
ಬೆಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕರಾದ ಟಿ .ಎ. ನಾರಾಯಣ್ ಗೌಡ ಅವರು ಒಂದು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಕನ್ನಡ ಅಭಿಮಾನೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಹಾಗೂ ರಾಜ್ಯದಲ್ಲಿ ವಾಸಿಸುವ ಹೊರ ರಾಜ್ಯದ ವಲಸಿಗರಿಗೆ ಡಿಸೆಂಬರ್ 27ರ ವರೆಗೆ ಇಂಗ್ಲಿಷ್ ನಾಮಪಲಕಗಳನ್ನು ತೆರವು ಗೊಳಿಸಿ 65% ಕನ್ನಡ ಕಡ್ಡಾಯವಾಗಿ ಹೊಂದಿರುವ ನಾಮಫಲಕಗಳನ್ನು ಹಾಕಬೇಕೆಂದು ಎಚ್ಚರಿಕೆ ನೀಡಲಾಗಿತ್ತು
ಈ ಕುರಿತಂತೆ ಇಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕು ಅಧ್ಯಕ್ಷರಾದ ಪುರುಷೋತ್ತಮ್ ಗೌಡ ರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ನೂರಾರು ಕಾರ್ಯಕರ್ತರು ಹೊರಟು ನಾರಯಣಗೌಡರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು
ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡಾ 65 ರಷ್ಟು ಕನ್ನಡ ಬಳಕೆ ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ ಸರ್ಕಾರಿ ಆದೇಶವನ್ನು ಲೆಕ್ಕಿಸದ ವ್ಯಾಪಾರಸ್ಥರ ,ಹಾಗೂ ಕನ್ನಡ ಭಾಷೆಯನ್ನು ಗೌರವಿಸದ ಕೆಲ ಉದ್ಯಮಿಗಳ ವಿರುದ್ಧ ನಮ್ಮ ಹೋರಾಟ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮಾರ್ವಡಿಗಳಿಗೂ ಎಚ್ಚರಿಕೆ ನೀಡಲಾಗಿದೆ ನಮ್ಮ ನಾಡು ನಮ್ಮ ಭಾಷೆ ಮೊದಲು ಎಂದು ಕರ್ನಾಟಕ ರಕ್ಷಣಾ ವೇದಿಕೆ( ನಾರಯಣ ಗೌಡ ಬಣ) ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾದ ಪುರುಷೋತ್ತಮ್ ಗೌಡ ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ತಾಲ್ಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ( ನಾರಾಯಣಗೌಡರ ಬಣ) ಯು ಪ್ರಬಲವಾಗಿ ಬೆಳೆಯುತ್ತಿದ್ದು ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ಒಳಗೊಂಡಿರುವ ಸಂಘಟನೆ ತಾಲ್ಲೂಕಿನ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಮಳಿಗೆಗಳ ಮುಂಭಾಗ ಕನ್ನಡ ನಾಮಫಲಕ ಬಳಸುವಂತೆ ಎಚ್ಚರಿಕೆ ನೀಡಿದೆ ಹೊರರಾಜ್ಯಗಳಿಂದ ಕನ್ನಡನಾಡಿಗೆ ಬಂದು ಇಲ್ಲಿ ಜೀವನ ಕಟ್ಟಿಕೊಂಡಿರುವ ಕೆಲ ವ್ಯಾಪಾರಸ್ಥರಿಗೆ ನಮ್ಮ ಕನ್ನಡ ಭಾಷೆ ಎಂದರೇ ತಾತ್ಸಾರ ಮನೋಭಾವ ನಮ್ಮ ನಾಡಿನ ಮೂಲಭೂತ ಸೌಕರ್ಯಗಳನ್ನು ಸರಕಾರಿ ಸವಲತ್ತುಗಳನ್ನು ಯಾವುದೇ ಮುಜುಗರವಿಲ್ಲದೆ ಬಳಸುವ ಇವರಿಗೆ ನಮ್ಮ ಭಾಷೆ ಎಂದರೇ ಬೇಜವಾಬ್ದಾರಿ ಅಸಡ್ಡೆ ಈ ವರ್ತನೆ ಬದಲಾಗಬೇಕಿದೆ ಇಲ್ಲವಾದಲ್ಲಿ ಮುಂದೆ ಇದರ ಪ್ರತಿಫಲವಾಗಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಪುಟ್ಟೇಗೌಡ, ಮಹಿಳಾ ರಾಜ್ಯ ಉಪಾಧ್ಯಕ್ಷರಾದ ಅನ್ನಪೂರ್ಣ, ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟರಾಜು, ಮಹಿಳಾ ಘಟಕದ ಗೀತಾ ,ಶೋಭಾ, ರೋಜಿ ಪುರ ಯುವವಕೀಲರಾದ ಮನು , ಸಂಜೀವ್ ನಾಯಕ್ ಮತ್ತು ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಿದರು