
ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿರುವ ದಲಿತ ಮುಖಂಡ ಅನೀಷ್ ರನ್ನು ಕರ್ನಾಟಕ ಭಾರತೀಯ ಜನತಾ ಪಾರ್ಟಿ ಯ ರಾಜ್ಯ ಸಹಕಾರ ಪ್ರಕೋಷ್ಠ ಸದಸ್ಯ ಓಬದೇನಹಳ್ಳಿ ಡಾ. ಕೆ.ಮುನಿಯಪ್ಪ ಭೇಟಿ ಮಾಡಿ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಅವರು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಮಾಳಗಾಳು ಗ್ರಾಮದ ದಲಿತ ಮುಖಂಡ ಅನೀಷ್ ಎಂಬುವವರನ್ನು ಮನೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಲಾಗಿದ್ದು ಇವರನ್ನು ಇಂದು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ಭೇಟಿಕೊಟ್ಟು ಸಾಂತ್ವನ ಹೇಳಿ ಸಮಾಜ ಕಲ್ಯಾಣ ಇಲಾಖೆಯವರನ್ನ ಭೇಟಿ ಮಾಡಿ ಪರಿಹಾರ ವಿತರಿಸಲು ತಿಳಿಸಿದ್ದೇನೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ದಲಿತ ಕುಟುಂಬದವರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.