
ದೊಡ್ಡಬಳ್ಳಾಪುರ : ಕಳೆದ ಮೂರು ವರ್ಷಗಳಿಂದ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದಲ್ಲಿ ನಿಂತು ಹೋಗಿದ್ದ ದನಗಳ ಜಾತ್ರೆ ಈ ಬಾರಿ ಅದ್ಧೂರಿಯಾಗಿ ಆರಂಭವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜೋಡಿ ಎತ್ತುಗಳು ಜಾತ್ರೆಯಲ್ಲಿ ಸೇರಿವೆ.ಜಾತ್ರೆಯಲ್ಲಿ ಸೇರಿರುವ ಜಾನುವಾರುಗಳಿಗೆ ನವ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ಉಚಿತವಾಗಿ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ರೈತರಿಗೆ ನೆರವಾಗಿದೆ
ಈ ಸಂದರ್ಭದಲ್ಲಿ ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಅಂಬರೀಷ್ ಮಾತನಾಡಿ ಕಳೆದ ವರ್ಷಗಳಲ್ಲಿ ಕೊರೊನಾ ವೈರಸ್ ಹಾಗೂ ದನಗಳಲ್ಲಿ ಕಂಡುಬಂದ ಗಂಟು ರೋಗದ ಕಾರಣ ಮೂರು ವರ್ಷಗಳ ಕಾಲ ದನಗಳ ಜಾತ್ರೆಯನ್ನು ನಿಲ್ಲಿಸಲಾಗಿತ್ತು ಆದರೆ ಈ ಬಾರಿ ಘಾಟಿ ಸುಬ್ರಮಣ್ಯ ಕ್ಷೇತ್ರದ ದನಗಳ ಜಾತ್ರೆ ಬಹಳ ಅದ್ದೂರಿಯಾಗಿ ಜ ನಡೆಯುತ್ತಿದ್ದು ಬಹಳಷ್ಟು ಸಂಖ್ಯೆಯಲ್ಲಿ ರೈತರು ತಮ್ಮ ಎತ್ತುಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಬಂದಿದ್ದಾರೆ.ನಮ್ಮ ವೇದಿಕೆಯ ವತಿಯಿಂದ ಜಾನುವಾರುಗಳಿಗೆ ದಿನದಲ್ಲಿ ಎರಡು ಬಾರಿ ಉಚಿತವಾಗಿ ಮೇವು ಮತ್ತು ಉಚಿತವಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ,ರೈತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ದನಗಳಿಗೆ ಮೇವು ವಿತರಣೆ ಮಾಡಿದ ಹಲವು ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಆರ್ ಪ್ರತಾಪ್ , ತೂಬಗೆರೆ ಪಂಚಾಯ್ತಿ ಸದಸ್ಯ ಕೃಷ್ಣಪ್ಪ , ಸ್ಥಳೀಯರಾದ ವಾಸು, ಹರೀಶ್, ಸಿ ಎ ಪಿ ಎಫ್ ನ ಪ್ರಧಾನ ಕಾರ್ಯದರ್ಶಿ ಅನಂತ ರಾಜ ಗೋಪಾಲ ,ಉದಯ ಆರಾಧ್ಯ, ಮತ್ತಿತರರು ಉಪಸ್ಥಿತರಿದ್ದರು