
ದೊಡ್ಡಬಳ್ಳಾಪುರ : ತಾಲ್ಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾಡುಕುಂಟೆ ಗ್ರಾಮದ ರೈತ ಸುದರ್ಶನರೆಡ್ಡಿ ಅವರು, ತಮ್ಮ ಜಮೀನಲ್ಲಿ ಮನೆ ನಿರ್ಮಿಸಿ ಪ್ರಥಮ ಬಾರಿಗೆ ರೇಷ್ಮೇ ಸಾಕಿದ್ದರು. ಆದರೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ 7 ರಿಂದ 8 ಲಕ್ಷ ಮೌಲ್ಯದ ರೇಷ್ಮೆ ಗೂಡು ಬೆಂಕಿಗೆ ಅವುತಿಯಾಗಿದೆ ಇದೇರೀತಿ
ಮತ್ತೊಂದು ಹೊಸಹಳ್ಳಿ ಪಂಚಾಯತಿ ವ್ಯಾಪ್ತಿಯ ಕುಕ್ಲಹಳ್ಳಿ ಗ್ರಾಮದ ಮಂಜುನಾಥ್ ಎಂಬುವವರಿಗೆ ಸೇರಿದ ಸುಮಾರು 8 ರಿಂದ 10 ಲೋಡ್ ಜೋಳದ ಮೇವಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಸಂಪೂರ್ಣ ಮೇವು ಸುಟ್ಟು ಭಸ್ಮವಾಗಿದೆ
ಈ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ನಷ್ಟಕ್ಕೆ ಒಳಗಾದ ರೈತರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರೇಷ್ಮೆ ಕಳೆದು ಕೊಂಡವರಿಗೆ 25 ಸಾವಿರ ರೂಗಳ ಆರ್ಥಿಕ ನೆರವು ನೀಡುವ ಭರವಸೆ ನೀಡಿ , ಬಣವೇ ಕಳೆದುಕೊಂಡವರಿಗೆ ಮೂರು ಲೋಡ್ ಮೇವನ್ನು ವ್ಯವಸ್ಥೆ ಮಾಡುವಂತೆ ಸ್ಥಳೀಯ ಬೆಂಬಲಿಗರಿಗೆ ಸೂಚಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಿಡಿಗೇಡಿಗಳ ಕಾಟ ಹೆಚ್ಚಾಗಿದ್ದು, ಸಾವು ನೋವಿಗೆ ಕೊನೆಯೇ ಇಲ್ಲದಂತಾಗಿದೆ. ಸಣ್ಣ ಪುಟ್ಟ ಕಾರಣಕ್ಕೆ ಕೊಲೆ, ಹಲ್ಲೆ ನಡೆಯುತ್ತಿದ್ದು,ದುಷ್ಕರ್ಮಿಗಳು ಮೂಕ ಗೋವುಗಳು ತಿನ್ನುವ ಮೇವಿಗೆ ಬೆಂಕಿ ಹಚ್ಚಿರುವುದು ಶೋಚನೀಯ ಸಂಗತಿ ಇನ್ನೂ ಈ ಕುರಿತು ದೂರು ನೀಡಿದರು ಕ್ರಮಕೈಗೊಳ್ಳದೆ ಇರುವುದು ಬೇಸರ ವಿಚಾರ, ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕೆಂದು ಹರೀಶ್ ಗೌಡ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಾರಾಯಣಪ್ಪ, ಶಾಂತಿನಗರ ಪ್ರವೀಣ್, , ಶ್ರೀನಿವಾಸ್, ಅಜ್ಜಪ್ಪ, ಗಂಗಾಧರ್, ತಿಪ್ಪರಾಜು, ಲಕ್ಷ್ಮೀಕಾಂತ್ ಮತ್ತಿತರರಿದ್ದರು.