ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾಸೀತರಾಮನ್ ಫೆಬ್ರವರಿ 1ರಂದು ಮಧ್ಯಂತರ ಮುಂಗಡ ಪತ್ರ ಮಂಡಿಸುವ ಮೂಲಕ ಸತತ ಆರನೇ ಬಾರಿಗೆ ಕಾರ್ಯನಿರ್ವಹಿಸಿದ ದಾಖಲೆ ಬರೆಯಲ್ಲಿದ್ದಾರೆ.ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಸಹಿತ ಹಲವರ ದಾಖಲೆಗಳನ್ನು ಮುರಿಯಲಿದ್ದಾರೆ. ಮನಮೋಹನ್ ಸಿಂಗ್, ಅರುಣ್ ಜೇಟ್ಲಿ,ಪಿ.ಚಿದಂಬರಂ,ಯಶವಂತ್ ಸಿನ್ಹ ಸತತ ಐದು ಬಾರಿ ಬಜೆಟ್ ಗಳನ್ನು ಮಂಡಿಸಿದ್ದರು.ಮೊರಾರ್ಜಿ ದೇಸಾಯಿ ಅವರು ಹಣಕಾಸು ಸಚಿವರಾಗಿದ್ದ 1959-64ರ ನಡುವೆ ಐದು ವಾರ್ಷಿಕ ಹಾಗೂ ಮಧ್ಯಂತರ ಅಯವ್ಯಯ ಪತ್ರವನ್ನು ಮಂಡಿಸಿದ್ದರು. 2024-25ನೇ ಸಾಲಿನ ಮಧ್ಯಂತರ ಮುಂಗಡಪತ್ರವನ್ನು ಮಂಡಿಸಲಿದ್ದಾರೆ.
