
ದೊಡ್ಡಬಳ್ಳಾಪುರ ಕನ್ನಡ ಪಕ್ಷ ಹಾಗೂ ರೈತ ಸಂಘ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಎಲ್ಲಾ ಸದಸ್ಯರ ವತಿಯಿಂದ ಕರ್ನಾಟಕ ರಾಜ್ಯ ಆಹಾರ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಗಳಾದ ಕೆ ಹೆಚ್ ಮುನಿಯಪ್ಪ ರವರಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರು ಗ್ರಾಮಾಂತರ ,ಚಿಕ್ಕಬಳ್ಳಾಪುರ, ಹಾಗೂ ದೇವನಹಳ್ಳಿ ಭಾಗದ ರೈತರಿಗೆ ಕಾರ್ಮಿಕರಿಗೆ ಹಾಗೂ ನೇಕಾರರಿಗೆ ಆಗುತ್ತಿರುವ ಅನಾನುಕೂಲತೆಗಳು ಹಾಗೂ ತೊಂದರೆಗಳನ್ನು ಹೋರಾಟಗಾರರು ಸಚಿವರಿಗೆ ತಿಳಿಸಿದರು .
ದೇವನಹಳ್ಳಿ ಚನ್ನರಾಯಪಟ್ಟಣದ ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಮತ್ತು ಭಾಷೆಟ್ಟಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಲುಷಿತವಾಗಿರುವ ನೀರನ್ನು ಬಿಡುತ್ತಿರುವ ಕೈಗಾರಿಕೆಗಳಿಗೆ ಎಚ್ಚರಿಕೆಯನ್ನು ಕೊಟ್ಟು ಕಂಪನಿಗಳಲ್ಲೇ ನೀರನ್ನು ಶುದ್ಧ ಕರಿಸಲು, ಸುತ್ತಮುತ್ತಲಿನ ಊರಿನ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಈಗಾಗಲೇ ಸ್ಥಾಪನೆಯಾಗಿರುವ ಇಎಸ್ಐ ಆಸ್ಪತ್ರೆಯನ್ನು ಈ ಕೂಡಲೇ ಪ್ರಾರಂಭಿಸುವಂತೆ ಮನವಿ ಮಾಡಿದರು .
ಈ ವಿಚಾರವನ್ನು ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಗಳು ಹಾಗೂ ಮಾನ್ಯ ಉಪಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಈ ಭಾಗದ ರೈತರು ಕಾರ್ಮಿಕರು ನೇಕಾರರ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆಂದು ಮಾನ್ಯ ಉಸ್ತುವಾರಿ ಸಚಿವರು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸಂಜೀವ್ ನಾಯಕ್ , ರೈತ ಸಂಘದ ಹನುಮೇಗೌಡ, ಮುತ್ತೇಗೌಡ, ಕನ್ನಡ ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್ ಮುನಿ ಪಾಪಯ್ಯ ,ತಾಲೂಕು ಅಧ್ಯಕ್ಷರಾದ ಡಿ ವೆಂಕಟೇಶ್, ತೂಬಗೆರೆ ಶರಿಫ಼್, ಸಂಘಟನಾ ಕಾರ್ಯದರ್ಶಿ ಪರಮೇಶ್, ಶಿವರಾಜ್ ಕುಮಾರ್ ಸೇನಾ ಸಮಿತಿಯ ಅಧ್ಯಕ್ಷ ರಮೇಶ್, ಗುರುರಾಜ್ , ಹೊನ್ನಘಟ್ಟ ಮೂರ್ತಿ, ಮುರಳಿ, ಕೃಷ್ಣ ಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.