
ದೊಡ್ಡಬಳ್ಳಾಪುರ : ರಾಜಘಟ್ಟ ಗ್ರಾಮದ ಸ.ನಂ. 138 ರ ಸ್ಮಶಾನದ ಅಳತೆ ಮಾಡುವಂತೆ ಹಾಗೂ ಒತ್ತುವರಿಯಾಗಿರುವ ಪ್ರದೇಶವನ್ನು ತೆರವುಗೊಳಿಸಲು ಹಲವು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ, ಈ ಕುರಿತಂತೆ ಡಿಸೆಂಬರ್ 18ರಂದು ಗ್ರಾಮಕ್ಕೆ ಭೇಟಿಕೊಡುತ್ತಿರುವ ಅಧಿಕಾರಿಗಳು ಈ ಬಾರಿಯಾದರೂ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕಿದೆ ಎಂದು ರಾಜಘಟ್ಟ ಗ್ರಾಮಾಭಿರುದ್ದಿ ಯುವಕರ ಸೇನೆ ಸಂಸ್ಥಾಪಕ ಗಣೇಶ್ ರಾಜಘಟ್ಟ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು ನಮ್ಮ ರಾಜಘಟ್ಟ ಗ್ರಾಮಾಭಿವೃದ್ಧಿ ಯುವಕರ ಸೇನೆಯ ವತಿಯಿಂದ ಹಲವು ಬಾರಿ ಈ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ ರಾಜಘಟ್ಟ ಗ್ರಾಮದ ಸ.ನಂ. 138 ರ ಸ್ಮಶಾನದ ಜಾಗದಲ್ಲಿ ಒತ್ತುವರಿಯಾಗಿರುವ ಪ್ರದೇಶವನ್ನು ತೆರವುಗೊಳಿಸಲು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸ್ಥಳದ ಕಂಪ್ಯೂಟರ್ ಸರ್ವೇ ಮಾಡಲಾಗಿತ್ತು , ಆದರೆ ಸ್ಥಳದ ಸರ್ವೇ ನೆಡೆದು ಒಂದು ವರ್ಷ ಕಳೆದರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಶ್ನಾರ್ಥಕವಾಗಿದೆ , ಇದೇ ತಿಂಗಳ 18ನೇ ತಾರೀಕಿನಂದು ಸ್ಮಶಾನ ಒತ್ತುವರಿ ಕುರಿತಂತೆ ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಲಿರುವ ಭೂ ದಾಖಲೆಯ ಸಹಾಯಕ ನಿರ್ದೇಶಕ ಅಧಿಕಾರಿ ಮೋಹನ್ ಹಾಗೂ ಸಿಬ್ಬಂದಿ ವರ್ಗ ಈ ಬಾರಿಯಾದರೂ ಸೂಕ್ತ ಕ್ರಮ ಕೈಗೊಂಡು ಸ್ಮಶಾನ ಜಾಗದ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಗ್ರಾಮಸ್ಥರ ಪರ ನಿಲುವು ಕೈಗೊಳ್ಳಲಿದ್ದಾರಾ…??? ಎಂದು ಕಾದು ನೋಡಬೇಕಿದೆ ಎಂದರು.
ಗ್ರಾಮದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಅಧಿಕಾರಿಗಳು ನಿಷ್ಪಕ್ಷಪಾತ ಸ್ಪಷ್ಟ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರಿ ಜಾಗವನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ಕಲ್ಪಿಸಬೇಕಿದೆ ಎಂದರು.