
ದೇವನಹಳ್ಳಿ :ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪಬ್ಲಿಕ್ ಶಾಲೆಯಲ್ಲಿ 2000-01 ಸಾಲಿನ ವಿದ್ಯಾರ್ಥಿಗಳಿಂದ ತಮ್ಮ ನೆಚ್ಚಿನ ಗುರುಗಳಿಗೆ ಗುರುವಂದನ ಕಾರ್ಯಕ್ರಮವನ್ನು ಡಿಸೆಂಬರ್ 17 ರಂದು ಕುವೆಂಪುರಂಗ ಮಂದಿರದಲ್ಲಿ ಆಯೋಜಿಸಲಾಗಿತ್ತು.
ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲರಾದ ಶ್ರೀ ಶಿವಶಂಕರ್ ರೆಡ್ಡಿ ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ವೆಂಕಟೇಶ್ವರ ರವರು ವಹಿಸಿದ್ದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶಿವಶಂಕರ್ ರೆಡ್ಡಿ ಮಾತನಾಡಿ ಶಿಕ್ಷಕರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿರುವ 2000-2001 ನೇ ಸಾಲಿನ ವಿದ್ಯಾರ್ಥಿಗಳ ಶ್ರಮಕ್ಕೆ ಅಭಿನಂಧನೆಗಳು, ತಮ್ಮ ನೆಚ್ಚಿನ ಗುರುಗಳಿಗೆ ಈ ಕಾರ್ಯಕ್ರಮವು ವಿಶೇಷ ಕೊಡುಗೆ ಎಂದರೆ ತಪ್ಪಾಗಲಾರದು ಪ್ರಸ್ತುತ ವಿದ್ಯಾರ್ಥಿಗಳಿಗೆ ಹಳೇ ವಿದ್ಯಾರ್ಥಿಗಳ ಈ ಕಾರ್ಯ ವೈಖರಿ ಮಾದರಿಯಾಗಲಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ 2001-2001ನೇ ಸಾಲಿನ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ನೆಚ್ಚಿನ ಗುರುಗಳೊಂದಿಗೆ ಕಳೆದ ಸಮಯವನ್ನು ನೆನೆದು ಭಾವುಕರಾದರು ಹಾಗೂ ತಮ್ಮ ವಿದ್ಯಾಭ್ಯಾಸದ ಸಮಯದ ಸಿಹಿ ಸಮಯದ ಅನುಭವನ್ನು ಎಲ್ಲರೊಂದಿಗೆ ಹಂಚಿಕೊಂಡರು
ಈ ಸಂದರ್ಭದಲ್ಲಿ 2000-01 ನೇ ಸಾಲಿನ ಶಿಕ್ಷಕರುಗಳಾದ ಶ್ರೀ ಪರಶುರಾಮಪ್ಪ, ಶ್ರೀ ನಾಗಪ್ಪ ಗೌಡ, ಶ್ರೀ ಶ್ರೀನಿವಾಸ ಉಮರ್ಜಿ ಶ್ರೀ ಹನುಮಂತಪ್ಪ ಶ್ರೀ ಮಂಜುನಾಥ ಶ್ರೀಮತಿ ಕುಸುಮ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭಕೋರಿದರು