
ದೊಡ್ಡಬಳ್ಳಾಪುರ : ಸ್ಥಳೀಯವಾಗಿ ಶಾಲಾ ಬಸ್ ಹಾಗೂ ಟೆಂಪೋ ಟ್ರಕ್ ಗಳ ಮಾರಾಟದ ಬೇಡಿಕೆ ಮೇರೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಪಿಎಸ್ಏನ್ ಘಟಕವನ್ನು ಸ್ಥಾಪಿಸಲಾಗಿದೆ ಅತ್ಯುತ್ತಮ ಸೇವೆ ನೀಡುವಲ್ಲಿ ಹೆಸರುವಾಸಿಯಾಗಿರುವ ನಮ್ಮ ಸಂಸ್ಥೆ ಇನ್ನೂ ಮುಂದೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅಧಿಕೃತವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಪಿಎಸ್ಏನ್ ಸಂಸ್ಥೆಯ ಜಂಟಿ ನಿರ್ವಾಹಕ ನಿರ್ದೇಶಕರಾದ ಪವಿತ್ರ ಪದ್ಮನಾಭನ್ ತಿಳಿಸಿದರು
ತಾಲ್ಲೂಕಿನ ಕೆಸ್ತೂರು ಗೇಟ್ ಬಳಿ ಯಿಚರ್ ಪಿಎಸ್ಏನ್ ಉದ್ಘಾಟಿಸಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ನೂತನ ಪಿಎಸ್ಏನ್ ಘಟಕ ಜನತೆಯ ಸೇವೆಗೆ ಸಿದ್ಧವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ನಮ್ಮ ಸಂಸ್ಥೆಯ ಹೆಮ್ಮೆಯ ಘಟಕ ಇದಾಗಿದ್ದು ಈ ಘಟಕದಲ್ಲಿ ಗ್ರಾಹಕರಿಗೆ ವಾಹನಗಳ ಮಾರಾಟದ ಜೊತೆಗೆ ಸೇವೆಯು ಲಭ್ಯವಿದ್ದು ಗ್ರಾಹಕರು ಪಿಎಸ್ಏನ್ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು
ಪಿಎಸ್ಏನ್ ಘಟಕ ಕಾರ್ಯಚರಣೆಯ ಮುಖ್ಯಸ್ಥರಾದ ಸುದರ್ಶನ್ ಮಾತನಾಡಿ ಪಿಎಸ್ಏನ್ ಘಟಕದಲ್ಲಿ 350 ಕ್ಕೂ ಅಧಿಕ ಸಿಬ್ಬಂದಿ ಇದ್ದು ಕರ್ನಾಟಕದಲ್ಲಿ 20 ಕಡೆಗಳಲ್ಲಿ ನಮ್ಮ ಅಧಿಕೃತ ಬ್ರಾಂಚ್ ಗಳಿವೆ ನಮ್ಮ ಬ್ರಾಂಚ್ ಗಳು ನೀಡುತ್ತಿರುವ ಸೇವೆಗಳಿಂದ ನಾವು ಉನ್ನತ ಮಟ್ಟದಲ್ಲಿದ್ದೇವೆ ಗ್ರಾಹಕರ ಸ್ಥಳಕ್ಕೆ ಭೇಟಿನೀಡಿ ಸೇವೆ ಸಲ್ಲಿಸುವುದು ನಮ್ಮ ವಿಶೇಷತೆ. ಸ್ಥಳೀಯವಾಗಿ 400ಕ್ಕೂ ಅಧಿಕ ಶಾಲೆಗಳಿರುವ ಕಾರಣ ಶಾಲಾ ವಾಹನಗಳು ಹಾಗೂ ವಾಣಿಜ್ಯ ವಾಹನಗಳಿಗೆ ನಮ್ಮ ಬ್ರಾಂಚ್ ಅತ್ಯುತ್ತಮ ಸೇವೆ ಒದಗಿಸಲಿದೆ ಎಂದು ತಿಳಿಸಿದರು
ಗ್ರಾಹಕ ಸೇವೆ ಮತ್ತು ಜಾಲತಾಣ ತಂತ್ರಗಾರಿಕೆ ವಿಭಾಗದ ಕಾರ್ಯಕಾರಿ ಉಪಾಧ್ಯಕ್ಷರಾದ ರಮೇಶ್ ರಾಜಗೋಪಾಲ್ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ನೂತನ ಘಟಕ ಪಿಎಸ್ಏನ್ ಸಂಸ್ಥೆಗೆ 10 ಘಟಕವಾಗಿದೆ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವ ಉದ್ದೇಶದಿಂದ ಗ್ರಾಹಕರ ಬೇಡಿಕೆ ಮೇರೆಗೆ ಈ ಘಟಕವನ್ನು ಪ್ರಾರಂಭಿಸಲಾಗಿದೆ ನೂತನ ಘಟಕವು ಹೆದ್ದಾರಿಯ ಪಕ್ಕದಲ್ಲೇ ಇರುವ ಕಾರಣ ಗ್ರಾಹಕರಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ತಿಳಿಸಿದರು
ದೊಡ್ಡಬಳ್ಳಾಪುರ ಕಾರ್ಯಗಾರ ಘಟಕದ ಮುಖ್ಯಸ್ಥರಾದ ಯುವರಾಜ್ ಸಿ ವಿ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆಯ ಅನುಕೂಲಕ್ಕೆ ತಕ್ಕಂತೆ ಅತ್ಯುತ್ತಮ ಸೇವೆ ಹಾಗೂ ತಂತ್ರಜ್ಞಾನದೊಂದಿಗೆ ನಮ್ಮ ಘಟಕ ಪ್ರಾರಂಭವಾಗಿದ್ದು ನುರಿತ ಅನುಭವಿತಂಡದೊಂದಿಗೆ ಗ್ರಾಹಕ ಸೇವೆಗೆ ಮುಂದಾಗಿದ್ದೇವೆ. ಗ್ರಾಹಕರ ಸೇವಾ ತೃಪ್ತಿ ನಮ್ಮ ಮುಖ್ಯ ಉದ್ದೇಶ ನಮ್ಮಲ್ಲಿ ಹಲವು ಬಗೆಯ ಸೇವೆಗಳು ಲಭ್ಯವಿದ್ದು ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ನೀಡಲಾಗುತ್ತಿದೆ ಪಿಎಸ್‌ಏನ್ ಸಂಸ್ಥೆಗೆ ಭೇಟಿ ನೀಡಿ ಅತ್ಯುತ್ತಮ ಸೇವಾ ಭಾವನೆ ಪಡೆಯಿರಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಸಂಸ್ಥೆಯ ವಿನಯ್ ಕುಮಾರ್ ಪಂಡಿತ್ ಒಳಗೊಂಡಂತೆ ಪಿಎಸ್ಏನ್ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು