
ದೊಡ್ಡಬಳ್ಳಾಪುರ : ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಮೂಲಕ ಮುನೇಶ್ವರ ಸ್ವಾಮಿ ದೇವಾಲಯದ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಮೂಲಕ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಶ್ರೀ ಗಂಗಾಪರಮೇಶ್ವರಿ ದೇವಿ ಸೇವಾ ಅಭಿವೃದ್ಧಿ ಸಮಿತಿ ಟ್ರಸ್ಟ್ ನ ಯುವಕರು ಆರೋಪಿಸಿದರು.
ಈ ಕುರಿತು ಸ್ಥಳೀಯರಾದ ಮುನಿರಾಜು ಮಾತನಾಡಿ ಕಸಬಾ ಹೋಬಳಿ ರೋಜಿಪುರ ಗ್ರಾಮ ಸರ್ವೆ ನಂಬರ್ 92 ರಲ್ಲಿ 0.23 ಗುಂಟೆ ಖರಾಬು ಹೂವಿನ ತೋಟ ಎದ್ದಿದ್ದ ಸದರಿ ಜಾಗದಲ್ಲಿ ಅನಾಧಿ ಕಾಲದಿಂದಲೂ ದಲಿತ ಕುಟುಂಬದವರು ಸುಮಾರು ವರ್ಷಗಳಿಂದ ಶ್ರೀ ಮುನೇಶ್ವರ ಸ್ವಾಮಿ ದೇವರ ಪೂಜೆ ನೆಡೆಸಿಕೊಂಡು ಬರುವುದಲ್ಲದೇ ದೇವಾಲಯದಲ್ಲಿ ಮುಡಿ ಕಾರ್ಯ ಹಾಗೂ ಯುಗಾದಿ ಹಬ್ಬದಂದು ವಿಶೇಷ ಪೂಜಾ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ ಆದರೆ ಸರ್ವೇ ನಂ 92ರ ಸರ್ಕಾರಿ ಖರಾಬು ಜಾಗವು ಪ್ರಸ್ತುತ ವೀರಪ್ಪ ಶೆಟ್ಟಿ ಎಂಬುವರ ಹೆಸರಿನಲ್ಲಿ ಪಹಣಿ ಬರುತ್ತಿದೆ ಇದು ಹೇಗೆ ಸದ್ಯ..
ಶ್ರೀ ಮುನೇಶ್ವರ ಸ್ವಾಮಿ ದೇವಾಲಯದ ಜಾಗವನ್ನು ಇಂದು ನಮಗೆ ಸೇರಿದ ಜಾಗ ಎಂದು ಸದರಿ ಜಾಗದಲ್ಲಿ ವಾಣಿಜ್ಯ ಮಳಿಗಳನ್ನು ನಿರ್ಮಿಸಲಾಗುತ್ತಿದೆ,ಈ ಸಂಬಂಧ ತಹಶೀಲ್ದಾರ್, ನಗರಸಭೆ ಪೌರಯುಕ್ತರಿಗೆ ದೂರು ನೀಡಲಾಗಿದ್ದು, ವಾಣಿಜ್ಯ ಮಳಿಗೆಗಳನ್ನು ವಶಕ್ಕೆ ಪಡೆದು ಮುಜರಾಯಿ ಇಲಾಖೆ ವಶಕ್ಕೆ ನೀಡ ಬೇಕು ಹಾಗೂ ಸ್ಥಳೀಯರು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅಗ್ರಹಿಸಿದರು
ಸ್ಥಳೀಯರಾದ ಗಜೇಂದ್ರ ಮಾತನಾಡಿ ನಮ್ಮ ತಾತನ ಕಾಲದಿಂದ ಈ ಜಾಗದಲ್ಲಿ ಪೂಜೆ ಮಾಡುತ್ತಿದ್ದೆವು, ಕಳೆದ ವರ್ಷದ ಯುಗಾದಿ ಹಬ್ಬದ ದಿನ ಸಹ ನಾವು ಪೂಜೆ ಮಾಡಿ ಹೋಗಿದ್ದೆವು, ಈ ಮೊದಲು ಈ ಜಾಗದಲ್ಲಿ ಹೂವಿನ ತೋಟ ಇತ್ತು, ಮುನೇಶ್ವರಸ್ವಾಮಿ ಪೂಜೆ ಮಾಡುವ ದಿನ ಪೆಂಟಾಲ್ ಹಾಕಿ ಮರಿ ಹೊಡೆದು ಜನರಿಗೆ ಊಟ ಹಾಕುತ್ತಿದ್ದೆವು, ಆದರೀವತ್ತು ದೇವಸ್ಥಾನದ ಜಾಗವನ್ನ ಒತ್ತುವರಿ ಮಾಡಿ, ಸುತ್ತಲು ಕಾಂಪೌಂಡ್ ನಿರ್ಮಾಣ ಮಾಡಿ ನಾವು ಒಳಗೆ ಬರದಂತೆ ತಡೆಯುತ್ತಿದ್ದಾರೆ, ಒತ್ತುವರಿಯಾಗಿರುವ ಜಾಗವನ್ನ ತೆರವು ಮಾಡಿ ನಮ್ಮ ಮಕ್ಕಳಿಗೆ ಪೂಜೆ ಮಾಡುವ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಸ್ಥಳೀಯರಾದ ನಾಗರಾಜು, ಕುಮಾರ್, ವಿನಯ್, ಮುನಿರಾಜು, ಮಾದೇಶ, ಶಿವಕುಮಾರ್, ವೆಂಕಟೇಶ್