
ದೊಡ್ಡಬಳ್ಳಾಪುರ : ಅಕ್ಟೋಬರ್ 26ರಂದು ನಡೆದ ವಿಎಎಸ್ಎಸ್ಎನ್ ಚುನಾವಣೆಯಲ್ಲಿ ಮೈತ್ರಿ ಧರ್ಮಪಾಲನೆಯಾಗಿಲ್ಲ ಜೆಡಿಎಸ್ನ ಹೈಕಮಾಂಡ್ ಸ್ಥಳೀಯ ನಾಯಕರಿಗೆ ಮೈತ್ರಿ ಪಾಲನೆ ಮಾಡುವಂತೆ ಸೂಚನೆ ನೀಡಿದ್ದರು ಸ್ಥಳೀಯ ಜೆಡಿಎಸ್ ನಾಯಕರು ಮೈತ್ರಿ ಉಲ್ಲಂಘನೆ ಮಾಡಿರುವುದು ಮೇಲ್ನೋಟಕೆ ಕಂಡುಬಂದಿದೆ ಎಂದು ಬಿಜೆಪಿ ಮುಖಂಡ ಮಂಜುನಾಥ್ ತಿಳಿಸಿದರು.
ದೊಡ್ಡತೂಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತುಮಕೂರು ವಿಎಎಸ್ಎಸ್ಎನ್ ಚುನಾವಣೆ ಕುರಿತು ನಗರದ ಪ್ರವಾಸಿಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರ ಜೆಡಿಎಸ್ ಮುಖಂಡ ಹರೀಶ್ ಗೌಡ ಮಾತನಾಡಿ, ಜೆಡಿಎಸ್ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಹೈಕಮಾಂಡ್ ಸೂಚನೆಯನ್ನ ಪಾಲನೆ ಮಾಡದೇ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ನಿಮ್ಮರಾಜಕಾರಣ ನಡೆ ನಮಗೆ ಅರ್ಥವಾಗುತ್ತಿಲ್ಲ. ನೀವು ಡಬಲ್ ಸ್ಯಾಂಡ್ ರಾಜಕಾರಣಿಯಾಗುತ್ತಿದ್ದೀರ.ಒಮ್ಮೆ ಮೈತ್ರಿಗೆ ಬೆಂಬಲ ಕೊಡುವ ನೀವು ಮತ್ತೆ ಮೈತ್ರಿ ಉಲ್ಲಂಘನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ.. ಎಂದರು.
ನಂತರ ದೊಡ್ಡತೂಮಕೂರು ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್ ನಾವು ವಿಎಎಸ್ಎಸ್ಎನ್ ಚುನಾವಣೆ ಆಸಕ್ತಿ ವಹಿಸರಿಲಿಲ್ಲ. 4 ಸ್ಥಾನಕ್ಕೆ ಹೊಂದಾಣಿಕೆ ಮಾಡಿಕೊಂಡು ತಟಸ್ಥವಾಗಿರುವುದಕ್ಕೆ ನಮ್ಮ ನಿಲುವು ಇತ್ತು. ಈ ಚುನಾವಣೆ ಕುರಿತು ಶಾಸಕರು ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡು ಸೊಸೈಟಿ ಅಭಿವೃದ್ದಿ ಮಾಡಿ ಎಂದು ಭರವಸೆ ನೀಡಿದ್ದರು. ಆದರೆ, ಕೊನೆಯಲ್ಲಿ ಚುನಾವಣೆ ಪ್ರಕ್ರಿಯೆಗೆ ಶುರು ಮಾಡಿದ್ದೇ ಕಾಂಗ್ರೆಸ್ ನವರು. ಆ ಸಮಯದಲ್ಲೂ ನಾವು ಹೊಂದಾಣಿಕೆ ಮುಂದಾದರು ಅವರು ಅದಕ್ಕೆ ಸಹಕರಿಸಲಿಲ್ಲ. ಈ ಹಂತದಲ್ಲಿ ತಾಲ್ಲೂಕಿನ ಶಾಸಕರು ಚುನಾವಣೆ ಸಂಬಂಧಪಟ್ಟಂತೆ ಪ್ರತಿಭಟನೆ ನಡೆಸಿ ನ್ಯಾಯ ಕೇಳಿದ್ದಾರೆ ಅಷ್ಟೇ. ಈ ಬಗ್ಗೆ ಚುಂಚೇಗೌಡರು ಹಾಗೂ ಹರೀಶ್ ಗೌಡರು ಶಾಸಕರ ವಿರುದ್ಧ ಇಲ್ಲಸಲ್ಲದ ಅರೋಪ ಹೊರೆಸಿ ಅಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡತುಮಕೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಚುನಾವಣೆ ನಡೆಸುವ ಉದ್ದೇಶದಿಂದ ಕೋರ್ಟ್ ಮೇಟ್ಟಿಲು ಏರಿರುವುದು ಮೊದಲು ಕಾಂಗ್ರೆಸ್ ಪಕ್ಷದವರು ಆಮೇಲೆ ನಾವು ಚುನಾವಣೆಗೆ ಹೋಗಬಾರದೆಂದು ಕೋರ್ಟ್ ಆದೇಶ ತಂದಿದ್ದಾರೆ. ನ್ಯಾಯಯುತವಾಗಿ ಚುನಾವಣೆ ನಡೆಸಿ ವಿಎಎಸ್ಎಸ್ಎನ್ ಅಭಿವೃದ್ಧಿ ಮಾಡುವ ಉದ್ದೇಶವಿದ್ದರೇ, ನಿಮಗೆ ನಾವೇ ಗೌರವದಿಂದ ನಡೆದುಕೊಳ್ಳುತ್ತಿದೆವು ಎಂದು ಚುಂಚೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾವು ಅಂದು ಪ್ರತಿಭಟನೆ ಮಾಡಿದ್ದು ಮತ ಏಣಿಕೆ ನಡೆಸಬೇಕೆಂದು ಆದರೆ ಅದನ್ನು ಅಪಪ್ರಚಾರ ಮಾಡುತ್ತಿದೀರಿ ನಾವು ತಪ್ಪು ನಡೆದಿದ್ದರೇ ಕ್ಷಮೆ ಕೇಳುತ್ತಿದ್ದೆವೆ ನಿಮ್ಮಿಂದ ತಪ್ಪು ನಡೆದಿದ್ದರೆ ಕ್ಷಮೆ ಕೇಳುವುದು ಬೇಡ ಆದರೆ ಇನ್ನು ಮುಂದೆ ಆದರೂ ಬೇರೆ ಸೊಸೈಟಿಗಳಲ್ಲಿ ಈ ರೀತಿಯಾಗದೆ ನೋಡಿಕೊಳ್ಳಿ ಎಂದರು.
ಈ ವೇಳೆ ದೊಡ್ಡತುಮಕೂರು ಗ್ರಾಮದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.