
ಖ್ಯಾತ ಹಿರಿಯ ಸಾಹಿತಿ ಡಾ. ನಾ ಡಿಸೋಜ (Na D’Souza) ಅವರು ಇಂದು ಸಂಜೆ ಅನಾರೋಗ್ಯ ಹಿನ್ನೆಲೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾ.ಡಿಸೋಜ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಗಣ್ಯರ ಅಗಲಿಕೆಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಯಾರಾಗಬೇಕೆಂದು ರಾಜ್ಯಮಟ್ಟದ ಸಭೆಯಲ್ಲಿ ಚರ್ಚೆ ಬಂದಾಗ ಒಬ್ಬ ಅಲ್ಪಸಂಖ್ಯಾತರಾದ ಸಾಹಿತ್ಯ ದಿಗ್ಗಜರಾದ ಶಾಂತಿ ಪ್ರಿಯರಾದ ಯಾವುದೇ ಕಾಟ್ರವರ್ಸಿ ಇಲ್ಲದ ವ್ಯಕ್ತಿತ್ವವನ್ನು ಹೊಂದಿದ ಡಿಸೋಜಾ ರವರನ್ನು ಆಯ್ಕೆ ಮಾಡಬಹುದೆಂದು ಒಮ್ಮತದಿಂದ ಪ್ರಥಮ ಧ್ವನಿಯೆತ್ತಿದ್ದು ನಾನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನಂತರ ಅದೇ ಡಿಸೋಜರವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮ್ಮೇಳನದ ಉದ್ಘಾಟನೆ ಮಾಡಲು ಕರೆಸಿದ್ದು ನಮ್ಮ ಹೆಮ್ಮೆಯ ಹೆಗ್ಗಳಿಕೆಯಾಗಿದೆ. ಡಿಸೋಜರವರ ಮನೆಗೆ ಯಾವುದೇ ಕ್ಷಣದಲ್ಲಿ ನಾನು ಸಾಗರಕ್ಕೆ ಬಂದಾಗ ಪ್ರಥಮವಾಗಿ ಹೋಗುತ್ತಿದ್ದೆವು ಡಿಸೋಜಾ ರವರ ಜೊತೆಯಲ್ಲಿ ಒಂದಿಷ್ಟು ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸಲು ಅಂತಹ ಡಿಸೋಜರವರು ಇನ್ನಿಲ್ಲ ಎಂಬ ಸಂಗತಿ ಕೇಳಿ ಬಹಳ ದುಃಖವಾಯಿತು.
ನಮ್ಮೊಂದಿಗೆ ದೇಹವಿಲ್ಲದಿರಬಹುದು ಅವರ ಸಾಹಿತ್ಯ ಕ್ಷೇತ್ರದ ಪರಿಕರಗಳು ಸಾಹಿತ್ಯದ ಅವಲೋಕನಗಳು ನಮ್ಮೊಂದಿಗೆ ಅವರ ಒಳ್ಳೆಯ ಗುಣಗಳು ನಮ್ಮೊಂದಿಗೆ ಇರಲಿ ಡಿಸೋಜಾ ಇನ್ನಿಲ್ಲ ಎನ್ನುವ ಬದಲು ಡಿಸೋಜಾ ನಮ್ಮೊಂದಿಗಿದ್ದಾರೆ ಎನ್ನುವುದೇ ಪಾಸಿಟಿವ್ ಆಗಿರುತ್ತೆ ಎಂದು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.