
ಯಲಹಂಕ :ಭಾರತ ದೇಶದ ಸಂಪೂರ್ಣ ಗಡಿ ಭಾಗವನ್ನು ಕಾಯುತ್ತಿರುವುದು ನಮ್ಮ ಅರೇಸೇನಾ ಪಡೆಗಳು ದೇಶದ ನಕ್ಸಲ್ ಹಾಗೂ ಭಯೋತ್ಪಾದನೆ ವಿರುದ್ಧ ನಮ್ಮ ಅರೇಸೇನಾ ಪಡೆಗಳು ಶ್ರಮಿಸುತ್ತಿದ್ದು ವಾಘಗಡಿಯಂತಹ ಸ್ಥಳಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ತಮ್ಮ ತಾಯಿನಾಡಿನಲ್ಲಿ ಜೀವನ ಸಾಗಿಸಲು ಬರುವ ಸಿಬ್ಬಂದಿಗಳು ಇಲ್ಲಿ ಕೇವಲ(ಸೆಕ್ಯೂರಿಟಿ )ಭದ್ರತಾ ಸಿಬ್ಬಂದಿಗಳಾಗಿ ಸೇವೆ ಸಲ್ಲಿಸುವ ಪರಿಸ್ಥಿತಿ ಎದುರಾಗಿದೆ ಸರ್ಕಾರದ ನಿಯಮಗಳ ಪ್ರಕಾರ ಸೈನಿಕ ಎಂಬ ಪರಿಭಾಷೆಯಲ್ಲಿ ನಮ್ಮನ್ನು ಹೊರಗಿಡಲಾಗಿದೆ ಕೇವಲ ಕಂದಾಯ ಇಲಾಖೆಯಲ್ಲಿ ಮಾತ್ರ ನಮ್ಮನ್ನು ಗುರುತಿಸಲಾಗುತ್ತಿದ್ದು ನಮ್ಮ ಅರಸೇನಾ ಪಡೆಗಳ ಕೂಗನ್ನು ಸರ್ಕಾರಕ್ಕೆ ಮುಟ್ಟಿಸುವ ಸಲುವಾಗಿ ಫೆಬ್ರವರಿ 14ರಂದು ಪುಲ್ವಾಮ ದಾಳಿಯಲ್ಲಿ 44 ಯೋಧರು ಮೃತಪಟ್ಟಿರುವ ಕಹಿ ನೆನಪನ್ನು ಭಾವನಾತ್ಮಕವಾಗಿ ಸ್ಮರಿಸುತ್ತಾ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಈ ಸಮಾವೇಶದಲ್ಲಿ ರಾಜ್ಯಾದ್ಯಂತ 17000ಕ್ಕೂ ಹೆಚ್ಚು ಅರಸೇನಾ ಪಡೆಗಳ ಮಾಜಿ ಯೋಧರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ರಾಜಗೋಪಾಲ ತಿಳಿಸಿದರು
ಫೆಬ್ರವರಿ 14ರಂದು ನಡೆಯುವ ಸಮಾವೇಶದ ಹಿನ್ನೆಲೆ ಪೂರ್ವಭಾವಿ ಸಭೆ ನಡೆಸಲಾಯಿತು ಸಭೆಯ ನಂತರ ಮಾತನಾಡಿದವರು ಕಾಲಕಾಲಕ್ಕೆ ಸರ್ಕಾರಗಳು ಬದಲಾಗುತ್ತಿವೆ ಆದರೆ ಅರಸೇನಾ ಪಡೆಗಳ ಬೇಡಿಕೆಗಳನ್ನು ಈಡೇರಿಸುವ ಮನಸ್ಸು ಯಾವ ಸರ್ಕಾರವೂ ಮಾಡಿಲ್ಲ ಎಂಬುದೇ ವಿಪರ್ಯಾಸದ ಸಂಗತಿ ನಮ್ಮ ಅರಸೇನಾಪಡೆಗಳಿಗೆ ಯಾವುದೇ ಅಧಿಕೃತ ಬೋರ್ಡ್ ಹೀಗಾಗಿ ಸೇನಾ ಪಡೆಗಳಿಗೆ ಸಿಗುವ ಸೌಲಭ್ಯಗಳು ನಮ್ಮ ಅರೇಸೇನಾ ಪಡೆಗಳಿಗೆ ಸಿಗುತ್ತಿಲ್ಲ ಸರ್ಕಾರದ ಗಮನ ಸೆಳೆಯಲು ಹಾಗೂ ಯುದ್ಧ ಭೂಮಿಯಲ್ಲಿ ಮೃತಪಟ್ಟ ಯೋಧರಿಗೆ ಗೌರವನ ನಮನ ಸಲ್ಲಿಸಲು ಈ ಸಮಾವೇಶವು ಸಹಕಾರಿಯಾಗಲಿದೆ ಎಂದು ತಿಳಿಸಿದರು
ಕರ್ನಾಟಕ ಸಿಎಪಿಎಫ್ ನ ಅಧ್ಯಕ್ಷರಾದ ನರಸಿಂಹ ರೆಡ್ಡಿ ಮಾತನಾಡಿ ಮಾಜಿ ಯೋಧರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ನಮ್ಮ ಸಂಘ ನೊಂದ ಮಾಜಿ ಯೋಧರ ಧ್ವನಿಯಾಗಿ ಶ್ರಮಿಸಲಿದೆ ದೇಶ ಕಾಯುವ ಯೋಧನಿಗೆ ಸರ್ಕಾರಿ ಸೌಲಭ್ಯಗಳು ಸಿಗದಿರುವುದು ಶೋಚನೀಯ ಸಂಗತಿ ದೇಶದ ರಕ್ಷಣೆಗಾಗಿ ಜೀವ ಸವೆಸಿರುವ ಯೋಧರು ತಮಗೆ ಸರ್ಕಾರದ ವತಿಯಿಂದ ಸಿಗಬೇಕಾಗಿರುವ ಸೌಲಭ್ಯಗಳಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಈ ಸ್ಥಿತಿ ಬದಲಾಗಬೇಕೆಂಬುದೇ ನಮ್ಮೆಲ್ಲರ ಆಶಯ ಹಾಗಾಗಿ ಈ ಬೃಹತ್ ಸಮಾವೇಶದ ಆಯೋಜನೆ ಮಾಡಲಾಗುತ್ತಿದೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಜಿ ಸೈನಿಕರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಸುಮಾರು 17000 ಮಾಜಿ ಯೋಧರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು
ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ಪ ಅವರು ಮಾತನಾಡಿ 2019ನೇ ಇಸವಿಯಲ್ಲಿ ಫೆಬ್ರವರಿ 14ರಂದು ದೇಶ ತನ್ನ 44 ವೀರ ಯೋಧರನ್ನು ಕಳೆದುಕೊಂಡಿತು . ಹುತಾತ್ಮ ಯೋಧರ ನೆನಪಿಗಾಗಿ ಈ ಸಮಾವೇಶವನ್ನು ರೂಪಿಸುತ್ತಿದ್ದು ರಾಜ್ಯಾದ್ಯಂತ ಮಾಜಿ ಯೋಧರು ಒಟ್ಟಾಗಲಿದ್ದೇವೆ. ಹಾಗೂ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಕೂಡ ತಿಳಿಸಿದ್ದೇವೆ ಮುಂದೆ ಮಾಧ್ಯಮಗಳ ಸಹಕಾರದೊಂದಿಗೆ ಮಾಜಿ ಯೋಧರ ಪರ ಶ್ರಮಿಸುವ ಕಾರ್ಯ ಸಂಘದ ಕಾರ್ಯಕಾರಿ ಸಮಿತಿ ವತಿಯಿಂದ ನಡೆಯುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯದ ಹಲವು ಮಾಜಿ ಸೈನಿಕರು ಉಪಸಿತರಿದ್ದರು