹೌಸ್, ಕಲ್ಲುಪೇಟೆ, ಸ್ವಾಮಿ ವಿವೇಕಾನಂದ ಮಾರ್ಗವಾಗಿ ಭಗತ್ ಸಿಂಗ್ ಕ್ರೀಡಾಂಗಣಕ್ಕೆ ಬರಲಿದೆ. ಬೃಹತ್ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತಕ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಕಟ್ಟರ್ ಹಿಂದೂ ವಾಗ್ನಿ ಶ್ರೀಕಾಂತ್ಶೆಟ್ಟಿ ಕಾರ್ಕಳ ದಿಕ್ಕೂಚಿ ಭಾಷಣವನ್ನು ಮಾಡಲಿದ್ದಾರೆ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಭಾರತ ಮಾತೆ, ತಾಯಿ ಭುವನೇಶ್ವರಿದೇವಿ, ಶ್ರೀರಾಮ, ಹನುಮ.ಶಿವ ಪ್ರತಿಮೆಗಳನ್ನು, ವಿವಿಧ ವಾದ್ಯಗಳ ತಂಡಗಳೊಂದಿಗೆ ಭವ್ಯ ಮೆರವಣಿಗೆ ಮಾಡಲಾಗುತ್ತದೆ ಎಂದು ವಿಶ್ವ ಹಿಂದು ಪರಿಷದ್ ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡ ಪ್ರಮುಖರು ತಿಳಿಸಿದ್ದಾರೆ.
ವಿಶೇಷ ಕಾರ್ಯಕ್ರಮ
ಶೋಭಾ ಯಾತ್ರೆಯ ನಂತರ ಲೇಸರ್ ಶೋ, ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿ ಮದ್ದು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.