ದೊಡ್ಡಬಳ್ಳಾಪುರ : ಶ್ರೀನಿವಾಸ್ ಮೂರ್ತಿ ಯಾವ ಪಕ್ಷದ ಅಭ್ಯರ್ಥಿ ಎಂಬುದೇ ಗೊಂದಲಮಾಯವಾಗಿದೆ ಸ್ಥಳೀಯವಾಗಿ, ನವೆಂಬರ್ 02ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯ ಎ ತರಗತಿ ಸ್ಥಾನದ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ.ಬಿ.ಎನ್ ಕಾಂಗ್ರೆಸ್ ಬೆಂಬಲಿತ ಮತ್ತು ಎನ್ ಡಿಎ ಕೂಟದ ಎರಡು ಕರಪತ್ರಗಳಲ್ಲಿ ಕಾಣಿಸಿಕೊಂಡಿರುವುದು ಮತದಾರರ ಗೊಂದಲಕ್ಕೆ ಕಾರಣವಾಗಿದೆ.
ಎ ತರಗತಿ ಸ್ಥಾನದ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ ಪರವಾಗಿ ಕಾಂಗ್ರೆಸ್ ಒಂದೆಡೆ ಪ್ರಚಾರ ಮಾಡಿದರೆ ಮತ್ತೊಂದೆಡೆ ಎನ್ ಡಿ ಎ ( ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ) ಪ್ರಚಾರ ಮಾಡುತ್ತಿದ್ದೆ.ಎರಡು ಪಕ್ಷಗಳು ಮತಯಾಚನೆ ಮಾಡಲು ನೀಡುತ್ತಿರುವ ಕರಪತ್ರದಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುದ್ರಿಸಿದ್ದು ಎರಡು ಕರಪತ್ರಗಳಲ್ಲಿ ಗಂಟಿಗಾನಹಳ್ಳಿ ಎ ತರಗತಿ ಸ್ಥಾನದ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ ಬಿ.ಎನ್ ಭಾವಚಿತ್ರವಿರುವುದು ಮತದಾರರಲ್ಲಿ ಗೊಂದಲ ಮೂಡಿಸಿದೆ .ಇದೆಂತಾ ಸರ್ವ ಪಕ್ಷಗಳ ಮೈತ್ರಿ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀನಿವಾಸಮೂರ್ತಿ.ಬಿ.ಎಸ್ ನಾನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದೇನೆ. ಅದರೆ ಎನ್ ಡಿಎ ಕೂಟದ ಕರಪತ್ರದಲ್ಲಿ ನನ್ನ ಹೆಸರಿರುವುದು ನನಗೆ ಗೊತ್ತಿಲ್ಲ, ನನ್ನ ಗಮನಕ್ಕೆ ತರದೆ ಕರಪತ್ರದಲ್ಲಿ ನನ್ನ ಹೆಸರು ಹಾಕಿಕೊಂಡಿದ್ದಾರೆ ಎಂದರು.
