
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜೀವ್ ಗಾಂಧಿ ಬಡಾವಣೆಯಲ್ಲಿ ಅಜಾಕ್ಸ್ ಕಂಪನಿಯ ವತಿಯಿಂದ ಸಿಎಸ್ಆರ್ ಅನುದಾನದ ಅಡಿಯಲ್ಲಿ ನಿರ್ಮಾಣವಾಗಿರುವ ನೂತನ ಚಿಣ್ಣರ ಚಿಲಿಪಿಲಿ (ಅಂಗನವಾಡಿ ಕಟ್ಟಡ ) ಉದ್ಘಾಟನೆಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ನೆರವೇರಿಸಿದರು
ನೂತನ ಕಟ್ಟಡವನ್ನು ಪುಟಾಣಿ ಮಕ್ಕಳೊಂದಿಗೆ ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ಶಾಸಕರಾದ ಧೀರಜ್ ಮುನಿರಾಜು ಮಾತನಾಡಿ ಪ್ಲೇಹೊಮ್ ರೀತಿಯಲ್ಲಿ ಚಿಣ್ಣರ ಚಿಲಿಪಿಲಿ ನಿರ್ಮಿಸಿರುವ ಅಜಾಕ್ಸ್ ಕಂಪನಿಗೆ ಅಭಿನಂದನೆ ಅರ್ಪಿಸುತ್ತೇನೆ ನಗರ ಸಭೆಯ ಒಂದೇನೆ ವಾರ್ಡ್ ನಲ್ಲಿಂದು ಉತ್ತಮ ಪ್ರಾರಂಭ ವಾಗಿದ್ದು ಮುಂದೆ ತಾಲ್ಲೂಕಿನ ಪ್ರತಿ ವಾರ್ಡ್ ಗಳಲ್ಲಿ ಈ ರೀತಿಯ ಅಭಿವೃದ್ದಿ ಸಾಗಲಿ ಎಂದು ಹಾರೈಸಿದರು ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಪೂರ್ವ ಶಿಕ್ಷಣ ಸರಿಯಾಗಿ ಸಿಗುತ್ತಿಲ್ಲ ಈ ಕುರಿತಾಗಿ ವಿಧಾನಸಭೆಯಲ್ಲಿ ಮಾಡುತ್ತೇನೆ ಶಾಸಕ ತಾಲ್ಲೂಕಿನ ದ್ವನಿ ನಿಮ್ಮೆಲ್ಲರ ದ್ವನಿಯಾಗಿ ತಾಲ್ಲೂಕಿನ ಏಳಿಗೆಗೆ ಶ್ರಮಿಸುತ್ತೇನೆ ಈ ಬಾರಿ ಸದನದ ಕಲಾಪದಲ್ಲಿ ಈ ಕುರಿತು ಮಾತನಾಡುತ್ತೇನೆ ಅಜಾಕ್ಸ್ ಕಂಪನಿ ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆ ಉದ್ಯಮದ ಜೊತೆ ಜೊತೆಗೆ ಸಮಾಜ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ . ತಾಲ್ಲೂಕಿನಲ್ಲಿ 350 ರಿಂದ 400 ಅಂಗನವಾಡಿಗಳಿದ್ದು ನಿಮ್ಮ ಸೇವೆ ಸದಾ ನಮಗೆ ಸಿಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಅಜಾಕ್ಸ್ ಕಂಪನಿಯ ಪ್ರತಿನಿಧಿ ಮಂಜುನಾಥ್ ಮಾತನಾಡಿ ಕಂಪನಿಯ ಸಿಎಸ್ಆರ್ ಅನುದಾನದಾಡಿಯಲ್ಲಿ ಚಿಣ್ಣರ ಚಿಲಿಪಿಲಿ ಪ್ರಾರಂಭ ಮಾಡಲಾಗಿದೆ .ತಾಲ್ಲೂಕಿನ ನಗರ ಕೆರೆ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ್ದು ಕೆರೆಯ ಉಳೆತ್ತುವ ಕಾರ್ಯ ಮಾಡಿದ್ದೇವೆ . ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು ನಮ್ಮ ಅಜಾಕ್ಸ್ ಕಂಪನಿಯ ಉದ್ದೇಶವಾಗಿದೆ ಯುವಕರಿಗೆ ಅನುಕೂಲವಾಗುವ ರೀತಿ ತರಬೇತಿ ಆಯೋಜನೆ ಮಾಡುವಲ್ಲಿ ನಾವು ಮುಂದಾಗಿದ್ದೇವೆ .ತಾಲ್ಲೂಕಿನ ಜನತೆಯ ಸೇವೆಗಾಗಿ ಸಾರ್ವಜನಿಕ ಆಸ್ಪತ್ರೆ ಮುಂಬಾಗ ನೂತನವಾಗಿ ಸುಸರ್ಜ್ಜಿತ ಓಪಿಡಿ ಕಟ್ಟಡದ ಸಿದ್ದತೆ ಸಾಗುತ್ತಿದ್ದು ಸದ್ಯದಲ್ಲೇ ಆ ಸೇವೆಯು ತಾಲ್ಲೂಕಿನ ಜನತೆಯ ಕೈ ಸೇರಲಿದೆ , ತಾಲ್ಲೂಕಿನ ಜನತೆಯ ಜೀವ ಉಳಿಸಲು ರಕ್ತನಿಧಿ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಉತ್ತಮ ಸಮಾಜಕ್ಕಾಗಿ ನಮ್ಮ ಶ್ರಮ ತಾಯಂದಿರು ಮಕ್ಕಳ ಮನಸ್ಸಿನಲ್ಲಿ ಉತ್ತಮ ಗುರಿಯನ್ನು ಬಿತ್ತಬೇಕು ಮಕ್ಕಳ ಭವಿಷ್ಯ ತಾಯಿ ಮತ್ತು ಶಿಕ್ಷಕರ ಕೈಯಲ್ಲಿದೆ ಎಂದು ಅಜಾಕ್ಸ್ ಕಂಪನಿಯ ಪ್ರತಿನಿಧಿ ಮಂಜುನಾಥ್ ತಿಳಿಸಿದರು
ಕಾರ್ಯಕ್ರಮದಲ್ಲಿ ಶಾಸಕರಾದ ಧೀರಜ್ ಮುನಿರಾಜು ,ಅಜಾಕ್ಸ್ ಕಂಪನಿಯ ಸಿ ಹೆಚ್ ಆರ್ ಓ ಅಧಿಕಾರಿ ಜೋಸೆಫ್ ಸಿ ಎಸ್ ಆರ್ ಅಧಿಕಾರಿ ಮಂಜುನಾಥ್ ,ನಗರ ಸಭಾ ಅಧ್ಯಕ್ಷರಾದ ಸುಧಾರಾಣಿ ಲಕ್ಷ್ಮೀ ನಾರಾಯಣ ,ನಗರ ಸಭಾ ಸದಸ್ಯರಾದ ಬಂತಿ ವೆಂಕಟೇಶ್ , ಹಂಸ ಪ್ರಿಯ ದೇವರಾಜ್ , ರಮೇಶ್ , ಪತ್ರಕರ್ತರಾದ ವೆಂಕಟರಾಜು , ಮತ್ತಿತರರು ಉಪಸ್ಥಿತರಿದ್ದರು