
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ರವಿ ಸಿದ್ದಪ್ಪ. ವಿಜಯಪುರ ಹೋಬಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಮಂಜುನಾಥ. ಹಾಗೂ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ವೆಂಕಟೇಶ್ ರವರುಗಳಿಗೆ ಅಭಿನಂದನೆ ಹಾಗು ಸನ್ಮಾನ ಸಮಾರಂಭವನ್ನು ಘಾಟಿ ಸುಬ್ರಹ್ಮಣ್ಯದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ತೂಬಗೆರೆ ನಿಕಟ ಪೂರ್ವ ಬ್ಲಾಕ್ ಅಧ್ಯಕ್ಷ ಹಾಗು ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ರಂಗಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷ ಅಭಿವೃದ್ದಿ ಕಾರ್ಯಗಳನ್ನು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತ್ತು ಅದಕ್ಕೂ ಮುಂಚಿತವಾಗಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಕಾರ್ಡುಗಳನ್ನು ಪ್ರತಿ ಮನೆಗೂ ತಲುಪಿಸಿ ಅದರಂತೆಯೇ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈ ಯೋಜನೆಗಳ ಅನುಷ್ಠಾನ ಬರುವಂತೆ ಮಾಡಿತ್ತು.ಅದರಂತೆ ಯಾವುದೇ ಜಾತಿ-ಧರ್ಮ-ಲಿಂಗ-ಭಾಷೆಯ ಬೇದ ವಿಲ್ಲದೆ ಸರ್ಕಾರ ಘೋಷಿಸಿರುವ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳ ಸರ್ಕಾರ ಅನುಷ್ಠಾನಕ್ಕೆ ತಂದಿದೆ ಅದರೆ ಕಾಂಗ್ರೇಸ್ ಸರ್ಕಾರ ತಳ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಎಲ್ಲರಿಗೂ ಸಮಾನತೆಯ ಅಧಿಕಾರವನ್ನು ನೀಡಿದೆ ಎಂದರು.
ನಂತರ ಸಾಸಲು ಹೋಬಳಿ ನಿಕಟ ಪೂರ್ವ ಜಿಲ್ಲಾ ಪಂಚಾಯಿತಿ ಸದಸ್ಯ ಎನ್ ಅರವಿಂದ ಮಾತನಾಡಿ.ದೇವನಹಳ್ಳಿ ಅವಿಭಾಜ್ಯ ಅಂಗವಾಗಿರುವ ತೂಬಗೆರೆ ಹೋಬಳಿಯ ಕೆಲವು ಗ್ರಾಮಗಳು ಮೂಲಭೂತ ಸೌಲಭ್ಯಗಳಾದ ಹೋಬಳಿ ಯಿಂದ ಗ್ರಾಮಗಳಿಗೆ ಕಲ್ಪಿಸುವ ರಸ್ತೆ. ಕುಡಿಯುವ ನೀರು. ಚರಂಡಿ.ಮನೆ ಇಲ್ಲದವರಿಗೆ ಮನೆ ಬೀದಿ ದೀಪ ಇಂತಹವುಗಳಿಗೆ ಹೆಚ್ಚು ಗಮನ ಇಟ್ಟು ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡುವಂತೆ ಒತ್ತಾಯಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರವಿ ಸಿದ್ದಪ್ಪ ಪಕ್ಷ ಕೊಟ್ಟಿರುವ ಜವಾಬ್ದಾರಿ ಯನ್ನು ಸಮರ್ಪಕವಾಗಿ ಹಾಗು ಪ್ರಾಮಾಣಿಕವಾಗಿ ನಿರ್ವಹಿಸಲು ಪ್ರಯತ್ನಿಸುತ್ತೇನೆ.ನಮ್ಮ ವ್ಯಾಪ್ತಿಗೆ ಸುಮಾರು 58 ಬೂತ್ ಗಳು ಬರಲಿದ್ದು ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಕ್ಷವನ್ನು ಸಂಘಟಿಸುತ್ತೇನೆ ಜೊತೆಗೆ ನಮ್ಮ ಹೋಬಳಿಯ ಹಿರಿಯರ ಮಾರ್ಗದರ್ಶನ ದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ,ಕಾಂಗ್ರೆಸ್ ವಕ್ತಾರ ಲಿಂಗನಹಳ್ಳಿ ಲಕ್ಷ್ಮೀಪತಿ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಜಗನ್ನಾಥ. ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದ ಪ್ರಾಧಿಕಾರ ಸದಸ್ಯರುಗಳಾದ ಆರ್ ವಿ ಮಹೇಶ್,ಎಸ್ ರವಿ. ಲಕ್ಷ್ಮನಾಯಕ್ , ಶ್ರೀಮತಿ ಹೇಮಲತಾ ರಮೇಶ್ , ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನಾರಾಯಣ ಗೌಡ, ದೇವನಹಳ್ಳಿ ನೂತನ ಬಮೂಲ್ ನಿರ್ದೆಶಕ ಎಸ್.ಪಿ ಮುನಿರಾಜು ಕಾಂಗ್ರೆಸ್ ಹೋಬಳಿ ಪದಾಧಿಕಾರಿಗಳಾದ. ಕಾಂತಮ್ಮ ,ಸವಿತಾ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.