
ದೊಡ್ಡಬಳ್ಳಾಪುರ : ಶ್ರೀಲಂಕಾ ಮೂಲದ ವರ್ಲ್ಡ್ ಬುಕ್ ರೆಕಾರ್ಡ್ ಸಂಸ್ಥೆಯು ತಾಲೂಕಿನ ಕೊನಘಟ್ಟ ಗ್ರಾಮದ ಜ್ಯೋತಿಷಿ ಎನ್,ಕೃಷ್ಣ ರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಸತತ ಐದು ವರ್ಷಗಳ ಕಾಲ ನಿರಂತರ ಜ್ಯೋತಿಷ್ಯಶಾಸ್ತ್ರ ಅಭ್ಯಾಸ ಮಾಡಿರುವ ಕೊನಘಟ್ಟ ಎನ್ ಕೃಷ್ಣರವರಿಗೆ ಈ ಗೌರವ ಡಾಕ್ಟರ್ ಲಭಿಸಿದ್ದು, ಸ್ನೇಹಿತರು, ಹಿತೈಷಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಜ್ಯೋತಿಷಿ ಎನ್. ಕೃಷ್ಣ ಮಾತನಾಡಿ ಜ್ಯೋತಿಷ್ಯ ಶಾಸ್ತ್ರ ಎಂಬುದು ವೈಜ್ಞಾನಿಕವಾಗಿ ಗ್ರಹಗಳ ಚಲನೆಯನ್ನು ಆಧರಿಸಿ ಹೇಳುವುದಾಗಿದೆ , ಕೆಲ ಅಲ್ಪಜ್ಞಾನಿಗಳು ನೈಜ ಜ್ಯೋತಿಷ್ಯದ ಉದ್ದೇಶವನ್ನೇ ಬದಲಿಸಿದ್ದಾರೆ ಎಂದರೇ ತಪ್ಪಾಗಲಾರದು, ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯ ಎಂಬುದು ವಾಮಾಚಾರ, ಮೌಡ್ಯತೆಗಳಿಂದ ಕಲುಷಿತಗೊಂಡಿದೆ, ಸಂಪೂರ್ಣ ಜ್ಯೋತಿಷ್ಯ ಜ್ಞಾನ ಹೊಂದಿರುವವರು ಮಾತ್ರ ಸೂಕ್ತ ಹಾಗೂ ನಿಖರ ಜ್ಯೋತಿಷ್ಯ ಹೇಳಲು ಸಾಧ್ಯ , ಜ್ಯೋತಿಷ್ಯ ಎಂಬುದು ಭಯಪಡಿಸುವ ವಿಷಯವಲ್ಲ ಅದೊಂದು ಜ್ಞಾನ ಎಂದರು.
ತಮ್ಮ ಬಾಲ್ಯದಿಂದಲೇ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅತಿಯಾದ ಕುತೂಹಲ ವಿದ್ದ ಕಾರಣ ನಿರಂತರ ಅಭ್ಯಾಸದಿಂದ ಇಂದು ಜ್ಯೋತಿಷ್ಯ ಪಾಂಡಿತ್ಯವನ್ನು ಪಡೆದು ಗೌರವ ಡಾಕ್ಟರೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ , ಈ ಸಾಧನೆ ಹಾದಿಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನಗೆ ಸಹಕರಿಸಿದ ಎಲ್ಲ ಹಿರಿಯರಿಗೆ ಸಹಪಾಠಿಗಳಿಗೆ ಸ್ನೇಹಿತರಿಗೆ ಹಾಗೂ ಹಿತೈಷಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.