
ಬಿ.ಎಂ.ಟಿ.ಸಿ.ಸಂಸ್ಥೆಯವರಿಗೆ ಅನುಕೂಲ ಕಲ್ಪಿಸಲು ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಅನಧಿಕೃತವಾಗಿ ಖಾಸಗಿ ಬಸ್ ಗಳ ಪ್ರವೇಶಕ್ಕೆ, ನಿರ್ಭಂದ ಏರಲಾಗಿದೆ ಅಲ್ಲದೇ ಖಾಸಗಿ ವಾಹನಗಳ ನಿಲುಗಡೆ ಮಾಡದಂತೆ ನಾಮಫಲಕ ಅಳವಡಿಸಿದ್ದು ಕೂಡಲೇ ನಗರ ಸಭೆ ಈ ನಾಮಫಲಕವನ್ನು ತೆರವುಗೊಳಿಸಬೇಕೆಂದು ಖಾಸಗಿ ಬಸ್ ಮಾಲೀಕರಾದ ವಿಕ್ರಂ ಅಗ್ರಸಿದರು.
ನಾವುಗಳು ಸರ್ಕಾರದ ಪರವಾನಗಿಯಂತೆ ಖಾಸಗಿ ಬಸ್ ನಿಲ್ದಾಣವಾಗಿಸಿಕೊಂಡು ಅಂದಿನಿಂದಲೂ ಪ್ರತಿ ನಿತ್ಯ ದೊಡ್ಡಬಳ್ಳಾಪುರ ನಗರಸಭೆಗೆ ಪ್ರತಿ ಬಸ್ ಗೂ ಇಂತಿಷ್ಟು ಸುಂಕವನ್ನು ಪಾವತಿಸಿಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಬಂದಿದ್ದೇವೆ ನಮ್ಮ ಹಳೆಯ ಬಸ್ ನಿಲ್ದಾಣಕ್ಕೆ ಬೆಂಗಳೂರು, ನೆಲಮಂಗಲ, ತುಮಕೂರು, ಗೌರಿಬಿದನೂರು, ಚಿಕ್ಕಬಳ್ಳಾಪುರ, ಕೋಲಾರ, ತಿರುಪತಿ ಇನ್ನೂ ಮುಂತಾದ ನಗರಗಳಿಂದ ನೂರಾರು ಖಾಸಗಿ ಬಸ್ಸುಗಳು ಬಂದು ಹೋಗುತ್ತಿರುತ್ತವೆ. ಈ ಎಲ್ಲಾ ಬಸ್ಸುಗಳು ಈ ಪ್ರದೇಶವನ್ನು ಉಪಯೋಗಿಸಿಕೊಂಡು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿವೆ ಎಂದರು.
ಎರಡು-ಮೂರು ದಿನಗಳ ಹಿಂದೆ ಬಿ.ಎಂ.ಟಿ.ಸಿ. ಸಂಸ್ಥೆಯವರು ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಏಕಾಏಕಿ ಖಾಸಗಿ ಬಸ್ಗಳಿಗೆ ನಿರ್ಬಂಧ ಹಾಗೂ ಪ್ರವೇಶಿಸಿದರೆ ದಂಡ ವಿಧಿಸುವುದಾಗಿ ಒಂದು ಎಚ್ಚರಿಕೆ ಕೊಡುವ ಅನಧಿಕೃತ ನಾಮಫಲಕ ಅಳವಡಿಸಿರುತ್ತಾರೆ. ಈ ವಿಷಯದ ಬಗ್ಗೆ, ಸರ್ಕಾರವಾಗಲಿ, ದೊಡ್ಡಬಳ್ಳಾಪುರ ನಗರಸಭೆಯವರಾಗಲಿ ಯಾವುದೇ ರೀತಿಯ ಪ್ರಕಟಣೆಯಾಗಲಿ ಅಥವಾ ನೋಟೀಸ್ ಅಲ್ಲಿ ನೀಡಿರುವದಿಲ್ಲ ಅದರಿಂದ ನಮ್ಮ ದೊಡ್ಡಬಳ್ಳಾಪುರ ನಗರ ಸಭೆ ದಯಮಾಡಿ ಸದರಿ ಆನಧಿಕೃತ ನಾಮಫಕಲವನ್ನು ಕೂಡಲೇ ತೆರವುಗೊಳಿಸಬೇಕು ಹಾಗೂ ಸಂಬಂಧ ಪಟ್ಟವರಿಗೆ ಸೂಕ್ತ ಆದೇಶ ನೀಡಬೇಕಾಗಿ ವಿನಂತಿಸುತ್ತೇವೆ ಎಂದರು
ಈ ಹಳೆಯ ಖಾಸಗಿ ಬಸ್ ನಿಲ್ದಾಣವನ್ನು ಇನ್ನಷ್ಟು ಅಭಿವೃುದ್ಧಿ ಪಡಿಸಿ ಸಾರ್ವಜನಿಕರ ಸ್ನೇಹಿಯಾಗಿ ಮಾರ್ಪಾಡಿಸಬೇಕೆಂದು ನಗರ ಸಭೆ ಅಧಿಕಾರಿಗಳಲ್ಲಿ ಮನವಿ ಮಾಡಿದರು