
ದೊಡ್ಡಬಳ್ಳಾಪುರ : ಕನ್ನಡಪರ ಸಂಘಟನೆಗಳ ಒಕ್ಕೂಟ ,ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಜಾಗೃತಿ ವೇದಿಕೆಯ ಸಹಯೋಗದೊಂದಿಗೆ ಹಿರಿಯ ನಟಿ ಡಾ. ಲೀಲಾವತಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೊಂಬತಿ ಹಿಡಿದು ಸಂತಾಪ ಸೂಚಿಸಿದರು
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರು ಮೌನಾಚರಣೆ ಮಾಡುವ ಮೂಲಕ ಹಿರಿಯ ನಟಿ ಲೀಲಾವತಿಯವರಿಗೆ ಗೌರವ ಸಮರ್ಪಣೆ ಮಾಡಿದರು
ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷರಾದ ಎ.ನಂಜಪ್ಪ ಮಾತನಾಡಿ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ರವರ ಅಗಲಿಕೆ ನಮ್ಮೆಲ್ಲರಿಗೂ ತುಂಬಲಾರದ ನಷ್ಟ. ಕರುನಾಡು ಮತ್ತೊಬ್ಬ ಅದ್ಭುತ ಕಲಾವಿದರನ್ನು ಕಳೆದುಕೊಂಡಿದೆ ನಟ ವಿನೋದ್ ರಾಜ್ ಕುಟುಂಬಕ್ಕೆ ನೋವನ್ನು ತಡೆಯುವ ಶಕ್ತಿ ಭಗವಂತ ನೀಡಲಿ ಎಂದು ತಿಳಿಸಿದರು
ಕನ್ನಡ ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ನಾಗರಾಜು ಮಾತನಾಡಿ ಲೀಲಾವತಿ ಅಮ್ಮನವರ ಚಿತ್ರಗಳನ್ನು ನಾವು ನೋಡಿಕೊಂಡು ಬೆಳೆದಿದ್ದೇವೆ. ಅವರ ಅಗಲಿಕೆ ಮನಸ್ಸಿಗೆ ತುಂಬಾ ನೋವನ್ನು ಉಂಟುಮಾಡಿದೆ ಅವರ ಸಾವಿನ ವಿಷಯ ನಂಬಲು ಸಾಧ್ಯವಾಗತ್ತಿಲ್ಲ ಅವರು ತಮ್ಮ ಸಿನಿಮಾಗಳ ಮೂಲಕ ಸದಾ ಜೀವಂತವಾಗಿರುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಕನ್ನಡ ಸಾಹಿತ್ಯ ಪರಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಪ್ರಮೀಳಾ ಮಹಾದೇವ್ ಮಾತನಾಡಿ ಲೀಲಾವತಿ ಯವರ ನಟನೆಗೆ ಅವರೇ ಸಾಟಿ ಅವರು ಮೊದಲ ಪಂಚಭಾಷಾ ನಟಿ ಎಂದರೆ ತಪ್ಪಾಗಲಾರದು ಕೇವಲ ಕೆಲವು ವಿಚಾರಗಳ ಹಿನ್ನಲೆಯಲ್ಲಿ ಒಬ್ಬ ಮಹಾನ್ ನಟಿಯನ್ನು ಕಡೆಗಣಿಸುವುದು ಸರಿ ಇಲ್ಲ ಇನ್ನಾದರೂ ಅವರಿಗೆ ತಕ್ಕ ಗೌರವ ಸಲ್ಲುವಂಥಗಬೇಕು , ನಟ ವಿನೋದ್ ರಾಜ್ ರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದೇವೆ ನಾವು ಲೀಲಾವತಿ ಅಮ್ಮನವರ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದು ಅವರ ಸಾವಿನ ಸಂಗತಿ ಆಘಾತವನ್ನುಂಟುಮಾಡಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಉಪದ್ಯಕ್ಷರಾದ ನಯಾಜ್ ಖಾನ್ ,ದರ್ಶನ್ ,ಹರೀಶ್, ಗಂಗಣ್ಣ, ಫಿರ್ ಪಾಷಾ,ಕುಮಾರ್,ಮಂಜುನಾಥ್, ತರುಣ್ ,ಮಮತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು