
ಅನಾರೋಗ್ಯದ ಕಾರಣ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲವೆಂದು, ತಮ್ಮನ್ನು ನೋಡಲು ಬರುವ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ
ಹೌದು ಪ್ರತಿ ವರ್ಷ ಫೆಬ್ರವರಿ 16ರಂದು ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹುಟ್ಟುಹಬ್ಬಕ್ಕೆ ಶುಭಕೋರಿ ಸಂಭ್ರಮಿಸುತ್ತಿದ್ದರು , ಈ ಸಂದರ್ಭದಲ್ಲಿ ದರ್ಶನ್ ಸ್ವತಃ ತಾವೇ ಅಭಿಮಾನಿಗಳಿಗೆ ಕೈಕುಲುಕುವ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದರು, ಆದರೆ ಈ ಬಾರಿ ಬೆನ್ನು ಮೂಳೆ ಸಂಬಂಧಿತ ಆರೋಗ್ಯ ಸಮಸ್ಯೆ ಇರುವ ಕಾರಣ ತಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಟ ದರ್ಶನ್ ತಿಳಿಸಿದ್ದಾರೆ.
ಅನಾರೋಗ್ಯದ ಕಾರಣ ತುಂಬಾ ಹೊತ್ತು ನಿಲ್ಲಲು ಸಾಧ್ಯವಾಗುವುದಿಲ್ಲ, ತಮ್ಮನ್ನು ನೋಡಲು ಬರುವ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಲು ಇಷ್ಟವಿಲ್ಲದ ಕಾರಣ ಈ ಬಾರಿ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡುತ್ತಿಲ್ಲವೆಂದು ತಿಳಿಸಿದ್ದಾರೆ.
ನಟ ದನ್ವೀರ್, ರಚಿತಾ,ರಕ್ಷಿತಾ ವಿಶೇಷ ಧನ್ಯವಾದ ಅರ್ಪಿಸಿದ ದರ್ಶನ್
ನನ್ನ ಕಷ್ಟ ಸಮಯದಲ್ಲಿ ಸದಾ ನನ್ನೊಂದಿಗೆ ಬೆನ್ನೆಲುಬಾಗಿ ಬೆಂಬಲವಾಗಿ ನಿಂತು ಸಹಕರಿಸಿದ ನಟ ಧನ್ವೀರ್, ನಟಿ ರಚಿತಾ ರಾಮ್, ನಟಿ ಹಾಗೂ ನಿರ್ಮಾಪಕಿ ರಕ್ಷಿತಾ ಅವರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ಯಾವುದೇ ಊಹಾಪೋಗಳಿಗೆ ಕಿವಿಗೊಡಬೇಡಿ ನಿರ್ಮಾಪಕ ಸೂರಪ್ಪ ಬಾಬು ರವರಿಗೆ ಹಣ ಹಿಂದಿರುಗಿಸಿರುವುದು ಸತ್ಯ , ಅವರಿಗೆ ಅನೇಕ ಕಮಿಟ್ಮೆಂಟ್ ಇದ್ದ ಕಾರಣ ನಮ್ಮಿಂದ ತೊಂದರೆಯಾಗಬಾರದೆಂದು ಹಣ ಹಿಂದಿರುಗಿಸಿದ್ದೇನೆ , ಮುಂದೆ ಉತ್ತಮ ಕಥೆ ಸಿಕ್ಕಾಗ ಮತ್ತೆ ಸಿನಿಮಾ ಮಾಡುತ್ತೇವೆ. ನಿರ್ದೇಶಕ ಪ್ರೇಮ್ ರವರೊಟ್ಟಿಗೆ ಖಂಡಿತವಾಗಿಯೂ ಸಿನಿಮಾ ಮಾಡಲಾಗುವುದು, ನೆಚ್ಚಿನ ಸೆಲೆಬ್ರಿಟಿಗಳು ನನ್ನ ಕಷ್ಟಕಾಲದಲ್ಲಿ ನನಗೆ ಸಾಕಷ್ಟು ಬೆಂಬಲ ನೀಡಿದ್ದು , ಅವರಿಗೆ ಸದಾ ಆಭಾರಿಯಾಗಿದ್ದೇನೆ , ಆದಷ್ಟು ಬೇಗ ಎಲ್ಲರೂ ಭೇಟಿ ಮಾಡಲಿದ್ದೇನೆ ಎಂದಿದ್ದಾರೆ.
ಕನ್ನಡ ಭಾಷೆ ಬಿಟ್ಟು ಅನ್ಯ ಭಾಷೆಗೆ ಹೋಗುವುದಿಲ್ಲ
ಹೌದು ನಟ ದರ್ಶನ್ ಅನ್ಯ ಭಾಷೆಗಳಲ್ಲಿ ನಟಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ನಟ ದರ್ಶನ್ ತೆರೆ ಎಳೆದಿದ್ದಾರೆ, ನಾನು ಯಾವುದೇ ಅನ್ಯ ಭಾಷೆಗೆ ಹೋಗುವುದಿಲ್ಲ ಕರ್ನಾಟಕ, ಕನ್ನಡ ಭಾಷೆ ನನಗೆ ಸಾಕಷ್ಟು ನೀಡಿದೆ ಎಂದಿದ್ದಾರೆ , ಕಾವೇರಿ ನದಿಯ ಉದಾರಣೆ ನೀಡುತ್ತಾ ಕಾವೇರಿ ಹುಟ್ಟಿರುವ ಕೊಡಗಿನಲ್ಲಿ ನಾನು ಹುಟ್ಟಿದ್ದೇನೆ ಹೇಗೆ ಕಾವೇರಿ ಎಲ್ಲಾ ಅನ್ಯ ರಾಜ್ಯಗಳಲ್ಲಿ ಹರಿಯುತ್ತದೆಯೋ ಹಾಗೆ ನನ್ನ ಸಿನಿಮಾ ಡಬ್ ಆಗಿ ಹೋಗುತ್ತದೆ ಆದರೆ ನಾನು ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.