
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಲು ವಾಟ್ಸಾಪ್ ಮೂಲಕ ಅವಕಾಶ ಕಲ್ಪಿಸಲಾಗಿದೆ.
ಗ್ರಾಮೀಣ ಜನತೆ ತಮ್ಮೆಲ್ಲಾ ಅಹವಾಲುಗಳನ್ನು ದಾಖಲಿಸಲು “ಪಂಚಮಿತ್ರ” ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಬಹುದು. ಅಥವಾ ಅದೇ ಸಂಖ್ಯೆಯಲ್ಲಿ ವಾಟ್ಸಾಪ್ ಚಾಟ್ ಮೂಲಕವೂ ಅಹವಾಲು ಸಲ್ಲಿಸಬಹುದು.
ವಾಟ್ಸ್ ಆಪ್ ನಲ್ಲಿ hi ಎಂದು ಸಂದೇಶ ಕಳುಹಿಸಿದರೆ ಸಾಕು ನಿಮ್ಮ ಚಾಟ್ ಆರಂಭವಾಗುತ್ತಿದೆ, ನಂತರ ಹಂತ ಹಂತವಾಗಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ನಮೂದಿಸುವ ಮೂಲಕ ಮಾಹಿತಿ, ಕುಂದು ಕೊರತೆ, ಹಾಗೂ ಸೇವೆಗಳನ್ನು ಪಡೆಯಬಹುದಾಗಿದೆ.