
ಈಗಾಗಲೇ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆ ರಂಗೇರಿದ್ದು ಕಣದಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಬಿ. ಸಿ. ಆನಂದ್ ಕುಮಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಟಿ ಆನಂದ್ ಕಣದಲ್ಲಿ ಇದ್ದಾರೆ. ಗೆಲುವು ಸಾಧಿಸಲು ಬೇಕಿರುವ ಎಲ್ಲಾ ತಂತ್ರಗಾರಿಕೆಯನ್ನು 3 ಪಕ್ಷಗಳು ಮಾಡುತ್ತಿದೆ.
ಆದರೆ ಜೆಡಿಎಸ್ ಪಕ್ಷ ನಿಷ್ಠೆ ಮರೆತ ಕೆಲ ಮುಖಂಡರು,ನಾಯಕರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಕೆಲಸ ಮಾಡಲು ಮುಂದಾಗಿರುವುದು ಶೋಚನಿಯ ಸಂಗತಿಯಾಗಿದೆ ಎಂದು ದೇವನಹಳ್ಳಿ ಜೆಡಿಎಸ್ ಪಕ್ಷದ ವಕ್ತರ ಹಳ್ಳಿ ರೈತ ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಬೇಷರತ್ತಾಗಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ, ಆದರೆ ತೂಬಗೆರೆ ಹೋಬಳಿ ಹಾಗೂ ತಾಲ್ಲೂಕಿನ ಕೆಲ ಜೆಡಿಎಸ್ ಮುಖಂಡರು ಪಕ್ಷ ನಿಷ್ಠೆ ಮರೆತು ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಹಾಗೂ ಮಾತಯಾಚನೆ ಮಾಡುತ್ತಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವುಂಟುಮಾಡಿದೆ ಎಂದರು.
ಮಾಜಿ ಬಮೂಲ್ ನಿರ್ದೇಶಕರಾದ ದಿ. ಅಪ್ಪಯ್ಯಣ್ಣ ನವರು ಜೇವಿತ ಕಾಲದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಬಮೂಲ್ ನಿರ್ದೇಶಕರನ್ನಾಗಿ ಮಾಡಬೇಕೆಂಬ ಆಶಯ ವ್ಯಕ್ತ ಪಡಿಸಿದ್ದರು, ಅವರ ಆಸೆಯಂತೆ ನಾವೆಲ್ಲರೂ ನಮ್ಮ ಪಕ್ಷದ ಅಭ್ಯರ್ಥಿ ಹುಸ್ಕೂರ್ ಆನಂದ್ ರವರನ್ನು ಗೆಲ್ಲಿಸುವ ಪಣ ತೊಟ್ಟು ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ ಪಕ್ಷದ ಕೆಲ ಪ್ರಮುಖರು ಪಕ್ಷದಲ್ಲೇ ಇದ್ದು ಪಕ್ಷ ವಿರೋಧಿ ಚಟುವಟಿಕೆಗೆ ಮುಂದಾಗಿರುವುದು ಗಮನಕ್ಕೆ ಬಂದಿದೆ, ಈ ಕುರಿತು ಪಕ್ಷದ ಮಾನ್ಯ ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕಿನ ಮುಖಂಡರು ಶೀಘ್ರ ಗಮನ ಹರಿಸಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಅಲ್ಲದೇ ನಮ್ಮ ನಾಯಕರಾದ ದಿ. ಅಪ್ಪಯ್ಯಣ್ಣನವರ ಆಸೆ ಪೂರೈಸಲು ಇದೊಂದು ಉತ್ತಮ ಅವಕಾಶವಾಗಿದ್ದು, ಜೆಡಿಎಸ್ ಪಕ್ಷದ ಬಂದುಗಳು ಈ ಸಮಯದಲ್ಲಿ ಪಕ್ಷ ನಿಷ್ಠೆ ಮರೆತುಹೋಗದೆ ಜೆಡಿಎಸ್ ಪರ ಶ್ರಮಿಸುವ ಮೂಲಕ ಗೆಲುವಿಗೆ ಕಾರಣರಾಗಬೇಕೆಂದು ಮನವಿ ಮಾಡಿದ್ದಾರೆ.
ಇದೆಲ್ಲವನ್ನು ಗಮನಿಸುತ್ತಿದ್ದಾರೆ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಆನಂದ್ ರವರನ್ನು ಸೋಲಿಸಲು ಸ್ವಪಾಕ್ಷಿಯಾರಿಂದಲೇ ಹುನ್ನಾರ ನೆಡೆಯುತ್ತಿದೆಯೇ ಎಂಬ ಸಂದೇಹ ಸಾಮಾನ್ಯವಾಗಿ ಸಾಮಾಜಿಕವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.