
ಕರ್ನಾಟಕ : ರಾಜ್ಯ ಯುವ ಕಾಂಗ್ರೆಸ್ ಚುನಾವಣೆ ನೆಡೆದಿದ್ದು ನೂತನ ಪದಾಧಿಕಾರಿಗಳ ಆಯ್ಕೆಯಾಗಿದೆ, ಚುನಾವಣೆಯಲ್ಲಿ 16436 ಮತಗಳನ್ನು ಪಡೆಯುವ ಮೂಲಕ ಸಾಮಾಜಿಕ ಹೋರಾಟಗಾರ್ತಿ ಬಿಂದು ಗೌಡ ವಿಜಯಿಶಾಲಿಯಾಗಿದ್ದು, ನೂತನ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು ಮಾತನಾಡಿರುವ ಅವರು ಹಿರಿಯ ನಾಯಕರ ಮಾರ್ಗದರ್ಶನದಿಂದ ಪಕ್ಷದಲ್ಲಿ ಸದಾ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ, ಈ ಚುನಾವಣೆ ವಿಶೇಷವಾಗಿದ್ದು ನನ್ನಂತೆ ಸಮಾನ ಮನಸ್ಥಿತಿಯುಳ್ಳ ಪ್ರತಿಯೊಬ್ಬ ಯುವಕರು/ ಯುವತಿಯರು ನನಗೆ ಮತ ನೀಡಿದ್ದು, ಈ ಚುನಾವಣೆ ವಿಚಾರವಾಗಿ ನಾನು ಒಂದು ರುಪಾಯಿ ಖರ್ಚು ಮಾಡದೇ ಯಾವುದೇ ಆಮಿಷಗಳನ್ನು ಒಡ್ಡದೇ ಚುನಾವಣೆಯಲ್ಲಿ ಪ್ರೀತಿ ವಿಶ್ವಾಸ ಅಭಿಮಾನದಿಂದ ಜಯಸಾಧಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕಡಿಮೆ ಪೈಪೋಟಿ ಇರ್ಲಿಲ್ಲ ಈ ಹಿಂದೆ ಹೇಳಿದ ಹಾಗೆ ದೊಡ್ಡವರ ಮಕ್ಕಳ ಸಾಲು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಇದ್ದದ್ದು ಗಮನಾರ್ಹ ಈ ಒಂದಷ್ಟು ಬಲಿಷ್ಟರ ಹಣವಂತರ ಅಧಿಕಾರವಂತರ ನಡುವೆ ಗೆದ್ದಿರುವುದು ಖುಷಿ ತಂದಿದೆ, ಪಕ್ಷದ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಲು ಶಕ್ತಿ ನೀಡಿದೆ ಎಂದು ತಿಳಿಸಿದ್ದಾರೆ.
ನನ್ನನ್ನು ನಂಬಿ ತಮ್ಮ ಮತಗಳನ್ನು ನೀಡುವ ಮೂಲಕ ಗೆಲ್ಲಿಸಿರುವ ಎಲ್ಲ ನನ್ನ ಸಹೋದರರಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ .
ನೂತನ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಬಿಂದು ಗೌಡ ಅವರನ್ನು ಹಿರಿಯ ನಾಯಕರು,ಗಣ್ಯರು, ಅಭಿನಂದಿಸಿದ್ದಾರೆ.