
ದೊಡ್ಡಬಳ್ಳಾಪುರ : ತಾಲ್ಲೂಕಿನ ಲಿಂಗನಹಳ್ಳಿ ಗ್ರಾಮದ ಪ್ರಸಿದ್ದ ಆಂಜನೇಯ ದೇಗುಲದ ಸ್ವಚ್ಚತಾ ಕಾರ್ಯವನ್ನು ಲಿಂಗನಹಳ್ಳಿ ಗ್ರಾಮಸ್ಥರು ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಚತಾ ಸಮಿತಿಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಯಿತು.
ಲಿಂಗನಹಳ್ಳಿ ಎಂ ಪಿ ಸಿ ಎಸ್ ಅಧ್ಯಕ್ಷ ನಂಜಮರಿಯಪ್ಪ ನೇತೃತ್ವದಲ್ಲಿ ನೆಡೆದ ದೇವಾಲಯ ಸ್ವಚ್ಛತಾ ಕಾರ್ಯಕ್ಕೆ ತಾಲ್ಲೂಕಿನ ಹಲವು ಪ್ರಮುಖರು ಭಾಗವಹಿಸಿ ಶ್ರಮದಾನ ಮಾಡಿದರು.
ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಚತಾ ಸಮಿತಿ ವತಿಯಿಂದ ಕೊನಘಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಲಿಂಗನಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಕಾಣದ ಪುರಾತನ ಆಂಜನೇಯ ದೇವಾಲಯವನ್ನು ಸ್ವಚ್ಛತೆ ಮಾಡಲಾಯಿತು.ಬೆಳೆದು ನಿಂತಿದ್ದ ಬೇಲಿಗಳು,ದೇವಾಲಯದ ಆವರಣದಲ್ಲಿ ಹಾಕಲಾಗಿದ್ದ ಅನಗತ್ಯ ಕಲ್ಲುಗಳನ್ನು ವಿಂಗಡಿಸಿ ಜೆಸಿಬಿ ಸಹಾಯದಿಂದ ಸ್ವಚ್ಚತಾ ಕಾರ್ಯ ಪೂರ್ಣ ಗೊಳಿಸಲಾಯಿತು.
ಈ ದೇವಾಲಯದಲ್ಲಿ ನವರಾತ್ರಿಯ ಆಯುಧ ಪೂಜಾ ಹಾಗೂ ವಿಜಯ ದಶಮಿ ಸಂದರ್ಭದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವುದರಿಂದ ದೇವಾಲಯದ ಸ್ವಚ್ಛತೆ ಅತ್ಯಗತ್ಯವಾಗಿತ್ತು ಇದು ಸ್ಥಳೀಯರ ಬೆಂಬಲದಿಂದ ದೇವಾಲಯದ ಸ್ವಚ್ಛತಾ ಕಾರ್ಯಪೂರ್ಣಗೊಂಡಿದೆ.ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಚತಾ ಸಮಿತಿಯ ಎಲ್ಲಾ ಸಹಪಾಠಿಗಳಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು
ಕಾರ್ಯಕ್ರಮಕ್ಕೆ ಕೆ.ಪಿ.ಸಿ.ಸಿ.ಸದಸ್ಯರಾದ ಲಕ್ಷ್ಮೀಪತಿ ಭಾಗವಹಿಸಿ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದ ಎಲ್ಲಾ ಶ್ರಮದಾನಿಗಳಿಗೂ ದಸರಾ ವಿಶೇಷವಾಗಿ ಸಿಹಿ ಹಂಚಿ ಶುಭಕೋರಿದರು. ಮಧ್ಯಾಹ್ನದ ಉಪಹಾರದ ವ್ಯವಸ್ಥೆಯನ್ನು ನಂಜಮರಿಯಪ್ಪ ವಹಿಸಿದ್ದು. ಒಟ್ಟಾರೆ ಗ್ರಾಮದ ಸದಸ್ಯರು ಪಕ್ಷಬೇಧವಿಲ್ಲದೇ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡರು ಎಂದು ಕಾರ್ಯಕ್ರಮದ ಆಯೋಜಕ ಕೆಂಪೇಗೌಡ ತಿಳಿಸಿದರು.
ಸ್ವಚ್ಚತಾ ಕಾರ್ಯದಲ್ಲಿ ಕೆ.ಪಿ.ಸಿ.ಸಿ. ಸದಸ್ಯ ಲಕ್ಷ್ಮೀಪತಿ, ಎಂಪಿ ಸಿಎಸ್ ಅಧ್ಯಕ್ಷ ನಂಜಮರಿಯಪ್ಪ, ಎಂಪಿಸಿಎಸ್ ಉಪಾಧ್ಯಕ್ಷ ಮುನಿರಾಜು, ಗ್ರಾಮಪಂಚಾಯಿತಿ ಸದಸ್ಯ ಸಿದ್ದಲಿಂಗಯ್ಯ, ಸದಸ್ಯರ ಚಾಂದಿನಿ, ಶ್ರೀನಿವಾಸಮೂರ್ತಿ, ಮೂರ್ತಿ ಮಾಜಿ ಸದಸ್ಯ ವಿಎಸ್ಎಸ್ಎನ್, ಪುಟ್ಟಮೂರ್ತಿ, ಎಲ್ ಕೆ ರಾಜಣ್ಣ, ಶಿವಣ್ಣ, ಎಂ. ಗೋವಿಂದಸ್ವಾಮಿ, ಎಲ್ ವಿ. ಆನಂದ್, ಗ್ರಾಮಪಂಚಾಯಿತಿ ಸದಸ್ಯ ಆನಂದ, ನಾಗೇಶ್ , ಹೂಡಿಕೆದಾರರ ಸಮಿತಿಯ ರಾಜ್ಯ ಉಪಾಧ್ಯಕ್ಷರ ಮುನಿರಾಜು , ಶ್ರೀನಿವಾಸ ಗುರೂಜಿ, ಕೃಷ್ಣ.ಸಿ.ಎಂ, ಮುನಿಕೃಷ್ಣಚಾರ್, ಪ್ರಕಾಶ್, ಕಿರಣ್, ಕೆಂಪರಾಜು, ತೂಬಗೆರೆ ಕಿಟ್ಟಿ, ರಾಮಸ್ವಾಮಿ ಸೇರಿದಂತೆ ಲಿಂಗನಹಳ್ಳಿ ಗ್ರಾಮಸ್ಥರು ಹಾಜರಿದ್ದರು.