
ದೊಡ್ಡಬಳ್ಳಾಪುರ : 2024 ರ ಜನವರಿ 21 ಹಾಗೂ 22 ರಂದು ತಾಲ್ಲೂಕಿನ ಭಾಶೇಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಡಶಾಲೆಯಲ್ಲಿ 13 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ಘೋಷಿಸಿದರು ಈ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ . ಅಂಜಿನಪ್ಪ ವಹಿಸಿದ್ದಾರೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಲಾಂಛನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಮ್ಮುಖದಲ್ಲಿ ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ಲೋಕಾರ್ಪಣೆ ಮಾಡಿದರು .
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ 13 ನೇ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯಬೇಕಿದೆ ಈ ಕಾರ್ಯಕ್ರಮ ನಮ್ಮ ಹಬ್ಬ ಕನ್ನಡಿಗರ ಹಬ್ಬವಾಗಿದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಡಾ ಅಂಜಿನಪ್ಪ ಸರ್ ರವರು ಪ್ರತಿಭಾನ್ವಿತರು ಸಮಾಜಕ್ಕೆ ತಮ್ಮದೇ ಆದ ವಿಶೇಷ ಸೇವೆ ಸಲ್ಲಿಸಿದ್ದಾರೆ ಕಾರ್ಯಕ್ರಮದ ದಿನಾಂಕ 2024 ರ ಜನವರಿ ತಿಂಗಳ 21ಮತ್ತು 22 ರಂದು ನಿಗದಿ ಪಡಿಸಲಾಗಿದೆ ಈ ಕಾರ್ಯಕ್ರಮವು ತುಂಬಾ ವಿಶೇಷವಾಗಿದ್ದು ತಾಲ್ಲೂಕಿನ ಕನ್ನಡ ಮನಸ್ಸುಗಳು ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಭಾಷೇಟ್ಟಿ ಹಳ್ಳಿ ಪಟ್ಟಣ ಪಂಚಾಯತಿ ಬೆಂಗಳೂರಿಗೆ ಹೆಬ್ಬಾಗಿಲು ಎಂದರೆ ತಪ್ಪಾಗಲಾರದು ಈ ಮೂಲಕ ರಾಜ್ಯಕ್ಕೆ ಕನ್ನಡ ಸಿಹಿಯನ್ನು ಹಂಚಲು ಹೊರಟಿರುವ ತಂಡಕ್ಕೆ ಶುಭವಾಗಲಿ ಈ ಸಮ್ಮೇಳನ ಬಹಳ ಅರ್ಥಪೂರ್ಣ ವಾಗಿದೆ ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ಒಬ್ಬ ನುರಿತ ವೈದ್ಯರಾದ ಡಾ ಅಂಜಿನಪ್ಪ ರವರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಷಯವಾಗಿದೆ ಲಾಂಛನ ಅನಾವರಣ ಮಾಡಿದ ಶಾಸಕ ಧೀರಜ್ ಮುನಿರಾಜು ರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು
ಶಾಸಕ ಧೀರಜ್ ಮುನಿರಾಜು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೃಷ್ಣಪ್ಪ , ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋವಿಂದ್ ರಾಜು, ಸ್ಥಳೀಯರಾದ ಪ್ರೇಮ್ ಕುಮಾರ್, ಮುದ್ದಪ್ಪ ,ಸುರೇಶ್ ಬಾಬು, ಸಿದ್ದಪ್ಪ, ರವಿ, ರಾಜಶೇಖರ್ ವೆಂಕಟೇಶ್,ಪೀಳ್ಳಣ್ಣ, ಮುಖ್ಯ ಶಿಕ್ಷಕರಾದ ನಾರಾಯಣ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು