
ದೊಡ್ಡಬಳ್ಳಾಪುರ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ರವರ ಸವಿನೆನಪಿನಲ್ಲಿ ಜನವರಿ 30 ರಂದು ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆಯ ಸಹಯೋಗದೊಂದಿಗೆ ಸೌಹಾರ್ಧ ಕರ್ನಾಟಕ ಎಂಬ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಈ ಕಾರ್ಯಕ್ರಮದ ಆಯೋಜನೆ ಕುರಿತಂತೆ ದೊಡ್ಡಬಳ್ಳಾಪುರ ನಗರ ಭಾಗದ ಕನ್ನಡ ಜಾಗೃತಿ ಪರಿಷತ್ತಿನಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು
ಸಭೆಯಲ್ಲಿ ತಾಲ್ಲೂಕಿನ ಪ್ರಗತಿಪರ ಚಿಂತಕರಾದ ಆರ್ .ಚಂದ್ರ ತೇಜಸ್ವಿ ಮಾತನಾಡಿ ರಾಜ್ಯಕ್ಕೆ ಮಾದರಿಯಾಗುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಕಾರ್ಯಕ್ರಮದ ರೂಪುರೇಷೆಯನ್ನು ನಿರ್ಧರಿಸಲು ಈ ಸಭೆ ಕರೆಯಲಾಗಿದ್ದು ತಾಲ್ಲೂಕಿನ ಹಲವು ಮುಖಂಡರು ಸ್ವಯಿಚ್ಚೆಯಿಂದ ಭಾಗವಹಿಸಿದ್ದಾರೆ ಹಾಗೂ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು
ದಲಿತ ಮುಖಂಡರು ,ಪತ್ರಕರ್ತರು ಆದ ರಾಜು ಸಣ್ಣಕ್ಕಿ ಮಾತನಾಡಿ ಕಾರ್ಯಕ್ರಮವನ್ನು ತಾಲ್ಲೂಕಿನ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಪ್ರಚಾರಕ್ಕೆ ಒತ್ತು ನೀಡಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸುವಂತೆ ಶ್ರಮಿಸಬೇಕಿದೆ ಉತ್ತಮ ಸಂದೇಶವುಳ್ಳ ಕಾರ್ಯಕ್ರಮ ರೂಪಿಸಿರುವ ಹೆಮ್ಮೆ ನಮಗಿದೆ ಕಾರ್ಯಕ್ರಮದ ಆಯೋಜನೆಗೆ ತಾಲ್ಲೂಕಿನ ಪ್ರಗತಿಪರ ಚಿಂತಕರು , ದಲಿತ ಮುಖಂಡರು,ಪ್ರಜ್ಞಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಒಟ್ಟಾಗಿ ಶ್ರಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮುಂದಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಸಭೆಯಲ್ಲಿ ಪ್ರಕಾಶ್ ಮಂಟೇದ ಸೇರಿದಂತೆ ತಾಲ್ಲೂಕಿನ ಹಲವು ಮುಖಂಡರು , ಪ್ರಗತಿಪರ ಚಿಂತಕರು, ದಲಿತ ಮುಖಂಡರು ಉಪಸ್ಥಿತರಿದ್ದರು .