
ದೊಡ್ಡಬಳ್ಳಾಪುರ : ಸಂಸ್ಥಾಪಕರು ರಾಜ್ಯಾಧ್ಯಕ್ಷರಾದ ಕೆ.ಎಂ.ಸಂದೇಶ್ ಸ್ಥಾಪಿತ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ದೊಡ್ಡಬಳ್ಳಾಪುರದಲ್ಲಿ ಸಕ್ರಿಯವಾಗಿದ್ದು, ತಾಲೂಕಿನಲ್ಲಿ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಹೋರಾಟ ಮಾಡುವುದ್ದಾಗಿ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ತಿಳಿಸಿದ್ದಾರೆ.
ಕೆ.ಎಂ.ಸಂದೇಶ್ ನೇತೃತ್ವದ ಹೋರಾಟಗಳು ರಾಜ್ಯದಲ್ಲಿ ಸಂಚಲನ ಮೂಡಿಸಿದೆ, ರಾಜ್ಯದಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸುವ ಮೂಲಕ ಅಂತಹ ಪ್ರಕರಣಗಳ ವಿರುದ್ಧ ಹೋರಾಟ ಮಾಡಿ ದಲಿತರಿಗೆ ನ್ಯಾಯ ಕೊಡಿಸುತ್ತಿದ್ದಾರೆ, ದಲಿತರ ಜಮೀನು ಕಬಳಿಸುವ ಭೂಮಾಲೀಕರ ವಿರುದ್ಧ ಹೋರಾಟ ನಡೆಸುತ್ತಿರುವ ಅವರು ಸಾವಿರಾರು ಎಕರೆ ದಲಿತರ ಜಾಮೀನು ರಕ್ಷಣೆ ಮಾಡಿ ದಲಿತರಿಗೆ ನ್ಯಾಯ ಕೊಡಿಸಿದ್ದಾರೆ, ಅವರು ಸ್ಥಾಪಿಸಿರುವ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ(ASSK) ದೊಡ್ಡಬಳ್ಳಾಪುರದಲ್ಲಿಯೂ ಸಕ್ರಿಯವಾಗಿದ್ದು, ತಾಲೂಕಿನಲ್ಲಿ ದಲಿತರ ಪರವಾಗಿ ಹೋರಾಟ ಮಾಡುವುದ್ದಾಗಿ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ಕೊಡಿಗೇಹಳ್ಳಿ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಿಯಲ್ ಎಸ್ಪೇಟ್ ಮಾಫಿಯಾ ಕಾಲಿಟ್ಟಿದ್ದು ದಲಿತರ ಜಮೀನು ಕಬಳಿಸಲು ಸಂಚು ನಡೆಸುತ್ತಿದ್ದಾರೆ, ಇವತ್ತಿಗೂ ತಾಲೂಕಿನ ಹಲವು ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶವಿಲ್ಲ, ಬೆಂಗಳೂರಿಗೆ ಕೂಗಳತೆಯ ದೂರದಲ್ಲಿದ್ದರು ದಲಿತರ ಮೇಲೆ ದಬ್ಬಾಳಿಕೆ ನಿಂತಿಲ್ಲ, ದಲಿತರ ಮೇಲಿನ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನ ಅಂಬೇಡ್ಕರ್ ಸೇವಾ ಸಮಿತಿ ಖಂಡಿಸುವುದರ ಜೊತೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದ್ದಾಗಿ ಹೇಳಿದರು.