
ದೊಡ್ಡಬಳ್ಳಾಪುರ, ( ವಿಜಯಮಿತ್ರ ) : 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರಸ್ತೆ ನಿಗಮ ದೊಡ್ಡಬಳ್ಳಾಪುರ ಘಟಕ ಹಾಗೂ ಕನ್ನಡ ಕ್ರಿಯಾ ಸಮಿತಿ ದೊಡ್ಡಬಳ್ಳಾಪುರ ಇವರ ಸಹಯೋಗದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ವಿ. ಬಸವರಾಜು ಮಾತನಾಡಿ ಕನ್ನಡ ಭಾಷೆಯನ್ನು ಶೇಕಡಾ 100ರಷ್ಟು ನಮ್ಮ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಬಳಸುತ್ತಿದ್ದೇವೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ನಮ್ಮ ಚಾಲಕರು ಹಾಗೂ ಸಿಬ್ಬಂದಿವರ್ಗ ಸದಾ ಕನ್ನಡ ಭಾಷೆ ಪರವಾದ ಧ್ವನಿಯಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನಿಯ ಎಂದರು.
ಇಂದು ಚಿಕ್ಕಬಳ್ಳಾಪುರ ವಿಭಾಗೀಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ತುಂಬಾ ಅಚ್ಚುಕಟ್ಟಾಗಿ 69 ನೇ ಕನ್ನಡ ರಾಜ್ಯೋತ್ಸವವನ್ನು ಆಯೋಜನೆ ಮಾಡಿ ನಮ್ಮನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ, ಕಾರ್ಯಕ್ರಮ ತುಂಬಾ ಚನ್ನಾಗಿ ಮೂಡಿಬಂದಿದ್ದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ವಿಭಾಗಿಯ ತಾಂತ್ರಿಕ ಅಭಿಯಂತರರಾದ ಸಿ ಮಲ್ಲಿಕಾರ್ಜುನ, ವಿಭಾಗಿಯ ಸಂಚಲನಾಧಿಕಾರಿ ಎ ಮಂಜುನಾಥ, ವಿಭಾಗಿಯ ಸಂಖ್ಯಾಧಿಕಾರಿ ಜೆ. ಬಿ ಶಶಿಧರ, ಸಹಾಯಕ ಆಡಳಿತ ಅಧಿಕಾರಿ ಗುರು ಶಾಂತ, ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ಜಿ. ಶಾಂತ, ಸಹಾಯಕ ಕಾನೂನು ಅಧಿಕಾರಿ ಚೆನ್ನನಗೌಡ, ಸಹಾಯಕ ಲೆಕ್ಕಾಧಿಕಾರಿ ಎಚ್ ಎಚ್ ದಿನೇಶ, ಸೇರಿದಂತೆ ಕನ್ನಡ ಕ್ರಿಯಾ ಸಮಿತಿಯ ಸರ್ವ ಸದಸ್ಯರು , ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.