
ದೊಡ್ಡಬಳ್ಳಾಪುರ : ಅಣ್ಣ ಮದುವೆಯಾಗಿದ್ದ ಮನೆಗೆ ಬಂದು ಹೋಗುತ್ತಿದ್ದ ಆತ, ಬಂದು ಹೋಗುವ ಸಮಯದಲ್ಲಿ ನನ್ನನು ಪ್ರೀತಿಸಿ ಮದುವೆಯಾದ, ಆದರೆ ಈಗ ನನ್ನನ್ನು ಮುತ್ತು ನನ್ನ ಮಗನನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಯಾಗಿ ನನಗೆ ಮೋಸ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಶಿಲ್ಪ ಆರೋಪಿಸಿದ್ದಾರೆ .
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ಶಿಲ್ಪಾ 10 ವರ್ಷಗಳ ಹಿಂದೆ ನಗರಗೆರೆ ಗ್ರಾಮದವನೇ ಆದ ರಘು ಎಂಬಾತನ್ನು ಪ್ರೀತಿಸಿ ಮದುವೆಯಾಗಿದ್ರು. ಅಂದಹಾಗೇ ಈ ರಘು ಶಿಲ್ಪಾಳ ಅಕ್ಕ ಪ್ರೇಮ ಮದುವೆಯಾಗಿದ್ದ ಗಂಡನ ತಮ್ಮ, ಮದುವೆಯಾದ ಪ್ರಾರಂಭದಲ್ಲಿ ರಘು ಮತ್ತು ಶಿಲ್ಪಾ ದಾಪಂತ್ಯ ಚೆನ್ನಾಗಿಯೇ ಇತ್ತು, ಇಬ್ಬರು ಮುದ್ದಿನ ಗಂಡು ಮಕ್ಕಳಿದ್ರು, ಎರಡನೇ ಮಗ ಅನಾರೋಗ್ಯದಿಂದ ಸಾವನ್ನಪ್ಪಿದ ನಂತರ ರಘುವಿನ ವರ್ತನೆಯೇ ಬದಲಾಯ್ತು ಅಂತಾರೆ ಶಿಲ್ಪಾ.
ಹೆಂಡತಿ ಹೆಸರಿನಲ್ಲಿ ಸಾಲ ಮಾಡುತ್ತಿದ್ದ ರಘು, ಯಾಕೇ ಸಾಲ ಮಾಡ್ತಿರಾ ಅಂತಾ ಹೆಂಡತಿ ಕೇಳಿದ್ರೆ, ನನಗೆ ಹಣ ಬೇಕು, ನಿನ್ನ ಸಹೋದರರಿಂದ ವರದಕ್ಷಿಣೆಯ ಹಣ ತಂದುಕೊಡುವಂತೆ ಕೇಳುತ್ತಿದ್ದನಂತೆ, ಹಣ ತಂದು ಕೊಡದಿದ್ದಾರೆ ಮತ್ತೊಂದು ಮದುವೆಯಾಗುವೆ ಎಂದು ಕಿರುಕುಳ ಕೊಡುತ್ತಿದ್ದಾನಂತೆ, ಶಿಲ್ಪಾ ವರದಕ್ಷಿಣೆ ಕಿರುಕುಳ ಪ್ರಕರಣವನ್ನ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿದ್ದಾರೆ.
ರಘು ದೊಡ್ಡಬಳ್ಳಾಪುರದ ಹುಡುಗಿಯೊಬ್ಬಳನ್ನು ಎರಡನೇ ಮದುವೆಯಾಗಿದ್ದಾನೆ, ಆತನ ತಂದೆಯೇ ಎರಡನೇ ಮದುವೆಯಾಗಿರುವ ಬಗ್ಗೆ ಸುದ್ದಿ ತಿಳಿಸಿದ್ದಾರೆ ಎಂದು ಶಿಲ್ಪಾ ಆರೋಪ ಮಾಡಿದ್ದಾರೆ, ರಘು ಎರಡನೇ ಮದುವೆಯಾಗಿರುವ ಹುಡುಗಿಗೂ ಸಹ ಇದು ಎರಡನೇ ಮದುವೆ, ಮೊದಲನೇ ಗಂಡ ಸಾವನ್ನಪ್ಪಿದ್ದಾನೆ, ಆಕೆಯ ಗಂಡನಿಂದ ಹಣ ಬರುವ ಸುಳಿವು ಸಿಕ್ಕ ರಘು ಮತ್ತು ಆತನ ಕುಟುಂಬದವರು ಆಕೆಯ ಜೊತೆ ಎರಡನೇ ಮದುವೆ ಮಾಡಿಸಿದ್ದಾರೆಂದು ಶಿಲ್ಪಾ ಮತ್ತು ಆಕೆಯ ಕುಟುಂಬ ಆರೋಪ ಮಾಡಿದೆ.
ನನಗೆ ನನ್ನ ಗಂಡ ಬೇಕು, ಯಾವುದೇ ಕೆಲಸಕ್ಕೆ ಹೋಗದ ನಾನು ಮಗನನ್ನು ಸಾಕುವುದು ಹೇಗೆ ನನಗೆ ನ್ಯಾಯ ಬೇಕೆಂದು ಕೇಳಿಕೊಂಡಿದ್ದಾರೆ, ಇತ್ತಾ ರಘು ಕುಟುಂಬದವರಿಂದ ಜೀವ ಬೆದರಿಕೆ ಇದ್ದು ನಮ್ಮ ರಕ್ಷಣೆ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.