
ದೊಡ್ಡಬಳ್ಳಾಪುರ : ನೂರಾರು ವರ್ಷಗಳಿಂದ ಇದ್ದ ಹುಣಸೆ ಮರಗಳ ರಂಬೆ ಕೊಂಬೆಗಳನ್ನು ಕಡಿಯಲಾಗಿದೆ ಶಾಸಕರಿಗೆ ಸೇರಿದೆ ಎನ್ನಲಾದ ಲೇಔಟ್ ನಲ್ಲಿ ಈ ಘಟನೆ ಸಂಭವಿಸಿದ್ದು ಪರಿಸರ ನಾಶ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ ಮರಗಳ ಈ ಸ್ಥಿತಿಕಂಡು ಪರಿಸರ ಪ್ರೇಮಿಗಳು ಆಕ್ರೋಶಗೊಂಡಿದ್ದಾರೆ.
ನಗರದ ಬಸವ ಭವನದ ಸಮೀಪ ಹಾದು ಹೋಗಿರುವ ದಾಬಸ್ ಪೇಟೆ ಹಾಗೂ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ಬೃಹದಾಕಾರವಾದ ಹುಣಸೆ ಮರಗಳು ಇದ್ದು.ಲಾವಣ್ಯ ಶಾಲೆ ಸಮೀಪ ಶಾಸಕರಿಗೆ ಸಂಬಂಧಿಸಿದೆ ಎನ್ನಲಾದ ಲೇಔಟ್ ಮುಂದೆ ಇದ್ದ ಹುಣಸೆ ಮರಗಳ ರೆಂಬೆ ಕೊಂಬೆಗಳ ಕಡಿದು ಮರಗಳ ಅಂದ ಚೆಂದ ಕೆಡಿಸಿದಲ್ಲದೇ ನಗರದ ಸೌಂದರ್ಯವನ್ನು ಹಾಳು ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಈ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹುಣಸೆ ಮರಗಳ ಇರುವದರಿಂದ ಹೆದ್ದಾರಿಗೆ ಒಂದು ರೀತಿಯ ಸೌಂದರ್ಯ ಎದ್ದು ಕಾಣುತ್ತಿತ್ತು. ಬಹಳ ವರ್ಷಗಳಿಂದ ಈ ಮರಗಳು ಯಾರಿಗೂ ಎನೂ ತೊಂದರೆ ಮಾಡಿಲ್ಲ. ಈಗ ತೊಂದರೆ ಮಾಡುತ್ತವೆ ಎಂದು ರೆಂಬೆ ಕೊಂಬೆಗಳಿಗೆ ಕೊಡಲಿ ಹಾಕಿದ್ದಾರೆ ಎಂದು ಪರಿಸರ ಪ್ರೇಮಿ ಚಿದಾನಂದ್ ಮೂರ್ತಿ ಆರೋಪಿಸಿದ್ದಾರೆ.
ಒಳನೋಟಕ್ಕೆ ಲೇಔಟ್ ಗೆ ಈ ಹುಣಸೆ ಮರಗಳು ತೊಂದರೆ ಕೊಡುತ್ತವೆ. ಮರಗಳಿಂದ ಲೇಔಟ್ ನ ಅಂದ ಚೆಂದ ಹಾಳಾಗುತ್ತೆ, ಈ ಮರಗಳು ಅಡ್ಡಿ ಇರುವುದರಿಂದ ಲೇಔಟ್ ಯಾರಿಗೂ ಕಾಣುವುದಿಲ್ಲ ಎಂದು ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ .
ಮೇಲ್ನೋಟಕ್ಕೆ ವಿದ್ಯುತ್ ಲೈನ್ ಗೆ ರೆಂಬೆ ಕೊಂಬೆಗಳು ತಾಕುತ್ತವೆ. ಇದರಿಂದ ಅವಘಡ ಸಂಭವಿಸುತ್ತದೆ ಎಂದು ಹೇಳಿ ಅರ್ಧ ಮರವನ್ನೆ ಕತ್ತರಿಸಲಾಗಿದೆ.
ಅರಣ್ಯ ಇಲಾಖೆಯಿಂದ ಲೇಔಟ್ ಮುಂದಿರುವ ನಾಲ್ಕು ಮರಗಳ ಹತ್ತು ಕೊಂಬೆಗಳನ್ನು ಕಡಿಯಲು ಹಾಗೂ ಎರಡು ಮರಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಕ್ಕೆ ಅನುಮತಿ ಪಡೆದಿದ್ದಾರೆ. ಇದಕ್ಕೂ ಅರಣ್ಯ ಇಲಾಖೆ ಅನುಮತಿ ನೀಡಬಾರದಿತ್ತು. ಅನುಮತಿ ನೀಡಿದ್ದಾರೆಂದರೆ ಅದು ರಾಜಕೀಯ ಪ್ರಭಾವ ಎಂದೇ ಭಾವಿಸಬೇಕಾಗಿದೆ. ತಮ್ಮ ಅಧಿಕಾರ ಬಳಸಿ ಅವೈಜ್ಞಾನಿಕವಾದ ಕೆಲಸವನ್ನು ಕಾನೂನಾತ್ಮಕವಾಗಿ ಮಾಡಲು ಶಾಸಕರು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.