
ದೊಡ್ಡಬಳ್ಳಾಪುರ (ವಿಜಯಮಿತ್ರ) : ಮಹಿಳೆಯರು ವ್ಯಾಪಾರ, ಕ್ರೀಡೆ, ಸ್ವ ಉದ್ಯೋಗ, ಇತ್ಯಾದಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾಧಿಕಾರಿ ಎಂ ನಾಗಮಣಿ ಹೇಳಿದರು.
ಅವರು ತಾಲ್ಲೂಕಿನ ಮದುರೆ ಹೋಬಳಿಯ ಕೊಡಿಹಳ್ಳಿಪಾಳ್ಯ ಗ್ರಾಮದಲ್ಲಿ ಚೆನ್ನದೇವಿ ಅಗ್ರಹಾರ ಗ್ರಾಮ ಪಂಚಾಯತಿ ಹಾಗೂ ಜೈಭಾರತಿ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರ ಹಲವು ಸಾಧನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.ಮಹಿಳೆಯರು ಸ್ವಾವಲಂಬಿ ಬದುಕಿನ ಕಡೆ ಹೆಚ್ಚು ಗಮನ ನೀಡಿದಾಗ ಮಾತ್ರ ಅವರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ. ಭಾರತದಲ್ಲಿ ಮಹಿಳೆಯರು ವಿವಿಧ ರೀತಿಯ ಚಟುವಟಿಕೆಗಳನ್ನು ತೊಡಗಿಸಿಕೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ಸ್ಥಳೀಯ ಮಹಿಳಾ ಒಡೆತನದ ಹಲವು ಸಂಸ್ಥೆಗಳನ್ನು ಗುರುತಿಸುವುದು. ಮಹಿಳಾ ಚಾರಿಟಿಗಾಗಿ ನಿಧಿಯನ್ನು ಸಂಗ್ರಹಿಸುವುದು. ಸ್ಪೂರ್ತಿದಾಯಕ ಮಹಿಳೆಯರ ಬಗ್ಗೆ ಕಲಿಯುವುದು. ಒಬ್ಬರ ಜೀವನದಲ್ಲಿ ಬದಲಾವಣೆಯನ್ನು ತಂದ ಮಹಿಳೆಯರನ್ನು ಗುರುತಿಸುವುದು. ಪುರುಷರಷ್ಟೆ ಸಮಾನವಾಗಿ ಎಲ್ಲಾ ರಂಗಗಳಲ್ಲಿ ಸಾದನೆ ಮಾಡಿರುವುದನ್ನು ನಾವು ನೋಡಬಹುದು.ಇದು ಲಿಂಗ ಸಮಾನತೆ ಹಾಗೂ ಜಗತ್ತನ್ನು ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಹೇಳಲು ಒಂದು ಉತ್ತಮ ಉದಾಹರಣೆ. ಮಹಿಳಾ ಸಾಧಕರನ್ನು ನೆನೆದು ಸಮಾನತೆಯನ್ನು ಸಾರುವ ದಿನ ಎಂದು ಹೇಳಬಹುದು. ಈ ದಿನವನ್ನು ಸಣ್ಣ ಕಂಪನಿಗಳಿಂದ ಹಿಡಿದು, ದೊಡ್ಡ ಕಂಪನಿಗಳು, ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳಲ್ಲೂ ಮೌಲ್ಯಯುತ ಭಾಷಣಗಳನ್ನು ಮಾಡುವ ಮೂಲಕ ಆಚರಣೆ ಮಾಡುವುದು. ಹಾಗೆ ಬಹುಮುಖ್ಯವಾದ ವಿಷಯಗಳ ಬಗ್ಗೆ ಪತ್ರಿಕಾಗೋಷ್ಠಿಗಳು ಸಹ ನೆಡೆಸುವುದು. ಮಹಿಳೆಯರ ಸಮಾನತೆಯನ್ನು ಎಲ್ಲರಿಗೂ ತಿಳಿಯುವಂತೆ ಹೇಳುವ ದಿನವಾಗಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯೆ ಎಸ್ ಜಿ ಕಾಂತಲಕ್ಷ್ಮೀ ಮಾತನಾಡಿ ಮದುರೆ ಹೋಬಳಿಯ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರ ಕ್ಕೆ ಹೆಚ್ವಿನ ಆದ್ಯತೆ ನೀಡಬೇಕಾಗಿದೆ. ಮಹಿಳೆಯರು ಸಂಘದಿಂದ ಸಾಲ ಸೌಲಭ್ಯ ಪಡೆದು ಕೊಂಡು ಸ್ವ ಉದ್ಯೋಗ ಅಂದರೆ ಕುರಿ, ಮೇಕೆ, ಕೋಳಿ, ಹಸು ಸಾಗಾಣಿಕೆ ಮಾಡಿಕೊಳ್ಳಬಹುದು. ಇದಲ್ಲದೆ ಕೃಷಿಯಲ್ಲಿ ಅನೇಕ ಮಾದರಿಯ ಬೆಳೆಗಳನ್ನು ನಾವು ಬೆಳೆದಾಗ ಮಾತ್ರ ಉತ್ತಮ ಲಾಭದಾಯಕ ಕೃಷಿ ಮಾಡಲು ಸಾಧ್ಯವಾಗುತ್ತದೆ. ಸಮಗ್ರ ಕೃಷಿಯನ್ನ ನಮ್ಮ ಜಮೀನುಗಳಲ್ಲಿ ಅಳವಡಿಸಿಕೊಂಡು ಉತ್ತಮ ಇಳುವರಿ ಉತ್ತಮ ಬೆಳೆ. ಬೆಳಗ್ಗೆ ತಕ್ಕಂತೆ ಲಾಭ ಪಡೆದು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು. ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸರಕಾರದ ವಿವಿದ ಇಲಾಖೆಯ ಅನೇಕ ಯೋಜನೆಗಳ ಮಾಹಿತಿ ಪಡೆದುಕೊಂಡು ಅದನ್ನು ಸದುಉಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮಕುಮಾರಿ, ಸದಸ್ಯರಾದ ರೂಪಶ್ರೀ, ಪ್ರಮೀಳಾ, ಸುಧಾ, ಮಂಜುನಾಥ್, ಜಗದೀಶ್ ಅಮರೇಶ್ ಕುಮಾರ್, ಪಿಡಿಒ ನಂದಕುಮಾರ್, ಎಂಬಿಕೆ ಬೀರಮ್ಮ, ಸಿಬ್ಬಂದಿಗಳಾದ ನವೀನ್. ಬಾಗ್ಯಮ್ಮ, ಮಂಜುಳ ಸೇರಿದಂತೆ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.