
ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಕೆಲ ಗೊಂದಲಗಳಿದ್ದ ಕಾರಣ ದೊಡ್ಡಬಳ್ಳಾಪುರ ಮತ ಕ್ಷೇತ್ರದ ಎಣಿಕೆಯನ್ನು ನ್ಯಾಯಾಲಯದ ತೀರ್ಪಿನ ಬಳಕ ನಡೆಸಲಾಗುವುದು ಎಂದು ತಿಳಿಸಲಾಗಿತ್ತು
ಆದರೆ ಇದೀಗ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮತ ಎಣಿಕೆ ಮಾಡಲು ಮುಂದಾಗಿ, ಅಭ್ಯರ್ಥಿಗಳು, ಏಜೆಂಟ್‌ಗಳನ್ನು ಮತ್ತೆ ಬರುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ, ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಿಂತಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅತಿ ಕುತೂಹಲ ಮೂಡಿಸಿದ್ದ ಬಮೂಲ್ ನಿರ್ದೇಶಕರ ಚುನಾವಣೆ ಯಲ್ಲಿ ವಿಜಯಮಾಲೆ ಯಾರ ಪಾಲು ಎಂಬುದು ಕಾದುನೋಡಬೇಕಾಗಿದೆ.