
ದೊಡ್ಡಬಳ್ಳಾಪುರ: ಕಳೆದ 2017-18ನೇ ಶೈಕ್ಷಣಿಕ ವರ್ಷದಿಂದ ಎಂ.ವಿ. ಎಂ ಶಾಲೆಯು ತಾಲ್ಲೂಕಿನಲ್ಲಿ ತನ್ನ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರೆಸುತ್ತಾ 2024–25ನೇ ಸಾಲಿನ ಸಿಬಿಎಸ್ಇ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಗಳಿಸಿದೆ ಎಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕೆ. ಶ್ರೀನಿವಾಸ್ ತಿಳಿಸಿದರು.
ಶಾಲೆಯ ಫಲಿತಾಂಶ ಕುರಿತು ಮಾತನಾಡಿದ ಅವರು ಕಳೆದ 08 ವರ್ಷಗಳಿಂದ ಶೇ.100 ಫಲಿತಾಂಶವನ್ನು ನಮ್ಮ ಶಾಲೆಯು ಪಡೆಯುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯ ಪರೀಕ್ಷೆಯಲ್ಲೂ ಶೇಕಡಾ ನೂರರಷ್ಟು ಫಲಿತಾಂಶ ಪಡೆದಿರುವುದು ಶ್ಲಾಘನೀಯ ಸಂಗತಿಯಾಗಿದೆ , ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಕ್ಕೆ ಹಾಗೂ ಸದಾ ನಮ್ಮೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪೋಷಕರಿಗೆ ಮತ್ತು ಮಕ್ಕಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಉತ್ತಮ ಫಲಿತಾಂಶಕ್ಕೆ ಶಾಲೆಯ ಗುಣಮಟ್ಟದ ಶಿಕ್ಷಣವೇ ಕಾರಣ…!
ಹೌದು ಪ್ರಸಕ್ತ ಶೈಕ್ಷಣಿಕ ವರ್ಷದ ಫಲಿತಾಂಶದ ವಿಶೇಷತೆ ಏನೆಂದರೆ, ಈ ವಿದ್ಯಾರ್ಥಿಗಳು ಯಾರೂ ಖಾಸಗಿ ಟ್ಯೂಷನ್ ಅಥವಾ ಕೋಚಿಂಗ್ ಕ್ಲಾಸ್ ಗಳಿಗೆ ಹೋಗಿಲ್ಲ ಈ ಸಾಧನೆ ಸಂಪೂರ್ಣವಾಗಿ ಶಾಲೆಯ ಗುಣಮಟ್ಟದ ಶಿಕ್ಷಣ, ಶಿಕ್ಷಕರ ಶ್ರಮ ಹಾಗೂ ವಿದ್ಯಾರ್ಥಿ ಕೇಂದ್ರಿತ ಅಧ್ಯಯನ ಸಾಧ್ಯವಾಗಿದೆ ಎಂದು ಪೋಷಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ
ಶಾಲೆಯ ಪ್ರಾಂಶುಪಾಲರಾದ ಕೆ.ಎಸ್.ಗೌರವ್ ಮಾತನಾಡಿ, ಈ ಬಾರಿಯೂ ವಿದ್ಯಾರ್ಥಿಗಳು ಸಿಬಿಎಸ್ಇ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿರುವುದು ಸಂತಸದ ವಿಷಯ. ಮುಖ್ಯವಾಗಿ ನಮ್ಮ ವಿದ್ಯಾರ್ಥಿಗಳು ಶಾಲೆಯ ಪಾಠ ಬೋಧನೆಗಳನ್ನು ಹೊರತುಪಡಿಸಿ ಬೇರೆಡೆ ಎಲ್ಲಿಯೂ ತರಬೇತಿ ಪಡೆದಿಲ್ಲ ನಮ್ಮ ಶಾಲೆಯಲ್ಲಿಯೇ ನಡೆಸಿದ ಕಲಿಕೆಗೆ ಪೂರಕವಾದ ವಿಶೇಷ ಚಟುವಟಿಕೆ, ವಿಶೇಷ ತರಗತಿಯಿಂದ ಮಕ್ಕಳು ಉತ್ತಮ ಫಲಿತಾಂಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ದೀಕ್ಷಿತ್ ಎಲ್ ( 9.1 CGPA)ಪ್ರಥಮ, ಗೌತಮ್ ಗೌಡ .ಆರ್ (9.08 CGPA)ದ್ವಿತೀಯ, ಸೋನಿಕ. ಟಿ ( 9.05 CGPA)ತೃತೀಯ ಸ್ಥಾನಗಳನ್ನು ಪಡೆಯುವ ಮೂಲಕ ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.
ಅಲ್ಲದೇ ನಮ್ಮ ಎಂವಿಎಂ ಶಾಲೆಯಲ್ಲಿ ಉತ್ತಮ ನುರಿತ ಶಿಕ್ಷಕರಿಂದ ಬೋಧನೆ ಮಾಡುವುದರ ಜೊತೆಗೆ ಮಕ್ಕಳಲ್ಲಿ ಅಡಗಿರುವ ನಾಯಕತ್ವದ ಗುಣವನ್ನು ಗುರುತಿಸಿ ಪ್ರತಿ ಮಗುವಿಗೂ ಅವಕಾಶ ಕಲ್ಪಿಸುವುದು ವಿಶೇಷವಾಗಿದೆ. ಗುಣಮಟ್ಟದ ಶಿಕ್ಷಣ ಕೇವಲ ನಗರ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿಲ್ಲ ಗ್ರಾಮೀಣ ಭಾಗದಲ್ಲೂ ಕಲ್ಪಿಸಬೇಕೆಂಬ ಉದ್ದೇಶವನ್ನು ನಮ್ಮ ಸಂಸ್ಥೆಯು ಉತ್ತಮ ಫಲಿತಾಂಶ ನೀಡುವ ಮೂಲಕ ಬಲವಾಗಿ ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಕೆ.ಶ್ರೀನಿವಾಸ್, ಕಾರ್ಯದರ್ಶಿ ರಾಧಾ ಶ್ರೀನಿವಾಸ, ಪ್ರಾಂಶುಪಾಲ ಗೌರವ್ ಕೆ.ಎಸ್. ಮುಖ್ಯೊಪಾಧ್ಯಾಯರಾದ ರಾಘವೇಂದ್ರ, ನಾಗೇಶ್, ಶಿಕ್ಷಕರಾದ ಸರಸ್ವತಿ, ರೂಪ ಸೇರಿದಂತೆ ಹಲವರು ಹಾಜರಿದ್ದರು .