
ದೊಡ್ಡಬಳ್ಳಾಪುರ : ರಾಜ್ಯ ಯುವ ಕಾಂಗ್ರೆಸ್ ಚುನಾವಣೆ ನೆಡೆದಿದ್ದು, ತಾಲ್ಲೂಕು ಮಟ್ಟದ ಯೂಥ್ ಕಾಂಗ್ರೆಸ್ ನ ಅಧ್ಯಕ್ಷರಾಗಿ ರಾಕೇಶ್ ಗೌಡ, ಉಪಾಧ್ಯಕ್ಷರಾಗಿ ರಾಜೇಶ್. ಎನ್,ಶ್ರವಣೂರು ರವರನ್ನು ನೂತನ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತು ದೊಡ್ಡಬಳ್ಳಾಪುರ ತಾಲೂಕು ಗ್ರಾಮಂತರ ಅಧ್ಯಕ್ಷರಾಗಿ ಆಯ್ಕೆಯಾದ ರಾಕೇಶ್ ಗೌಡ ಮಾತನಾಡಿ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಿಂದ ಸದಾ ನಿಷ್ಠೆಯಿಂದ ಸೇವೆ ಸಲ್ಲಿತ್ತಾ ಬಂದಿದ್ದೇನೆ,ಸಾಮಾನ್ಯ ಕಾರ್ಯಕರ್ತರನ್ನು ಪದಾಧಿಕಾರಿಗಳನ್ನಾಗಿ ಮಾಡುವ ಶಕ್ತಿ ಕೇವಲ ಕಾಂಗ್ರೆಸ್ ಪಕ್ಷಕ್ಕಿದೆ , ಈ ಅವಕಾಶ ನೀಡಿರುವ ನನ್ನೆಲ್ಲಾ ಮತದಾರ ಬಂಧುಗಳಿಗೆ , ಪಕ್ಷದ ಹಿರಿಯ ಮುಖಂಡರಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಎಂದಿದ್ದಾರೆ .ಈ ಚುನಾವಣೆಯಲ್ಲಿ ಸ್ಥಳೀಯ ಯುವ ಸಮುದಾಯದ ಪ್ರೀತಿ ವಿಶ್ವಾಸ ಅಭಿಮಾನದಿಂದ ಜಯಸಾಧಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಶ್ರವಣೂರು ಎನ್.ರಾಜೇಶ್ ಮಾತನಾಡಿ ನನ್ನನ್ನು ನಂಬಿ ತಮ್ಮ ಮತಗಳನ್ನು ನೀಡುವ ಮೂಲಕ ಗೆಲ್ಲಿಸಿರುವ ಎಲ್ಲ ನನ್ನ ಸಹೋದರರಿಗೆ ತುಂಬಿ ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ , ಎಂದಿದ್ದಾರೆ .
ನೂತನ ತಾಲ್ಲೂಕು ಯುವ ಕಾಂಗ್ರೆಸ್ ಘಟಕಕ್ಕೆ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ರಾಕೇಶ್ ಗೌಡ ಹಾಗೂ ಶ್ರವಣೂರು ಎನ್.ರಾಜೇಶ್ ಅವರನ್ನು ತಾಲ್ಲೂಕಿನ ಹಿರಿಯ ಮುಖಂಡರು ಪಕ್ಷದ ನಾಯಕರು,ಗಣ್ಯರು, ಹಿತೈಷಿಗಳು, ಸ್ನೇಹಿತರು ಅಭಿನಂದಿಸಿದ್ದಾರೆ.