
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಪಂಚಾಯಿತಿಯಲ್ಲಿ ಚರಂಡಿಗಳು ಕಸದಿಂದ ತುಂಬಿದ್ದು ಪಂಚಾಯಿತಿ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ,ಗ್ರಾಮದ ಸ್ವಚ್ಛತೆ ಕುರಿತಂತೆ ಸ್ಪಂದಿಸದ ಪಂಚಾಯತಿ ಅಭಿವೃದ್ದಿ ಅಧಿಕಾರಿ ಹಾಗೂ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧ ಸ್ಥಳೀಯ ಯುವಕರು ,ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದಾರೆ.
ಸ್ವಚ್ಛತೆ ಕುರಿತು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅರ್ಜಿ ಸಲ್ಲಿಸಲು ತಿಳಿಸುತ್ತಾರೆ ಆದರೆ ನಾವು ನೀಡುವ ಅರ್ಜಿ ಕಸದ ಬುಟ್ಟಿ ಸೇರುತ್ತಿದೆ . ಅಭಿವೃದ್ದಿ ಮತ್ತು ಸ್ವಚ್ಛತೆ ಗ್ರಾಮದಲ್ಲಿ ಕಾಣದಾಗಿದೆ ನಮ್ಮ ನೋವಿಗೆ ಸ್ಪಂದಿಸದ ಪಂಚಾಯತಿ ನಮಗೆ ಬೇಡ ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು
ಗ್ರಾಮದ ಮುಖ್ಯ ರಸ್ತೆಯಲ್ಲಿ ತಮಟೆ ಬಾರಿಸುವ ಮೂಲಕ ಜನ ಜಾಗೃತಿ ಮೂಡಿಸಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವಂತೆ ಪಂಚಾಯಿತಿ ಅಧಿಕಾರಿಗಳನ್ನು ಒತ್ತಾಯಿಸಲಾಯಿತು
ರಾಜಘಟ್ಟ ಗ್ರಾಮದ ದಲಿತ ಕಲೋನಿಗಳು ಸೇರಿದಂತೆ ಗ್ರಾಮದ ಸ್ವಚ್ಛತೆ ಕಾಣೆಯಾಗಿದೆ ಗ್ರಾಮದ ಅಭಿವೃದ್ದಿ ಕುರಿತು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಗ್ರಾಮಸ್ಥರು ನರಳುವಂಥಗಿದೆ ಸ್ವಚ್ಛತೆ ಕುರಿತು ಪ್ರಶ್ನಿಸುವ ಗ್ರಾಮಸ್ಥರಿಗೆ ಸ್ಪಂದಿಸದ ಪಂಚಾಯಿತಿ ನಮಗೆ ಬೇಕಿಲ್ಲ ಗುರುವಾರದವರೆಗೂ ಕಾಲಾವಕಾಶ ನೀಡುತ್ತಿದ್ದು ಸಮಸ್ಯೆ ಬಗೆಹರಿಸದ ಪಕ್ಷದಲ್ಲಿ ಗ್ರಾಮದ ಮಹಿಳೆಯರು ಮಕ್ಕಳನ್ನು ಒಳಗೊಂಡಂತೆ ಸರ್ವ ಗ್ರಾಮಸ್ಥರಿಂದ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ಥಳೀಯರಾದ ರಾಜಘಟ್ಟ ಗಣೇಶ್ ತಿಳಿಸಿದರು
ಗ್ರಾಮದ ಮಹಿಳೆಯರು ಮಾತನಾಡಿ ಗ್ರಾಮದ ಚರಂಡಿಗಳು ಕಸದರಾಶಿಯಿಂದ ತುಂಬಿವೆ ಕೊಳಚೆ ನೀರು ಮನೆಮುಂದೆ ನಿಂತಿದ್ದು ಆರೋಗ್ಯ ಸಮಸ್ಯೆ ಎದುರಾಗಬಹುದು ಎಂಬ ಭಯದಲ್ಲಿ ಜೀವನ ಸಾಗಿಸುವಂಥಾಗಿದೆ ಹಲವು ಗ್ರಾಮಸ್ಥರಿಗೆ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡಿವೆ ನಿಂತ ನೀರಿನಿಂದ ಬರುವ ದುರ್ವಾಸನೆಯಿಂದ ಮನೆಯಲ್ಲಿ ವಾಸ ಮಾಡುವುದು ಕಷ್ಟಕರವಾಗಿದೆ ಪಂಚಾಯಿತಿ ಅಧಿಕಾರಿಗಳು ಕೂಡಲೇ ಸರಿಪಡಿಸಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರಾದ ಪ್ರಮೋದ್ ,ವೇಣು, ಸಾಗರ್, ಆನಂದ್ ,ಪ್ರವೀಣ್, ಮನೋಜ್ ,ವೆಂಕಟೇಶ್, ಭರತ್, ಮಧು, ಸಂದೀಪ್ , ವಿನಯ್ ,ಶ್ರೀನಿವಾಸ್ , ಮಣಿ, ಸಂತೋಷ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು