
ಪ್ಯಾರಾಮಿಲಿಟರಿ ಮಾಜಿ ಯೋಧರ ವತಿಯಿಂದ ಫೆಬ್ರವರಿ 14 ರಂದು ಪುಲ್ವಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಈ ಬೃಹತ್ ಸಮಾವೇಶವು ಬೆಂಗಳೂರಿನ ಸಿ ಆರ್ ಪಿ ಎಫ್ ಪೆರೇಡ್ ಗ್ರೌಂಡ್ ನಲ್ಲಿ ನೆಡೆಯಲಿದೆ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಕೇಂದ್ರೀಯ ಅರೆಸೇನಾಪಡೆಗಳ ಮಾಜಿ ಯೋಧರ ಕ್ಷೇಮಭಿವೃದ್ಧಿ ಸಂಘದ ರಾಜ್ಯಧ್ಯಕ್ಷರಾದ ನರಸಿಂಹ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತರಾಜಗೋಪಾಲ, ಹಾಗೂ ಹಲವು ಮಾಜಿ ಯೋಧರು ಹೂಗುಚ್ಛ ನೀಡುವ ಮೂಲಕ ಬೃಹತ್ ಸಮಾವೇಶಕ್ಕೆ ಆಹ್ವಾನಿಸಿದರು.
ಈ ಕುರಿತು ಕೇಂದ್ರೀಯ ಅರೇಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ರಾಜಗೋಪಾಲ ಮಾತನಾಡಿ ಈ ಕಾರ್ಯಕ್ರಮವು ವಿಶೇಷವಾಗಿದ್ದು ಪ್ಯಾರಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಿ ಅವರಿಗೆ ಗೌರವ ಸಮರ್ಪಣೆ ಮಾಡುವ ಉದ್ದೇಶ ನಮ್ಮದಾಗಿದೆ. ಸಮಾವೇಶಕ್ಕೆ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪ್ಯಾರಾಮಿಲಿಟರಿಯಲ್ಲಿ ಸೇವೆಸಲ್ಲಿಸಿರುವ 17000ಕ್ಕು ಹೆಚ್ಚು ಮಾಜಿ ಯೋಧರು ಭಾಗವಹಿಸುವ ಸಾಧ್ಯತೆಯಿದ್ದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಮಾಜಿ ಯೋಧರ ಬೃಹತ್ ಸಮಾವೇಶ ಇದಾಗಿದೆ ಕಾರ್ಯಕ್ರಮದಲ್ಲಿ ಮಾಜಿ ಯೋಧರ ಹಲವು ಬೇಡಿಕೆಗಳನ್ನು ಕೂಡ ತಿಳಿಸಲಾಗುವುದು ಹಾಗೂ ಸರ್ಕಾರಕ್ಕೆ ಅರೆಸೇನಾ ಪಡೆಗಳ ಪ್ರತ್ಯೇಕ ಬೋರ್ಡ್ ಸ್ಥಾಪಿಸಲು ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು .
ಈ ಸಮಾವೇಶಕ್ಕೆ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಗಳು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದಂತಹ ಕೆಎಚ್ ಮುನಿಯಪ್ಪ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ ರಾಜ್ಯದ ಪ್ರತಿ ಗಣ್ಯರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನವನ್ನು ನೀಡುತ್ತಿದ್ದು ಕಾರ್ಯಕ್ರಮವು ಅತ್ಯಂತ ಶಿಸ್ತು ಸಂಯಮದಿಂದ ನಡೆಯಲಿದೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕೇಂದ್ರೀಯ ಅರೇಸೇನಾ ಪಡೆಗಳ ಮಾಜಿ ಯೋಧರ ಕ್ಷಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು