
ಸರ್ಜಾಪುರ – ಮಾರತಹಳ್ಳಿ ಮಾರ್ಗದ ಹುಸ್ಕೂರು ಗೇಟ್ ಬಳಿ ಅಪರಿಚಿತ ವ್ಯಕ್ತಿ ಸಾವಿಗೆ ಶರಣಾಗಿರುವ ಘಟನೆ ನೆಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಓರ್ವ ಆಟೋ ಚಾಲಕನಾಗಿದ್ದು, ತಾಲ್ಲೂಕಿನ ಹುಸ್ಕೂರು ಗೇಟ್ ಬಳಿ ರೈಲಿಗೆ ಸಿಲುಕಿ ಸಾವನಪ್ಪಿದ್ದಾಗಿ ತಿಳಿದುಬಂದಿದೆ.
ಮೃತಪಟ್ಟ ವ್ಯಕ್ತಿಯು ಆಟೋ ಚಾಲಕರ ಸಮವಸ್ತ್ರ ಧರಿಸಿದ್ದು, ಮೃತ ವ್ಯಕ್ತಿಯ ಸಮೀಪದಲ್ಲಿ ಆಟೋ(KA01A P1242)ಒಂದು ಪತ್ತೆಯಾಗಿದೆ. ಸಂಬಂಧಪಟ್ಟ ವಾರಸುದಾರರು ಕೂಡಲೇ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.
ಆಟೋ ಚಾಲಕರ ಆತ್ಮಹತ್ಯೆ ಕುರಿತು ಬೆಂಗಳೂರು ಆಟೋ ಸೇನೆ ರಾಜ್ಯಾಧ್ಯಕ್ಷ ಚೇತನ್ ಮಾತನಾಡಿ ಆಟೋ ಚಾಲಕರ ಈ ಸ್ಥಿತಿ ತುಂಬಾ ನೋವನ್ನುಂಟು ಮಾಡಿದೆ . ಮೃತವ್ಯಕ್ತಿಯ ಸಂಬಂಧಿಕರ ಕುರಿತು ಯಾವುದೇ ರೀತಿಯ ಮಾಹಿತಿ ದೊರೆತಿಲ್ಲ, ಸಂಬಂಧಪಟ್ಟ ವ್ಯಕ್ತಿಗಳು ಕೂಡಲೇ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಮನವಿ ಮಾಡಿದ್ದಾರೆ.