ದಿವಂಗತ ನರಸಿಂಹಯ್ಯ ನವರ ನುಡಿನಮನ ಕಾರ್ಯಕ್ರಮವು ಅಕ್ಟೋಬರ್ 24 ರಂದು ಬೆಳಗ್ಗೆ 11 ಗಂಟೆಗೆ ಕುಣಿಗಲ್ ಅರೆಶಂಕರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸಿದ್ದರಾಮ ಚೈತನ್ಯ ಸ್ವಾಮಿಗಳ ನೇತೃತ್ವದಲ್ಲಿ ಕುರುವೇಲ್ ತಿಮ್ಮನಹಳ್ಳಿಯಲ್ಲಿ ನೆಡೆಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಕುರುವೇಲ್ ತಿಮ್ಮನಹಳ್ಳಿ ಗ್ರಾಮದ ಹಿರಿಯರು, ರೈತರು ,ಶ್ರೀ ಆಂಜನೇಯ ಸ್ವಾಮಿ ದೇವಾಲಯದ ನಿರ್ಮಾಣ ಕರ್ತರು ,ಧಾರ್ಮಿಕ ಮುಖಂಡರಾದ ಶ್ರೀ ನರಸಿಂಹಯ್ಯನವರು ಅಕ್ಟೋಬರ್ 14 2025 ರಂದು ತಮ್ಮ 92 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದು .ಅವರ ನುಡಿನಮನ ಕಾರ್ಯಕ್ರಮವನ್ನು ಅಕ್ಟೋಬರ್ 24 ರಂದು ಬೆಳಗ್ಗೆ 11 ಗಂಟೆಗೆ ಕುರುವೇಲ್ ತಿಮ್ಮನಹಳ್ಳಿ ಯಲ್ಲಿ ಆಯೋಜನೆ ಮಾಡಿದ್ದು

ಕುಣಿಗಲ್ ಅರೆಶಂಕರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸಿದ್ದರಾಮ ಚೈತನ್ಯ ಸ್ವಾಮಿಗಳು ಭಾಗವಹಿಸಿ ಮಾತನಾಡಿದರು ಮನುಷ್ಯನು ಇಹಲೋಕ ತ್ಯಜಿಸಿದಾಗ ಅವರನ್ನು ಜನರು ಹೇಗೆ ನೆನೆಯುತ್ತಾರೆ ಎಂಬುದರ ಮೇಲೆ ಅವರು ನೆಡೆಸಿದ ಜೀವನ ಹೇಗಿತ್ತು ಎಂದು ಹೇಳಬಹುದು ದಿ.ನರಸಿಂಹಯ್ಯನವರ ಜೀವನ ಶೈಲಿ ಹಾಗೂ ಸಮಾಜ ಮುಖಿ ಕಾರ್ಯಗಳ ಬಗ್ಗೆ ಈ ನುಡಿನಮನ ಕಾರ್ಯಕ್ರಮವೇ ಹೇಳುತ್ತಿದೆ.ಸಮಾಜವೇ ಕುಟುಂಬ ಎಂದು ಭಾವಿಸಿ ಜೀವನ ಸಾಗಿಸಿದ ಮಹನೀಯರು ತಮ್ಮ ಜೀವಿತವಧಿಯಲ್ಲಿ ಹಲವಾರು ಧಾರ್ಮಿಕ ಕಾರ್ಯಗಳನ್ನು ಮಾಡುವ ಮೂಲಕ ಧರ್ಮ ರಕ್ಷಣೆಗೆ ಮುಂದಾಗಿದ್ದರು ಎಂಬುದೇ ವಿಶೇಷ ಅವರು ತಮ್ಮ ಕಾರ್ಯಗಳಲ್ಲಿ ಸದಾ ಅಮರರು ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಆಶೀರ್ವಾಚನ ನೀಡಿದರು.
ವಿಶ್ವ ಮಾನವ ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕರು ಹಾಗೂ ಪರಿಸರ ಜಗತ್ ಮಾಸ ಪತ್ರಿಕೆ ಸಂಪಾದಕರಾದ ಶಿವರಾಜ್ ಮಾತನಾಡಿ ಈ ಕಾರ್ಯಕ್ರಮಕ್ಕೆ ಎಲ್ಲರೂ ವಿಶೇಷ ಆಹ್ವಾನಿತರೇ ಕಾರಣ ಹಲವಾರು ಗಣ್ಯರು ತಮ್ಮ ಸ್ವಇಚ್ಛೆ ಯಿಂದ ಈ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ. ಉತ್ತಮ ಕಾರ್ಯಗಳು ನಮ್ಮನ್ನು ಉತ್ತಮರನ್ನಾಗಿಸುತ್ತದೆ ಎನ್ನುವುದಕ್ಕೆ ನನ್ನ ತಂದೆ ನರಸಿಂಹಯ್ಯ ನವರೇ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು. ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮೊಟ್ಟಿಗೆ ಸಮಯ ಕಳೆದ ಎಲ್ಲಾ ಗಣ್ಯಾತಿಗಣ್ಯರಿಗೂ ನಮ್ಮ ಕುಟುಂಬದ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
