
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವತಿಯಿಂದ ತಾಲ್ಲೂಕಿನಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ 2023 ರ ನೆವಂಬರ್ 15 ರಿಂದ ಡಿಸೆಂಬರ್ 2ರ ವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಕ್ಷಯರೋಗ ಮುಕ್ತ ಸಮಾಜಕ್ಕಾಗಿ ಅರೋಗ್ಯ ಸಿಬ್ಬಂದಿ ತಾಲ್ಲೂಕಿನ ಪ್ರತಿ ಮನೆ ಮನೆಗೂ ಭೇಟಿ ನೀಡಿ ಪರೀಕ್ಷೆ ನೆಡೆಸುತ್ತಿದ್ದಾರೆ ಈ ಅವಕಾಶವನ್ನು ತಾಲ್ಲೂಕಿನ ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕ್ಷಯರೋಗ ಸಂದರ್ಶಕರಾದ ಯುವರಾಜ್ ಮನವಿ ಮಾಡಿದ್ದಾರೆ
ಕ್ಷಯ ರೋಗದ ಪ್ರಮುಖ ಅಂಶಗಳು:
•ನಿರಂತರ ಚಿಕಿತ್ಸೆಯಿಂದ ಕ್ಷಯರೋಗವನ್ನು ಗುಣಪಡಿಸಬಹುದು. ಟಿಬಿ ಕಾಯಿಲೆಯು ಶ್ವಾಸಕೋಶಗಳಿಗಷ್ಟೇ ಅಲ್ಲದೆ ದೇಹದ ಇನ್ನಿತರ ಭಾಗಗಳಿಗೂ ಹರಡಬಹುದು
•ರೋಗ ನಿರ್ಣಯಿಸಿದ ಎಲ್ಲಾ ಪ್ರಕರಣಗಳಿಗೆ ಉಚಿತ ಚಿಕಿತ್ಸೆ. ಕಫವನ್ನು ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ
• ಅಪೂರ್ಣ ಚಿಕಿತ್ಸೆಯು ಹೆಚ್ಚಿನ ತೊಂದರೆಗಳಿಗೆ ಕಾರಣವಾಗಬಹುದು
• ವಿಶೇಷವಾಗಿ ಕೊಳಚೆ ಪ್ರದೇಶದಲ್ಲಿ ವಾಸವಿರುವವರಿಗೆ,ಬಿಡಿ ಕಾರ್ಮಿಕರು, ನೇಕಾರ ಸಮುದಾಯ,ಹೆಚ್ಐವಿ ಸೊಂಕಿತರು,ಮಧುಮೇಹ , ತಂಬಾಕು ಸೇವನೆ, ಮಾಡುವವರಿಗೆ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ
ಅರೋಗ್ಯ ಸಿಬ್ಬಂದಿ (ಆಶಾ ಕಾರ್ಯಕರ್ತೆಯರು )ನಿಮ್ಮ ಮನೆ ಬಳಿ ಬಂದಾಗ ಪರೀಕ್ಷೆಗೆ ಸಹಕರಿಸಿ ಕ್ಷಯರೋಗದ ಪತ್ತೆ ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿನೀಡಿ…..
ಕ್ಷಯಮುಕ್ತ ಸಮಾಜಕ್ಕೆ ಕೈ ಜೋಡಿಸಿ ಎಂದು ಅರೋಗ್ಯ ಇಲಾಖೆ ತಿಳಿಸಿದೆ