
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರಭಾಗದ ಡಿ ವಿ ಪಿ ಕನ್ವೆನ್ಷನ್ ಹಾಲ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಕಸಬಾ ವಲಯದ ವತಿಯಿಂದ ಶ್ರೀ ಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ನವಜೀವನ ಸಮಿತಿಯ ಸಹಭಾಗಿತ್ವದಲ್ಲಿ ಶ್ರೀ ಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು..
ಸಾಮೂಹಿಕ ಲಕ್ಷ್ಮಿ ಪೂಜೆಯ ಜೊತೆಗೆ ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು
ಪೂಜಾ ಕಾರ್ಯಕ್ರಮ ನೆರವೇರಿಸಿದ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ ನಾಗರಾಜ್ ಮಾತನಾಡಿ ಸಂಘದ ಒಳಿತಿಗಾಗಿ ಹಾಗೂ ಸರ್ವರಿಗೂ ಶುಭವಾಗಲಿ ಎಂಬ ಕಾರಣಕ್ಕೆ ಈ ಸಾಮೂಹಿಕ ಲಕ್ಷ್ಮಿ ಪೂಜೆ ಆಯೋಜನೆ ಮಾಡಲಾಗಿದೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಮನವಿಯ ಮೇರೆಗೆ ಪೂಜೆಯಲ್ಲಿ ನಾವು ಪಾಲ್ಗೊಂಡಿದ್ದು ಸರ್ವರಿಗೂ ಶುಭವಾಗಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ಸರ್ವರಿಗೂ ಧನ್ಯವಾದಗಳು ಎಂದು ತಿಳಿಸಿದರು
ಧಾರ್ಮಿಕ ಪ್ರವಚನಕರರು ಹಾಗೂ ಶರಣ ಸಾಹಿತ್ಯ ಪರಿಷತ್ ನ ತಾಲ್ಲೂಕು ಅಧ್ಯಕ್ಷರಾದ ಶ್ರೀ ಮಹಾಲಿಂಗಯ್ಯ ನವರು ಮಾತನಾಡಿ ಮಾತೆಯರು ಮಕ್ಕಳನ್ನು ಬೆಳಸುವ ವಿಧಾನ ಅರಿಯಬೇಕಿದೆ ಭಕ್ತಿಗಿರುವ ಶಕ್ತಿ ಅಪಾರವಾದದ್ದು ಶಿಸ್ತು,ನಿಷ್ಠೆ, ಕಾಯಕ ಪ್ರತಿಯೊಬ್ಬರಲ್ಲೂ ಮೂಡಬೇಕಿದೆ ಇಂದು ತಾವೆಲ್ಲರೂ ಸೇರಿ ಸಾಮೂಹಿಕವಾಗಿ ಆಚರಿಸಿರುವ ಲಕ್ಷ್ಮಿ ಪೂಜೆ ವಿಶೇಷವಾದದ್ದು ಸರ್ವರಿಗೂ ಲಕ್ಷ್ಮಿದೇವಿ ಒಳಿತು ಮಾಡಲಿ ಎಂದು ಸಣ್ಣ ಸಣ್ಣ ಕಥೆಗಳನ್ನು ಹೇಳುವ ಮೂಲಕ ಧಾರ್ಮಿಕ ಅರಿವು ಮೂಡಿಸಿದರು
ಜಿಲ್ಲಾ ನಿರ್ದೇಶಕರಾದ ಉಮರಬ್ಬ ರವರು ಮಾತನಾಡಿ ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದ ಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ನವಜೀವನ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಲ್ಲರ ಸಹಕಾರ ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಉಮರಬ್ಬ ಜಿಲ್ಲಾ ನಿರ್ದೇಶಕರು,ರಾಘವೇಂದ್ರ ಸ್ವಾಮಿಅರ್ಚಕರು ಮುತ್ಯಾಲಮ್ಮ ದೇವಾಲಯ,ನಾಗರಾಜ್ ಜನಜಾಗೃತಿ ವೇದಿಕೆ,ಶಶಿಕಲಾ ನಾಗರಾಜ್ ಗ್ರಾಮ ಪಂಚಾಯಿತಿ ಸದಸ್ಯರು ,ಸುಧಾ ಭಾಸ್ಕರ್ ಯೋಜನಾಧಿಕಾರಿಗಳು , ಶಶಿಕಲಾ ಯೋಜನಾಧಿಕಾರಿಗಳು,ದೊಡ್ಡನಂಜುಡಪ್ಪ ಅಧ್ಯಕ್ಷರು ಗ್ರಾಮ ಪಂಚಾಯಿತಿ ದರ್ಗಾ ಜೊಗಹಳ್ಳಿ,ವೈಷ್ಣವಿ,ಲೋಹಿತ್ ಕೃಷಿ ಮೇಲ್ವಿಚಾರಕರು,ಒಕ್ಕೂಟದ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಸೇವಾಪ್ರತಿನಿಧಿಗಳು, ಸಾವಿರಾರು ಸದಸ್ಯರು ಭಾಗವಹಿಸಿದ್ದರು