
ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿ ಬಿ ಸಿ ಅನಂದ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಆನಂದ್ 43ಮತಗಳನ್ನು ಪಡೆದಿದ್ದು ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಬಿ ಸಿ ಆನಂದ್ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕೆಲ ಗೊಂದಲಗಳಿದ್ದ ಕಾರಣ ದೊಡ್ಡಬಳ್ಳಾಪುರ ಮತ ಕ್ಷೇತ್ರದ ಎಣಿಕೆಯನ್ನು ನ್ಯಾಯಾಲಯದ ತೀರ್ಪಿನ ಬಳಕ ನಡೆಸಲಾಗುವುದು ಎಂದು ತಿಳಿಸಲಾಗಿತ್ತು,ದೊಡ್ಡಬಳ್ಳಾಪುರ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಹುಸ್ಕೂರು ಆನಂದ್ ಮತ್ತು ಬಿಜೆಪಿ ಬೆಂಬಲಿತ ಬಿಸಿ ಆನಂದ್ ಕುಮಾರ್ ಅವರ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ನಡೆದಿತ್ತು.
ಇಂದು ಬೆಂಗಳೂರು ಡೇರಿ ವೃತ್ತ ಸಮೀಪ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಇಂದು ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಮತದಾನ ನಡೆದಿದ್ದು ಹುಸ್ಕೂರು ಆನಂದ್ ವಿರುದ್ಧ ಬಿಸಿ ಆನಂದ್ ಕುಮಾರ್ ಜಯಸಾಧಿಸಿದ್ದಾರೆ
ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.